ಶ್ರೇಷ್ಠವಾದ ವಕೀಲ ವೃತ್ತಿಯ ಗೌರವ, ಘನತೆಯನ್ನು ಸಂರಕ್ಷಿಸುವ ಕಾರ್ಯದಲ್ಲಿ ಮುಂದಾಗಿ

ಚಳ್ಳಕೆರೆ

      ಕಳೆದ ಹಲವಾರು ವರ್ಷಗಳಿಂದಲೂ ನ್ಯಾಯಾಂಗ ಇಲಾಖೆ ವೈಶಿಷ್ಟಮಯವಾಗಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಹಲವಾರು ಸಮಸ್ಯೆಗಳಿಗೆ ನ್ಯಾಯಾಂಗ ಇಲಾಖೆ ಪರಿಹಾರವನ್ನು ದೊರಕಿಸಿಕೊಡಲು ಸಫಲವಾಗಿದೆ. ವಿಶೇಷವಾಗಿ ವಕೀಲ ವೃತ್ತಿ ಶ್ರೇಷ್ಠ ಹಾಗೂ ಹೆಚ್ಚಿನ ಗೌರವವನ್ನು ಹೊಂದಿದ ವೃತ್ತಿಯಾಗಿದ್ದು, ಈ ವೃತ್ತಿ ಘನತೆ, ಗೌರವಗಳಿಗೆ ಕುಂದು ಉಂಟಾಗದಂತೆ ಎಲ್ಲಾ ವಕೀಲರು ಜಾಗೃತೆ ವಹಿಸಬೇಕೆಂದು ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಎನ್.ಬಿಲ್ಲಪ್ಪ ತಿಳಿಸಿದರು.

     ಅವರು, ಶುಕ್ರವಾರ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಈಗಾಗಲೇ ಕಳೆದ ಹಲವಾರು ದಶಕಗಳಿಂದ ನ್ಯಾಯಾಂಗ ಇಲಾಖೆ ಅತಿ ಹೆಚ್ಚಿನ ಕಾರ್ಯಬಾರಗಳಿಂದ ಕಾರ್ಯನಿರ್ವಹಿಸುತ್ತಿದೆ.

        ನ್ಯಾಯಾಲಗಳಲ್ಲಿ ಉಳಿದಿರುವ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಹಲವಾರು ಕಾರಣ ಇರಬಹುದು. ಆದರೆ, ವಕೀಲರು ಜಾಣ್ಮೆಯಿಂದ ಕಾರ್ಯನಿರ್ವಹಿಸಿದಲ್ಲಿ ಪ್ರಕರಣಗಳ ವಿಲೇವಾರಿಗೆ ಹೆಚ್ಚು ಸಹಾಯಕವಾಗುತ್ತದೆ.

        ಸಮಾಜದಲ್ಲಿ ಯಾವುದೇ ಹುದ್ದೆಗಳನ್ನು ನಿರ್ವಹಿಸಿದರು. ಸಿಗದಂತಹ ಪ್ರೀತಿ, ವಿಶ್ವಾಸ ಹಾಗೂ ಅಂತಸ್ತು ವಕೀಲ ವೃತ್ತಿಯಲ್ಲಿ ಸಿಗುತ್ತದೆ. ಯಾವುದೇ ಹಂತದಲ್ಲೂ ಯಾರೂ ಸಹ ವಕೀಲ ವೃತ್ತಿಯ ಬಗ್ಗೆ ಹಗುವಾಗಿ ಮಾತನಾಡುವ ಸಂದರ್ಭವೇ ಒದಗಿ ಬಂದಿಲ್ಲ.

        ನ್ಯಾಯಾಲಯದ ಕಾರ್ಯಕಲಾಪಗಳಲ್ಲಿ ಪ್ರತಿಯೊಬ್ಬ ವ್ಯಕೀಲರು ಪ್ರತಿಯೊಂದು ಹಂತದಲ್ಲೂ ಭಾಗವಹಿಸಬೇಕು. ಲಾ ಓದಿದರೆ ಬರುವ ಜ್ಞಾನಕಿಂತ ನ್ಯಾಯಾಲಯದಲ್ಲಿ ನಡೆಯುವ ಕಾರ್ಯಕಲಾಪಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಿದಲ್ಲಿ ಮಾತ್ರ ವೃತ್ತಿಪರತೆ ಹೆಚ್ಚುತ್ತದೆ ಎಂದರು.

       ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲ್ಲೂಕಿನ ವಕೀಲರ ಸಂಘ ಉತ್ತಮ ಕಾರ್ಯನಿರ್ವಹಣೆಯಲ್ಲಿ ಮುಂದಿದೆ. ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಕಾನೂನು ಸಾಕ್ಷರಥ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ವಕೀಲರು ಭಾಗವಹಿಸುವ ಮೂಲಕ ಸಾರ್ವಜನಿಕರಲ್ಲಿ ನ್ಯಾಯಾಂಗ ಇಲಾಖೆಯ ಬಗ್ಗೆ ಜಾಗೃತಿ ಮೂಡಿಸಲು ಸಹಕರಿಸಿದ್ಧಾರೆಂದರು.

       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು ಮಾತನಾಡಿ, ನ್ಯಾಯಾಲಯಗಳ ವಿವಿಧ ಪ್ರಕರಣಗಳ ಕಾರ್ಯಕಲಾಪಗಳು ವಕೀಲ ವೃತ್ತಿಯ ನೈಪುಣ್ಯತೆಯನ್ನು ಹೆಚ್ಚಿಸುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಶ್ರಾಂತ ನ್ಯಾಯಾಧೀಶರು ವೃತ್ತಿಯ ಘನತೆ ಹೆಚ್ಚಿಸುವಲ್ಲಿ ನಿಟ್ಟಿನಲ್ಲಿ ನೀಡಿರುವ ಎಲ್ಲಾ ಮಾರ್ಗದರ್ಶಗಳನ್ನು ಪಾಲಿಸುವ ಭರವಸೆ ನೀಡಿದರು.

          ವಕೀಲರ ಸಂಘದ ಉಪಾಧ್ಯಕ್ಷ ಬೋರಯ್ಯ, ಕಾರ್ಯದರ್ಶಿ ಹನುಮಂತಪ್ಪ, ಹಿರಿಯ ವಕೀಲರಾದ ದೊಡ್ಡರಂಗಪ್ಪ, ಜಿ.ಎಸ್.ಶರಣಪಯ್ಯ, ರಾಜಾರಾಂ, ಹಿರೇಮಧುರೆ ಎಚ್.ಆನಂದಪ್ಪ, ಪ್ರಭಾಕರ, ಟಿ.ತಮ್ಮಣ್ಣ, ಮಧುಮತಿ, ತಿಪ್ಫೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap