ಮಂಗಳೂರು-ಚಿತ್ರದುರ್ಗ ಹೊಸ ಹೆದ್ದಾರಿ ನಿರ್ಮಾಣ

ಚಿತ್ರದುರ್ಗ

          ಕೇಂದ್ರ ಸರ್ಕಾರದ ಭಾರತ ಮಾಲಾಹೆದ್ದಾರಿ ನಿರ್ಮಾಣಯೋಜನೆಯಡಿ ಮಂಗಳೂರಿನ ನೆಲ್ಯಾಡಿಯಿಂದ ಮೂಡಿಗೆರೆ, ಚಿಕ್ಕಮಗಳೂರು, ಕಡೂರು, ಹೊಸದುರ್ಗ, ಹೊಳಲ್ಕೆರೆ ಮಾರ್ಗವಾಗಿಚಿತ್ರದುರ್ಗಕ್ಕೆ ನೂತನವಾಗಿಚತುಷ್ಪಥ ಹೆದ್ದಾರಿಯನ್ನು ನಿರ್ಮಾಣ ಮಾಡಲು ಯೋಜಿಸಿದೆ.ಈ ವೇಳೆ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ರೈತರಿಗೆಯಾವುದೇ ವಂಚನೆಯಾಗದಂತೆ ನೋಡಿಕೊಳ್ಳಬೇಕೆಂದು ಸಂಸದರಾದ ಬಿ.ಎನ್.ಚಂದ್ರಪ್ಪನವರು ತಿಳಿಸಿದರು.

          ಭಾರತರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದಚಿತ್ರದುರ್ಗದಗಾಯಿತ್ರಿಕಲ್ಯಾಣ ಮಂಟದಲ್ಲಿಏರ್ಪಡಿಸಲಾದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ನೂತನವಾಗಿ ಹೆದ್ದಾರಿ ನಿರ್ಮಾಣ ಮಾಡುತ್ತಿರುವುದು ಸಂತಸದ ವಿಚಾರವಾಗಿದ್ದರೂ ಸಹ ಬೇಕಾದ ಭೂಮಿಯನ್ನುರೈತರಿಂದ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ.ಆದರೆಜಮೀನಿನೊಂದಿಗೆ ರೈತರಿಗೆ ಅವಿನಾಭಾವ ಸಂಬಂಧವಿದೆ.ಎಷ್ಟೆ ಹಣಕೊಟ್ಟರೂ ಸಹ ಇದಕ್ಕೆ ಬೆಲೆಯನ್ನುಕಟ್ಟಲು ಸಾಧ್ಯವಿಲ್ಲ. ಸ್ವಾಧೀನಪಡಿಸಿಕೊಳ್ಳುವಾಗ ರೈತರ ಬಗ್ಗೆ ಹೆಚ್ಚು ಕಾಳಜಿಯನ್ನು ತೋರಬೇಕಾಗುತ್ತದೆಎಂದರು.

          ರೈತರಿಗೆ ಅನೇಕ ಸಮಸ್ಯೆಗಳಿವೆ, ಅವುಗಳನ್ನು ನಿವಾರಿಸುವ ಕೆಲಸವನ್ನು ಮಾಡಬೇಕಾಗಿದೆ. ಜಮೀನುಕೊಟ್ಟುರೈತರು ಸಂಕಷ್ಟವನ್ನುಅನುಭವಿಸಬಾರದು. ರೈತರಎಲ್ಲಾ ಸಂಶಯಗಳು ಹಾಗೂ ಪ್ರಶ್ನೆಗಳಿಗೆ ಸಮರ್ಪಕವಾದಉತ್ತರವನ್ನು ನೀಡುವ ಕೆಲಸವಾಗಬೇಕು ಎಂದು ಹೆದ್ದಾರಿ ಪ್ರಾಧಿಕಾರದಅಧಿಕಾರಿಗೆ ಸೂಚ್ಯವಾಗಿ ತಿಳಿಸಿದರು.

           ಸಭೆಯಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಗೂಳಿಹಟ್ಟಿ ಡಿ.ಶೇಖರ್, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಹೆದ್ದಾರಿ ಪ್ರಾಧಿಕಾರದಯೋಜನಾ ನಿರ್ದೇಶಕ ಶ್ರೀನಿವಾಸ ನಾಯ್ಡು, ತಾಂತ್ರಿಕ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು, ರೈತರ ಮುಖಂಡರು, ರೈತರು ಭಾಗವಹಿಸಿದ್ದರು.    

           ಸಮಾಲೋಚನಾ ಸಭೆಯಲ್ಲಿಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗತಾಲ್ಲೂಕಿನರೈತರು ಭಾಗವಹಿಸಿ ಸಮಾಲೋಚನೆ ನಡೆಸಿದರು.ನೂತನರಾಷ್ಟ್ರೀಯ ಹೆದ್ದಾರಿಯೋಜನೆಗೆ ಭೂ ಸ್ವಾಧೀನ ಪಡಿಸಿಕೊಳ್ಳುವಾಗ ಮಾರ್ಗಸೂಚಿದರಕ್ಕೆ ಬದಲು, ಮಾರುಕಟ್ಟೆಆಧಾರಿತದರದಂತೆ ಪರಿಹಾರವನ್ನು ನೀಡಬೇಕುಎಂದು ಸಾರ್ವಜನಿಕರು ಒತ್ತಾಯಿಸಿದರು.

ಯೋಜನೆ ವಿವರ;

         ಕೇಂದ್ರ ಸರ್ಕಾರದ‘ಭಾರತಮಾಲಾ ಪರಿಯೋಜನಾ’ ಯೋಜನೆಯಡಿನೆಲ್ಯಾಡಿ-ಚಿತ್ರದುರ್ಗ (ರಾಷ್ಟ್ರೀಯ ಹೆದ್ದಾರಿ 173)(ಲಾಟ್ 3, ಆಂಧ್ರಪ್ರದೇಶ, ಕರ್ನಾಟಕ, ಗೋವಾ ಮತ್ತು ಕೇರಳ ಪ್ಯಾಕೇಜ್-2)ಭಾರತದಲ್ಲಿನ ಸರಕು ಸಾಗಣೆದಕ್ಷತೆಯನ್ನು ಸುಧಾರಿಸಲು, ಆರ್ಥಿಕಕಾರಿಡಾರ್, ಆಂತರಿಕಕಾರಿಡಾರ್, ಫೀಡರ್ ಮಾರ್ಗ, ಬಯಲು ಸೀಮೆ, ಮಲೆನಾಡು ಮತ್ತು ಕರಾವಳಿ ರಸ್ತೆಗಳ ಅಭಿವೃದ್ಧಿಗಾಗಿ ಈ ಯೋಜನೆರೂಪಿಸಲು ಉದ್ದೇಶಿಸಲಾಗಿದೆ. ನೆಲ್ಯಾಡಿ-ಚಿತ್ರದುರ್ಗರಾ.ಹೆ. 173 ಪ್ರಸ್ತಾಪಿತ ಚತುಷ್ಪಥ ರಸ್ತೆಯ ಒಟ್ಟು ಉದ್ದ 233 ಕಿ.ಮೀ.ಯೋಜನೆಗೆ 7 ಸಾವಿರ ಕೋಟಿರೂ.ವೆಚ್ಚವಾಗುವ ಅಂದಾಜಿದೆ.

4 ಪ್ಯಾಕೇಜ್‍ನಲ್ಲಿ ಕಾಮಗಾರಿ :

           ಉದ್ದೇಶಿತ ಈ ರಸ್ತೆಯು ನಗರ ಮತ್ತು ಪಟ್ಟಣದೊಳಗಿರದೆ, ಬಹುತೇಕ ಬೈಪಾಸ್‍ರಸ್ತೆಇದಾಗಲಿರುವುದರಿಂದ, ನಗರ ಮತ್ತು ಪಟ್ಟಣದೊಳಗೆ ಬೃಹತ್ ವಾಹನಗಳು, ಲಾರಿಗಳು ಹಾಗೂ ಹೆಚ್ಚಿನ ವಾಹನ ದಟ್ಟಣೆಯನ್ನು ನಿವಾರಿಸಲಿದೆ.ಪ್ಯಾಕೇಜ್-1 ರಲ್ಲಿ ನೆಲ್ಯಾಡಿಯಿಂದ ಮೂಡಿಗೆರೆ ಹ್ಯಾಂಡ್ ಪೋಸ್ಟ್ ವರೆಗಿನ 68.9 ಕಿ.ಮೀ. ರಸ್ತೆಯಾಗಿದ್ದು, ದಕ್ಷಿಣಕನ್ನಡ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಯನ್ನು ಒಳಗೊಂಡಿದ್ದು, ಒಟ್ಟು 29 ಗ್ರಾಮಗಳು ಪ್ಯಾಕೇಜ್-01 ರ ವ್ಯಾಪ್ತಿಗೆ ಬರಲಿದೆ.

          ಪ್ಯಾಕೇಜ್-2 ರಲ್ಲಿ ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಿಂದ ಚಿಕ್ಕಮಗಳೂರು ಬೈಪಾಸ್‍ಎಂಡ್ ವರೆಗಿನ 47.1 ಕಿ.ಮೀ. ರಸ್ತೆ ಇದಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ 44 ಗ್ರಾಮಗಳು ಪ್ಯಾಕೇಜ್ 2 ರ ವ್ಯಾಪ್ತಿಯಲ್ಲಿವೆ. ಪ್ಯಾಕೇಜ್-3 ರಲ್ಲಿ ಚಿಕ್ಕಮಗಳೂರು ಬೈಪಾಸ್‍ಎಂಡ್ ನಿಂದ ತಮಟದಹಳ್ಳಿ ವರೆಗಿನ 58.8 ಕಿ.ಮೀ. ರಸ್ತೆಇದಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ 31 ಗ್ರಾಮಗಳು ಪ್ಯಾಕೇಜ್3 ರಲ್ಲಿವೆ.

           ಪ್ಯಾಕೇಜ್-4 ರಲ್ಲಿ ತಮಟದಹಳ್ಳಿ ಯಿಂದಚಿತ್ರದುರ್ಗ ವರೆಗಿನ 58. 2 ಕಿ.ಮೀ. ರಸ್ತೆಇದಾಗಿದ್ದು, ಚಿತ್ರದುರ್ಗಜಿಲ್ಲೆಯ ಹೊಸದುರ್ಗತಾಲ್ಲೂಕಿನ 09 ಗ್ರಾಮಗಳು, ಹೊಳಲ್ಕೆರೆ ತಾಲ್ಲೂಕಿನ 16 ಮತ್ತುಚಿತ್ರದುರ್ಗತಾಲ್ಲೂಕಿನ 12 ಗ್ರಾಮಗಳು ಸೇರಿದಂತೆಒಟ್ಟು 37 ಗ್ರಾಮಗಳು ಪ್ಯಾಕೇಜ್ 4 ರ ವ್ಯಾಪ್ತಿಗೆ ಬರಲಿವೆ.

ಯೋಜನೆಯ ಸಂಕ್ಷಿಪ್ತ ವಿವರ :

           ಉದ್ದೇಶಿತ ರಸ್ತೆ ಸಾಗಿ ಬರುವ ಮಾರ್ಗದ ವಿವರಇಂತಿದೆ. ದಕ್ಷಿಣಕನ್ನಡಜಿಲ್ಲೆ ಮಂಗಳೂರು-ಬಂಟ್ವಾಳ ನಂತರ ಬರುವನೆಲ್ಯಾಡಿಯಿಂದ ಪ್ರಾರಂಭಗೊಂಡು-ಮೂಡಿಗೆರೆ-ಚಿಕ್ಕಮಗಳೂರು-ಕಡೂರಿನಿಂದ ತಮಟದಹಳ್ಳಿ ಮಾರ್ಗವಾಗಿ ಹೊಸದುರ್ಗ ತಾಲ್ಲೂಕು ಕಬ್ಬಿನಕೆರೆ-ಬುರುಡೇಕಟ್ಟೆ-ಮಲ್ಲಪ್ಪನಹಳ್ಳಿ-ಹೊಳಲ್ಕೆರೆ ತಾಲ್ಲೂಕು ಬೊಮ್ಮನಹಳ್ಳಿ- ಎನ್.ಜಿ.ಹಳ್ಳಿ-ಲೋಕದೊಳಲು-ಕುಡಿನೀರಕಟ್ಟೆ-ಶಿವಗಂಗ-ಚಿತ್ರಹಳ್ಳಿ ಮಾರ್ಗವಾಗಿಚಿತ್ರದುರ್ಗ ವರೆಗೆಇದೆ. ಉದ್ದೇಶಿತ ರಸ್ತೆಚಿತ್ರದುರ್ಗಜಿಲ್ಲೆಯಲ್ಲಿ 58. 2 ಕಿ.ಮೀ., ಚಿಕ್ಕಮಗಳೂರು ಜಿಲ್ಲೆಯಲ್ಲಿ 144.8 ಕಿ.ಮೀ. ಮತ್ತುದಕ್ಷಿಣಕನ್ನಡಜಿಲ್ಲೆಯಲ್ಲಿ 30 ಕಿ.ಮೀ. ಚತುಷ್ಪಥರಸ್ತೆಇದಾಗಿದೆ. ಚಿತ್ರದುರ್ಗಜಿಲ್ಲೆಯಲ್ಲಿಒಟ್ಟು 58.2 ಕಿ.ಮೀ. ರಸ್ತೆಯಉದ್ದವನ್ನು ಹೊಂದಿದೆ.

ಭೂಮಿಯ ಅಗತ್ಯತೆ :

           ಕಡೂರುತಾ; ತಮಟದಹಳ್ಳಿ-ಚಿತ್ರದುರ್ಗ ವಿಭಾಗಕ್ಕೆಅಂದರೆ ಪ್ಯಾಕೇಜ್-4 ರರಸ್ತೆ ಕಾಮಗಾರಿಗೆ ಒಟ್ಟಾರೆ 419. 51 ಹೆ.ಭೂಮಿ ಅಗತ್ಯವಿದೆ. ಈ ಪೈಕಿ ಖಾಸಗಿ ಭೂಮಿ 294.57 ಹೆ.ಸರ್ಕಾರಿ ಜಮೀನು- 66.03 ಹೆ.ಅರಣ್ಯ ಭೂಮಿ- 0.12 ಹೆ.ರೈಲ್ವೆ ಭೂಮಿ- 0.38 ಹೆ.ಅಂದರೆ ಭೂ ಸ್ವಾಧೀನ ಮಾಡಿಕೊಳ್ಳಬೇಕಿರುವ ಒಟ್ಟು ಭೂಮಿ 361.10 ಹೆ.ಯೋಜನೆಗೆ ಈಗಾಗಲೆ ಲಭ್ಯವಿರುವ ಭೂಮಿ 58.41 ಹೆಕ್ಟೇರ್.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ