ದಾವಣಗೆರೆ :
ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಾವಣಗೆರೆ ನಗರದ ವಿವಿಧ ಬಡಾವಣೆಗಳಲ್ಲಿ ಲೋಕಸಭಾ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪರವಾಗಿ ರೋಡ್ ಷೋ ನಡೆಸಿದರು.
ರಿಂಗ್ ರೋಡ್ – ಬಿ.ಎಸ್.ಎನ್.ಎಲ್. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹೂವಿನ ಹಾರ ಹಾಕಿ ನಮನ ಸಲ್ಲಿಸಿದ ನಂತರ ಪ್ರಾರಂಭಗೊಂಡ ಈ ರೋಡ್ ವಾರ್ಡ್ ನಂ 30 ರಿಂದ 18, 19, 29, 20 ರ ಮುಖಾಂತರ 21 ನೇ ವಾರ್ಡ್‍ನಲ್ಲಿ ಮುದ್ದಳ್ಳಿ ತೋಟ, ಸೇಂಟ್ ಪಾಲ್ಸ್ ಕಾನ್ವೆಂಟ್, ಅರುಣ ಟಾಕೀಸ್ ರಸ್ತೆ, ರೈತರ ಬೀದಿ ಕೊನೆಗೆ ಕುಂದುವಾಡದಲ್ಲಿ ಅಂತ್ಯಗೊಂಡಿತು.ರೋಡ್ ಷೋನಲ್ಲಿ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ ಅವರು ಆಗಮಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಕೋಮುವಾದಿ ಪಕ್ಷವನ್ನು ದೂರವಿಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಬಸವರಾಜ್, ಸ್ಥಳೀಯ ಮುಖಂಡರುಗಳಾದ ಶಿವನಳ್ಳಿ ರಮೇಶ್, ತಿಪ್ಪಣ್ಣ, ಶ್ರೀಮತಿ ಲಕ್ಷ್ಮೀದೇವಿ ವೀರಣ್ಣ,ಶ್ರೀಮತಿ ಲಲಿತಾ ರಮೇಶ್, ಶ್ರೀಮತಿ ಆಶಾ ಉಮೇಶ್, ಎ.ನಾಗರಾಜ್, ದಿನೇಶ್ ಕೆ.ಶೆಟ್ಟಿ, ಕೆ.ಜಿ.ಶಿವಕುಮಾರ್, ಗಣೇಶ್ ದಾಸಕರಿಯಪ್ಪ, ಚೆಲುವಪ್ಪ, ಡಿ.ಕೆ.ರಮೇಶ್, ಪಾಪಣ್ಣ, ಸತೀಶ್, ಪ್ರಸನ್ನ ಬೇಳಕೇರಿ, ಹಾಲೇಶ್, ರವಿ, ಸಿಎಂ ಸಿದ್ದಪ್ಪ, ಆನಂದ್, ಗಿರೀಶ್, ಸೋಮಶೇಖರ್, ರಘು, ಮತ್ತಿತರರು ಉಪಸ್ಥಿತರಿದ್ದರು.