ಬ್ಯಾಂಕ್ ಗಳ ಮುಂದೆ ಮಂಡಿಯೂರಿದ ಮಲ್ಯ….!!!!?

ನವದೆಹಲಿ: 
        ಸಾಲ ದೊರೆ ಎಂದೇ ಈಗ ಖ್ಯಾತರಾದ ಮಲ್ಯ ತಾನು ತಲೆ ಮರೆಸಿಕೊಂಡಿರುವ ಸುಸ್ತಿದಾರ ಎಂದು ಮಾಧ್ಯಮದವರು ಹೇಲುವುದು ಸರಿಯಲ್ಲ ನಾನು ಈಗಲೂ ಶೇ.100 ರಷ್ಟು ಸಾಲದ ಮೂಲ ಮೊತ್ತವನ್ನು ಮರುಪಾವತಿ ಮಾಡಲು ನಾಆನು ಸಿದ್ದನಿದ್ದು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ. 
        ಸರಣಿ ಬಾಂಬ್ ಸ್ಪೋಟದ ರೀತಿಯಲ್ಲಿ  ಟ್ವೀಟ್ ಮಾಡುವ ಮೂಲಕ ವಿಜಯ್ ಮಲ್ಯ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇಂದು ಹೆಚ್ಚಿರುವ ಎಟಿಎಫ್ ಬೆಲೆಯಿಂದ ವಿಮಾನಯಾನ ಸಂಸ್ಥೆಗಳು ನಷ್ಟ ಎದುರಿಸುತ್ತಿವೆ. ಕಿಂಗ್ ಫಿಶರ್ ವಿಮಾನ ಸಂಸ್ಥೆ ಪ್ರತಿ ಬ್ಯಾರೆಲ್ ಗೆ 140 ಡಾಲರ್ ಇದ್ದಾಗ ಸಂಕಷ್ಟ ಎದುರಿಸುತ್ತಿತ್ತು .ಇದರಿಂದ ಉಂಟಾದ ನಷ್ಟ ಭರಿಸಲೆಂದು ಬ್ಯಾಂಕ್ ನಿಂದ ಪಡೆದ ಸಾಲದ ಹಣ ಪೂರ್ತಿ ವ್ಯಯವಾಗಿತ್ತು ಎಂದು ಸಮಜಾಯಿಶಿ ನೀಡಿದ್ದಲ್ಲದೇ. ತಾನು ಈಗ ಶೇ.100 ರಷ್ಟು ಅಸಲು ಹಣವನ್ನು ಬ್ಯಾಂಕ್ ಗಳಿಗೆ ಮರುಪಾವತಿ ಮಾಡಲು ಸಿದ್ಧನಿದ್ದೇನೆ ದಯವಿಟ್ಟು ತೆಗೆದುಕೊಳ್ಳಿ” ಎಂದು ವಿಜಯ್ ಮಲ್ಯ ಬ್ಯಾಂಕ್ ಗಳ ಬಳಿ ಅಂಗಲಾಚುತ್ತಿದ್ದೇನೆ ಎಂದು ತಿಳಿಸಿದ್ದಾರೆ ಮತ್ತು ಅವರೇ ಮಾಡಿರುವ ಟ್ವೀಟ್ ಇಲ್ಲಿದೇ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap