ಗಾಂಜಾ ಸೇವೆನೆ: ವೈದ್ಯಕೀಯ ವಿದ್ಯಾರ್ಥಿಗಳು ವಶಕ್ಕೆ

ದಾವಣಗೆರೆ :

           ನಗರದ ಸಿದ್ದವೀರಪ್ಪ ಬಡಾವಣೆಯ ಮನೆಯೊಂರ ಮೇಲೆ ತಡ ರಾತ್ರಿ ದಾಳಿ ನಡೆಸಿರುವ ಸಿಇಎನ್ ಠಾಣೆ ಪೊಲೀಸರು, ಗಾಂಜಾ ಸೇವಿಸುತ್ತಿದ್ದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜಿನ 12 ಜನ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು, ಬಂಧಿತರಿಂದ 15 ಸಾವಿರ ಮೌಲ್ಯದ ಸುಮಾರು ಅರ್ಧ ಕೆಜಿಯಷ್ಟು ಗಾಂಜಾ ಸೊಪ್ಪು ವಶ ಪಡಿಸಿಕೊಂಡಿದ್ದಾರೆ.

             ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್, ಮನೆಯೊಂದರ ಮೇಲೆ ಶುಕ್ರವಾರ ತಡ ರಾತ್ರಿ ದಾಳಿ ನಡೆಸಿರುವ ಸಿಇಎನ್ ಠಾಣೆಯ ಪೊಲೀಸರು, ಅಕ್ರಮವಾಗಿ ಗಾಂಜಾ ಸೇವನೆ ಮಾಡುತ್ತಿದ್ದ 12 ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಎನ್‍ಡಿಪಿಎಸ್ ಕಾಯ್ದೆಯ ಅನ್ವಯ ವಶಕ್ಕೆ ಪಡೆದಿದ್ದಾರೆ ಪಡೆದಿದ್ದಾರೆಂದು ಹೇಳಿದರು.

          ಬೆಂಗಳೂರು, ಮೈಸೂರು, ಚಿಕ್ಕಬುಳ್ಳಾಪುರ, ಉಡುಪಿ, ಕೇರಳದಿಂದ ವೈದ್ಯಕೀಯ ಶಿಕ್ಷಣ ಪಡೆಯಲು ದಾವಣಗೆರೆಗೆ ಬಂದಿರುವ ವಿದ್ಯಾರ್ಥಿಗಳು ಬಂಧಿತರಾಗಿದ್ದು, ಗಾಂಜಾ ಪೂರೈಕೆ ಮಾಡುವವರ ಬಗ್ಗೆ ಬಂಧಿತ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದು, ಶೀಘ್ರವೇ ಈ ಜಾಲಾವನ್ನು ಪತ್ತೆ ಹಾಚಲಾಗುವುದು ಎಂದರು.

          ಕಳೆದ 6 ತಿಂಗಳಿಂದ ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ವಿದ್ಯಾರ್ಥಿಗಳು ವಿಚಾರಣೆಯ ವೇಳೆಯಲ್ಲಿ ಒಪ್ಪಿಕೊಂಡಿದ್ದಾರೆ. ಅವರ ಪೋಷಕರನ್ನು ಕರೆಯಿಸಿ ಸಮಾಲೋಚನೆ ನಡೆಸಿ, ಇವರ ಮನಪರಿವರ್ತನೆಗೆ ಸೂಕ್ತ ಕ್ರಮ ಜರುಗಿಸಲಾಗುವುದು. ಈಗಾಗಲೇ ವಿದ್ಯಾರ್ಥಿಗಳ ಮೆಡಿಕಲ್ ಟೆಸ್ಟ್‍ಗೆ ಒಳಪಡಿಸಿದ್ದು, ವರದಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

         ಇತ್ತೀಚೆಗೆ ಸೊಲ್ಲಾಪುರದ ಬೆಳ್ಳಿ ವ್ಯಾಪಾರಯೊಬ್ಬರನ್ನು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದ ಅವರು, ಗಾಂಜಾ ಮತ್ತು ಎನ್‍ಡಿಪಿಎಸ್ ಪ್ರಕರಣಗಳ ಮಾಹಿತಿ ಇದ್ದರೆ ನಾಗರೀಕರು ಸಿಇಎನ್ ಠಾಣೆಯ 08192225119 ಅಥವಾ ಪೊಲೀಸ ನಿರೀಕ್ಷಕರು ಮೊಬೈಲ್ 8277981962 ಸಂಖ್ಯೆಗೆ ಕರೆ ಮಾಡಬಹುದು ಎಂದರು.ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್‍ಪಿ ಶ್ರೀನಿವಾಸಲು, ಅಪರಾಧ ಪೋಲೀಸ್ ಠಾಣೆ ಇನ್ಸ್ ಪೆಕ್ಟರ್ ಟಿ.ವಿ ದೇವರಾಜ್ ಇತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap