ಬೆಂಗಳೂರು:
ವಿಶ್ವದ ಅತಿ ದೊಡ್ಡ ಚಿನ್ನಾಭರಣಗಳ ರೀಟೇಲ್ ಚೈನ್ ಆಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಜಾಗತಿಕ ವಿಸ್ತರಣಾ ಯೋಜನೆಯಡಿ ಭಾರತದಲ್ಲಿ ಇನ್ನೂ ಎರಡು ಹೊಸ ಶೋರೂಂಗಳನ್ನು ಆರಂಭಿಸಿದೆ. ತಮಿಳುನಾಡಿನ ಕುಂಬಕೋಣಂ ಮತ್ತು ಪಂಜಾಬ್‍ನ ಚಂಡೀಗಢದಲ್ಲಿ ಈ ಎರಡು ಹೊಸ ಶೋರೂಂಗಳು ಆರಂಭಗೊಂಡಿವೆ. ಆನ್‍ಲೈನ್ ಕಾರ್ಯಕ್ರಮದಲ್ಲಿ ಮಲಬಾರ್ ಗ್ರೂಪ್‍ನ ಅಧ್ಯಕ್ಷ ಎಂ.ಪಿ. ಅಹ್ಮದ್ ಅವರು ಈ ಶೋರೂಂಗಳನ್ನು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಲಬಾರ್ ಗ್ರೂಪ್‍ನ ಹಿರಿಯ ನಿರ್ದೇಶಕರು ಮತ್ತು ಆಡಳಿತ ಮಂಡಳಿ ತಂಡದ ಸದಸ್ಯರು ಇದ್ದರು. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಲಬಾರ್ ಗ್ರೂಪ್ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಂಪೂರ್ಣವಾಗಿ ಸುಸಜ್ಜಿತವಾದ ಶೋರೂಂಗಳನ್ನು ಆರಂಭಿಸಲು ನಿರ್ಧರಿಸಿತ್ತು. ಈ ಮೂಲಕ ಮಾರುಕಟ್ಟೆಯಲ್ಲಿ ರಚನಾತ್ಮಕವಾದ ರೀತಿಯಲ್ಲಿ ಬ್ರ್ಯಾಂಡ್‍ನ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿತು. ವಿಸ್ತರಣೆ ಯೋಜನೆಯಡಿ ಆರಂಭಿಸಲಾಗಿರುವ ಈ ಶೋರೂಂಗಳಲ್ಲಿ ಎಲ್ಲಾ
ರೀತಿಯ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮಲಬಾರ್ ಗೋಲ್ಡ್ & ಡೈಮಂಡ್ಸ್ ಚಿನ್ನಾಭರಣಗಳ ರೀಟೇಲ್ ವ್ಯವಹಾರದಲ್ಲಿ 27 ಯಶಸ್ವಿ ವಸಂತಗಳನ್ನು ಪೂರೈಸಿದ್ದು, ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಕಂಪನಿಯು ಜಗತ್ತಿನಾದ್ಯಂತ 260 ಕ್ಕೂ ಹೆಚ್ಚು ಶೋರೂಂಗಳನ್ನು ಹೊಂದಿದ್ದು, ಆಭರಣಗಳ ತಯಾರಿಕೆಯಲ್ಲಿ ತನ್ನದೇ ಸ್ಥಾನವನ್ನು ಹೊಂದಿದೆ. ಭಾರತದಲ್ಲಿ ಕೊಲ್ಕತ್ತಾ, ಹೈದ್ರಾಬಾದ್, ಬೆಂಗಳೂರು, ಮುಂಬೈ ಮತ್ತು ಕೊಯಮತ್ತೂರಿನಲ್ಲಿ ಆಭರಣ ತಯಾರಿಕಾ ಘಟಕಗಳನ್ನು ಹೊಂದಿದೆ. ಇದಲ್ಲದೇ, ಯುಎಇ, ಸೌದಿ ಅರೇಬಿಯಾ, ಕತಾರ್ ಮತ್ತು ಒಮನ್‍ನಲ್ಲಿಯೂ ಆಭರಣ ತಯಾರಿಕಾ ಘಟಕಗಳನ್ನು ಹೊಂದಿದೆ.
ವೈವಿಧ್ಯಮಯವಾದ ಉತ್ಪನ್ನಗಳ ಶ್ರೇಣಿ ಮತ್ತು ನಾವೀನ್ಯತೆಯ ವಿನ್ಯಾಸಗಳಿಂದಾಗಿ ಮಲಬಾರ್ ಗೋಲ್ಡ್ ಸ್ಪರ್ಧೆಯಲ್ಲಿ ತನ್ನದೇ ಆದ ಖ್ಯಾತಿಯನ್ನು ಗಳಿಸಿದೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ ಬಿಹಾರದ ಪಾಟ್ನ, ತೆಲಂಗಾಣದ ಕಮ್ಮಂ, ಉತ್ತರಪ್ರದೇಶದ ಲಕ್ನೋ ಮತ್ತು ಗಾಝಿಯಾಬಾದ್, ಮಹಾರಾಷ್ಟ್ರದ ಥಾಣೆ ಮತ್ತು ವಾಶಿ, ಹೊಸ ದೆಹಲಿಯ ದ್ವಾರಕ, ಮಧ್ಯಪ್ರದೇಶದ ಇಂದೋರ್, ಕರ್ನಾಟಕದ ಮಲ್ಲೇಶ್ವರಂ ಮತ್ತು ಕಮ್ಮನಹಳ್ಳಿ, ಒರಿಸ್ಸಾದ ಭುವನೇಶ್ವರ ಮತ್ತು ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಈ ವರ್ಷ ಹೊಸ ಶೋರೂಂಗಳನ್ನು ಆರಂಭಿಸಲಿದೆ. ವಿಸ್ತರಣೆಯ ಮೊದಲ ಹಂತದಲ್ಲಿ ಕಂಪನಿಯು ಮಲೇಷ್ಯಾ, ಬಾಂಗ್ಲಾದೇಶ, ಸಿಂಗಾಪೂರ, ಯುಎಇ, ಸೌದಿ ಅರೇಬಿಯಾ ಮತ್ತು ಕತಾರ್‍ನಲ್ಲಿಯೂ ಶೋರೂಂಗಳನ್ನು ಆರಂಭಿಸುವ ಯೋಜನೆಯನ್ನು ಹೊಂದಿದೆ.
ಈ ಬಗ್ಗೆ ಮಾತನಾಡಿದ ಮಲಬಾರ್ ಗ್ರೂಪ್‍ನ ಅಧ್ಯಕ್ಷ ಎಂ.ಪಿ.ಅಹ್ಮದ್, “ಶೋರೂಂಗಳ ಸಂಖ್ಯೆ ಮತ್ತು ಮಾರಾಟದಲ್ಲಿ ನಾವು ವಿಶ್ವದ ನಂಬರ್ ಒನ್ ಚಿನ್ನಾಭರಣದ ರೀಟೇಲ್ ಬ್ರ್ಯಾಂಡ್ ಆಗಿ ಹೊರಹೊಮ್ಮುವ ಯೋಜನೆಯನ್ನು ಹೊಂದಿದ್ದೇವೆ. ಈ ಯೋಜನೆಯ ಭಾಗವಾಗಿ ಮುಂದಿನ ಐದು ವರ್ಷಗಳಲ್ಲಿ ನಮ್ಮ ಶೋರೂಂಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಲಿದ್ದೇವೆ’’ ಎಂದು ತಿಳಿಸಿದರು.
“ಕೋವಿಡ್-19 ಹಿನ್ನೆಲೆಯಲ್ಲಿ ನಾವು ನಮ್ಮ ಶೋರೂಂಗಳಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೇವೆ. ವೈವಿಧ್ಯಮಯ ಉತ್ಪನ್ನ ಶ್ರೇಣಿ, ಅತ್ಯಾಕರ್ಷಕವಾದ ವಿನ್ಯಾಸ ಮತ್ತು ಮಾರಾಟದ ನಂತರದಲ್ಲಿ ಲಭ್ಯವಾಗುವ ಅಭೂತಪೂರ್ವ ಸೇವೆಗಳ ಹಿನ್ನೆಲೆಯಲ್ಲಿ ನಮ್ಮ ಬ್ರ್ಯಾಂಡ್ ಜಾಗತಿಕ ಮಟ್ಟದಲ್ಲಿ ಗ್ರಾಹಕರನ್ನು ಹೊಂದಿದೆ ಮತ್ತು ನೆಚ್ಚಿನ ಬ್ರ್ಯಾಂಡ್ ಆಗಿದೆ’’ ಎಂದು ಅವರು ಹೇಳಿದರು.
ಮಲಬಾರ್ ಗೋಲ್ಡ್ & ಡೈಮಂಡ್ಸ್‍ನ ಭಾರತದಲ್ಲಿನ ಕಾರ್ಯಾಚರಣೆಗಳ ವ್ಯವಸ್ಥಾಪಕ ನಿರ್ದೇಶಕ ಒ.ಆಶರ್ ಅವರು ಮಾತನಾಡಿ, “ನಮ್ಮ ಪಾರದರ್ಶಕವಾದ ವ್ಯಾಪಾರದಿಂದಾಗಿ ನಾವು ಲಕ್ಷಾಂತರ ಗ್ರಾಹಕರ ವಿಶ್ವಾಸವನ್ನು ಗಳಿಸಿದ್ದೇವೆ. ನಾವು ನಮ್ಮ ಶೋರೂಂಗಳಲ್ಲಿ ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆಗಳು ಮತ್ತು ಸೌಲಭ್ಯಗಳನ್ನು ನೀಡುತ್ತಿದ್ದೇವೆ’’ ಎಂದರು.
ಮಲಬಾರ್ ಗೋಲ್ಡ್ & ಡೈಮಂಡ್ಸ್ ಎಲ್ಲಾ ವಯೋಮಾನದವರಿಗೆ, ಎಲ್ಲಾ ಕಾಲಕ್ಕೂ ಹೊಂದಿಕೆಯಾಗುವಂತಹ ಚಿನ್ನಾಭರಣಗಳನ್ನು ನೀಡುತ್ತದೆ. ಜೀವನಪರ್ಯಂತ ಉಚಿತ ಮೇಂಟೇನೆನ್ಸ್, ಉತ್ಪನ್ನಗಳಿಗೆ ಒಂದು ವರ್ಷದ ಉಚಿತ ವಿಮೆ, ಬೈ-ಬ್ಯಾಕ್ ಗ್ಯಾರಂಟಿ, ವಿನಿಮಯದಲ್ಲಿ ಯಾವುದೇ ಕಡಿತ ಇಲ್ಲದಿರುವುದು ಮತ್ತು ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಸೇರಿದಂತೆ ಇನ್ನೂ ಹಲವಾರು ವಿಶ್ವದರ್ಜೆಯ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಇದಲ್ಲದೇ, ಹಳೆಯ ಚಿನ್ನಾಭರಣ ಮಾರಾಟ/ವಿನಿಮಯದ ವೇಳೆ ಗರಿಷ್ಟ ಮಟ್ಟದ ಮೌಲ್ಯವನ್ನು ನೀಡುತ್ತದೆ. ಅಲ್ಲದೇ, ಗ್ರಾಹಕರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಂಪನಿಯು ಶೇ.10ರಷ್ಟು ಅಡ್ವಾನ್ಸ್ ಬುಕಿಂಗ್ ಸೌಲಭ್ಯವನ್ನೂ ನೀಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
