ದಾವಣಗೆರೆ:
ಮಧುಮೇಹ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣಕ್ಕಾಗಿ ಇಲ್ಲಿನ ಅರೋಮ್-ಯೋಗ ಪ್ರಕೃತಿ ಚಿಕಿತ್ಸೆ ಹಾಗೂ ಆರ್ಯುವೇದ ಕೇಂದ್ರದಲ್ಲಿ ಅಲ್ಫಾ ನ್ಯಾಚುರಲ್ ಡಯಾಬಿಟಿಸ್ ಹಾಗೂ ಒಬೆಸಿಟಿ ಕ್ಲಬ್ ಆರಂಭಿಸಲಾಗಿದೆ ಎಂದು ಬೆಂಗಳೂರಿನ ಅಲ್ಫಾ ನ್ಯಾಚುರಲ್‍ನ ವ್ಯವಸ್ಥಾಪಕ ನಿರ್ದೇಶಕ ಡಾ ಪ್ರವೀಣ್ ಜೇಕಬ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಶಿರಸಿಯ ಡಾ.ವೆಂಕಟರಮಣ ಹೆಗಡೆ ಅವರಲ್ಲಿ ಹಾಗೂ ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ಮಾಡಿ, ಕಳೆದ 15 ವರ್ಷದಿಂದ ಮಧುಮೇಹ ಮತ್ತು ದೇಹದ ಸಮಸ್ಯೆಗೆ ಪರಿಹಾರ ಮತ್ತು ಚಿಕಿತ್ಸೆ ನೀಡುತ್ತಿದ್ದೇನೆ. ಆರೋಗ್ಯಕರ ಕೊಬ್ಬಿನಾಂಶ, ಕಡಿಮೆ ಕಾರ್ಬೋಹೈಡ್ರೇಟ್ ಹಾಗೂ ವ್ಯಾಯಾಮ ರಹಿತ ತೂಕ ಇಳಿಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮಧುಮೇಹ ಪ್ರಮಾಣ ಹೆಚ್ಚಾಗುತ್ತಿದೆ. 100ಕ್ಕೆ 25 ಜನರಲ್ಲಿ ಮಧುಮೇಹ ಕಂಡು ಬರುತ್ತಿದೆ. ಆದ್ದರಿಂದ ನಮ್ಮ ಕೇಂದ್ರದಲ್ಲಿ ಮಧುಮೇಹದ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವುದು ಹಾಗೂ ನಿಯಂತ್ರಣ ಮಾಡುವ ಬಗ್ಗೆ ತಿಳಿಸಿಕೊಡಲಾಗುವುದು. ನಗರದ ಎಂಸಿಸಿ ಬಿ ಬ್ಲಾಕ್‍ನ 2ನೇ ಮೇನ್, 6ನೇ ಕ್ರಾಸ್ ನಲ್ಲಿ ಅರೋಮ್ ಯೋಗ ಕೇಂದ್ರವಿದ್ದು, ಇಲ್ಲಿ ಎಲ್ಲಾ ರೀತಿಯ ಆರ್ಯುವೇದ ಚಿಕಿತ್ಸೆ ನೀಡಲಾಗುವುದು. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಡಾ.ಅಂದಾನಗೌಡ, ವಿ.ಪಾಟೀಲ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ