ಪೋಲಿಸರಿಂದ ಲಘು ಲಾಠಿ ಜಾರ್ಜ್

0
10

ಜಗಳೂರು :

        ಆಸಗೋಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭೆ ಮುಂದೂಡುವ ವಿಚಾರವಾಗಿ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಗಲಾಟೆ ನಡೆದಿದ್ದು ಪರಿಸ್ಥಿತಿಯನ್ನು ನಿಯಂತ್ರಿಸಲು ಪೋಲಿಸರಿಂದ ಲಘು ಲಾಠಿ ಜಾರ್ಜ್ ಮಾಡಿದ ಘಟನೆ ಜರುಗಿದೆ
ತಾಲೂಕಿನ ಆಸಗೊಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ಬುಧವಾರ ಆಡಳಿತÀ ಮಂಡಳಿಯ ಸಭೆಯನ್ನು ಆಯೊಜಿಸಲಾಗಿತ್ತು .

      ಬೆಳಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿತ್ತು ಆದರೆ ಸಂಘದ ಕಛೇರಿಯ ಬಾಗಿಲಿಗೆ ಬೀಗ ಹಾಕಲಾಗಿದ್ದು ಸಭೆಯನ್ನು ರದ್ದು ಮಾಡಲಾಗಿದೆ ಎಂಬ ಪತ್ರವನ್ನು ಹಂಟಿಸಿಲಾಗಿತ್ತು ಮತ್ತು ಸಭೆ ನಡೆಸ ಬೆಕಾದಂತ ಅಧ್ಯಕ್ಷರು ಹಾಗೂ ಕಾರ್ಯ ದರ್ಶಿ ಇಲ್ಲದ ಕಾರಣ ಸಭೆಯನ್ನು ನಡೆಸ ಬಾರದು ಎಂದು ಒಂದು ಗುಂಪು ವಾದಿಸಿದರೆ ಸಭೆಯನ್ನು ನಡೆಸ ಬೇಕು ಎಂದು ಮಾತ್ತೊಂದು ಗುಂಪು ಒತ್ತಾಯಿಸಿದರು
ಈ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯುತ್ತಿದ್ದಂತೆ ಇರ್ವರನ್ನು ಚದುರಿಸಲು ಡಿವೈಎಸ್ ಪಿ ನಾಗೇಶ್ ಐತಾಳ್ ನೇತೃತ್ವದಲ್ಲಿ ಪೋಲಿಸರು ಲಾಟಿ ಬಿಸಿಗುಂಪುಗಳನ್ನು ಚದುರಿಸಿದರು .

        ಈ ಸಂಘದಲ್ಲಿ 11 ಜನ ಸದಸರ ಬಲ¨ಲವನ್ನು ಹೊಂದಿದ್ದು , ಒಬ್ಬ ಸದಸ್ಯ ಮರಣ ಹೊಂದಿದ್ದು ಇನ್ನು 10 ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ ಈ 10 ಜನಸದಸ್ಯರಲ್ಲಿ 9 ಜನ ಸದಸ್ಯರು ಸಭೆಗೆ ಹಾಜರಿದ್ದು 8 ಜನ ಸದಸ್ಯರು ಸಭೆ ನಡೆಸುವಂತೆ ಒತ್ತಾಯಿಸಿದರೆ ಒಬ್ಬ ಸದಸ್ಯ ಮಾತ್ರ ವಿರೊಧ ವ್ಯಕ್ತ ಪಡಿಸಿದಾಗ ಪರಿಸ್ಥಿಯನ್ನು ಅರಿತ ಅಧಿಕಾರಿಗಳು ಸಭೆಯನ್ನು ಮಾಡಿ ಎಂದು ಸೂಚನೆ ನೀಡಿದಾಗ 8 ಜನ ಸದಸ್ಯರು ಸಭೆ ನಡೆಸಿ ನಾವು ಸಭೆಯನ್ನು ನಡೆಸಿದ್ದೇವೆ ಎಂದು ಹೇಳಿ ಹರಪನಹಳ್ಳಿ ಉಪವಿಭಾಗಧಿಕಾರಿ ಕಛೇರಿಗೆ ತೆರಳಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here