ಬೆಂಗಳೂರು
ಸರ್ಕಾರದ ಆದಾಯ ಹೆಚ್ಚಿಸಿಕೊಳ್ಳಲು ಆನ್ಲೈನ್ ಮೂಲಕ ಜನರ ಮನೆ ಬಾಗಿಲಿಗೆ ಮಧ್ಯ ಪೂರೈಸುವ ಮನೆ ಹಾಳು ನಿರ್ಧಾರವನ್ನು ತಕ್ಷಣ ಕೈಬಿಡುವಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.ಈ ಸಂಬಂಧ ಟ್ವಿಟರ್ ಮೂಲಕ ತಮ್ಮ ಆಕ್ಷೇಪ ವ್ಯಕ್ತಪಡಿಸಿರುವ ಅವರು ಕೊರೋನಾ ಸಂಕಷ್ಟದಿಂದಾದ ಲಾಕ್ಡೌನ್ ಮತ್ತಿತರ ಕಾರಣಗಳಿಂದ ಜನರ ಆದಾಯ ಕುಗ್ಗಿ ಹೋಗಿದ್ದು ಇಂತಹ ಸಂದರ್ಭದಲ್ಲಿ ಮನೆಬಾಗಿಲಿಗೆ ಮಧ್ಯ ಪೂರೈಸುವ ಸರ್ಕಾರದ ಯೋಚನೆಯೇ ಅಸಂಬದ್ಧ ಎಂದಿದ್ದಾರೆ.
ಮನೆ ಬಾಗಿಲಿಗೆ ಮಧ್ಯಪೂರೈಸುವ ಹಾಗೂ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯುವ ಪ್ರಸ್ತಾವ ಸರಿಯಲ್ಲ.ಈ ಮಧ್ಯೆ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡುವ ಸಂಬಂಧ ಖಾಸಗಿ ಸಂಸ್ಥೆಯೊಂದಿಗೆ ಸರ್ಕಾರ ನಡೆಸಿರುವ ಮಾತುಕತೆ ಹಾಗೂ ಅಬಕಾರಿ ಇಲಾಖೆ ಆಯುಕ್ತರು ಹೊಂದಿರುವ ಒಲವಿನ ಕುರಿತು ನನ್ನ ಗಮನಕ್ಕೆ ಬಂದಿದೆ.
ಮನೆಬಾಗಿಲಿಗೆ ಮದ್ಯ ಪೂರೈಸುವುದು ಅವಿವೇಕದ ನಿರ್ಧಾರ.ಯಾವ ಕಾರಣಕ್ಕೂ ಇದನ್ನು ಮಾಡಬೇಡಿ.ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರಬೇಡಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ಸಂಪನ್ಮೂಲ ಸಂಗ್ರಹಣೆಯಲ್ಲಿ ಹಿಂದೆ ಬಿದ್ದಿರುವ ಕಾರಣಕ್ಕಾಗಿ ಇಂತಹ ಕ್ರಮಗಳನ್ನು ಕೈಗೊಳ್ಳುವುದು ಯಾವ ಕಾರಣಕ್ಕೂ ಸರಿಯಲ್ಲ.ಒಂದು ವೇಳೆ ಸರ್ಕಾರ ತನ್ನ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯದಿದ್ದರೆ ಉಗ್ರ ಹೋರಾಟಕ್ಕಿಯುವುದು ಅನಿವಾರ್ಯ ಎಂದು ಹೇಳಿದ್ದಾರೆ.
ಕೊರೋನಾ ಸಂಕಷ್ಟದಿಂದ ಜನ ದೈನಂದಿನ ಬದುಕು ನಡೆಸಲೂ ಕಷ್ಟಪಡುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಆನ್ಲೈನ್ ಮೂಲಕ ಮನೆಬಾಗಿಲಿಗೆ ಮದ್ಯ ಪೂರೈಕೆ ಮಾಡುತ್ತೇವೆ ಎನ್ನುವುದು,ಹೊಸತಾಗಿ ಎಂಎಸ್ಐಎಲ್ ಮಳಿಗೆಗಳಿಗೆ ಅನುಮತಿ ನೀಡುವುದು ಯಾವ ದೃಷ್ಟಿಯಿಂದಲೂ ಒಪ್ಪುವ ಮಾತಲ್ಲ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








