ಚಿತ್ರದುರ್ಗ
ನಗರದ ಜೋಗಿಮಟ್ಟಿರಸ್ತೆಯಲ್ಲಿಮ ಮಾಸ್ತಮ ದೇವಿಯ ಸಂಕ್ರಾಂತಿ ಹಬ್ಬದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಯಿತು.ಕಳೆದ 13ರಿಂದಲೇ ಅಮ್ಮನವರಿಗೆ ವಿವಿದ ರೀತಿಯ ಕಾರ್ಯಕ್ರಮಗಳು ನಡೆದಿದ್ದು 15ರ ಇಂದು ನಗರದ ಗ್ರಾಮ ದೇವತೆಯಾದ ಉಚ್ಚಂಗಿ ಯಲ್ಲಮ್ಮ ದೇವಾಲಯದಿಂದ ಮೆರವಣಿಗೆಯನ್ನು ಮಾಡಲಾಯಿತು, ಬಡಾವಣೆಯ ಮಹಿಳೆಯರು ಪೂರ್ಣ ಕುಂಭವನ್ನು ತಲೆಯ ಮೇಲೆ ಇಟ್ಟುಕೊಂಡು ದಾರಿಯುದ್ದಕ್ಕು ಸಾಗುತ್ತಿದ್ದ ದೃಶ್ಯ ಕಂಡು ಬಂದಿತು ವಿವಿಧ ಜಾನಪದ ಮೇಳಗಳು ತಮ್ಮ ವಾದ್ಯದ ಮೂಲಕ ಮೆರವಣಿಗೆಯನ್ನು ಭವ್ಯಕರಿಸಿದ್ದವು.
ಮಾಸ್ತಮ್ಮ ದೇವಿಯ ತೆರೆದ ದೇವಾಲಯದಲ್ಲಿ ಸಂಕ್ರಾಂತಿ ಮತ್ತು ಧರ್ನಮಾಸದ ಅಂಗವಾಗಿ ವಿಶೇಷವಾದ ಪೂಜೆಯನ್ನು ನೆಡೆಸಲಾಗಿತ್ತು, ಬಡಾವಣೆಯ ಸುತ್ತಾ-ಮುತ್ತಲ್ಲಿನ ಜನತೆ ಆಗಮಿಸುವುದರ ಮೂಲಕ ಅಮ್ಮನವರಿಗೆ ಪೂಜೆ ಮತ್ತು ಆರತಿಯನ್ನು ಮಾಡಿ ತಮ್ಮ ಇಷ್ಟಾರ್ಥವನ್ನು ನೇರವೇರಿಸುವಂತೆ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀನಿವಾಸ್, ಭಾಸ್ಕರ್, ಮಾಜಿ ಸದಸ್ಯರಾದ ರಮೇಶ್, ಮಹೇಶ್ ಗುತ್ತಿಗೆದಾರರಾದ ಕುಮಾರ್ ಸೇರಿದಂತೆ ಇತರೆ ಬಡಾವಣೆಯ ಮುಖ್ಯಸ್ಥರು ಭಾಗವಹಿಸಿದ್ದರು. ನಂತರ ನಡೆದ ಅನ್ನಸಂರ್ತಪಣೆಯಲ್ಲಿ ಭಕ್ತಾಧಿಗಳು ಭಾಗವಹಿಸುವುದರ ಮೂಲಕ ದೇವಿಯ ಕೃಪೆಗೆ ಪಾತ್ರರಾದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
