ಮಂಗಳೂರು:
ನಿನ್ನೆ ರಿಲೀಸ್ ಆದ ಆಪರೇಷನ್ ಕಮಲದ ಆಡಿಯೋದಲ್ಲಿ ಯಡ್ಡಿಯೂರಪ್ಪ ಶರಣಗೌಡರಿಗೆ ಕರೆ ಮಾಡಿ ಆಫರ್ ಮಾಡಿರುವುದನ್ನು ಇಡೀ ರಾಜ್ಯದ ಮುಂದೆ ಇಟ್ಟಂತಹ ಕುಮಾರಣ್ಣ ಇಂದು ಅದೇ ಆಡಿಯೋ ಟೇಪ್ ಮಿಸ್ಟರಿಗೆ ಹೊಸ ಟ್ವಿಸ್ಟ್ ನೀಡಿದ್ದಾರೆ.
ನಿನ್ನೆ ಬಿಡುಗಡೆಯಾದ ಆಡಿಯೋ ಇದೀಗ ಆರೋಪ, ಪ್ರತ್ಯಾರೋಪಕ್ಕೆ ನಾಂದಿ ಹಾಡಿದೆ. ಏತನ್ಮಧ್ಯೆ ಆಡಿಯೋದಲ್ಲಿ ಮಾತನಾಡಿದ್ದು ಬಿಎಸ್ ವೈ ಅಂತ ನಾನು ಹೇಳಿಲ್ಲ ಎಂದು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಧರ್ಮಸ್ಥಳಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ನಿನ್ನೆ ಬಿಡುಗಡೆ ಮಾಡಿರುವ ಆಡಿಯೋದಲ್ಲಿರುವ ಧ್ವನಿ ಯಾರದ್ದು ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಆಗ್ರಹಿಸುತ್ತೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ