ಹುಬ್ಬಳ್ಳಿ :
ಬಿಜೆಪಿ ನಾಯಕರು ಹೇಳುವಂತೆ ಮೈತ್ರಿ ಸರ್ಕಾರದ 20 ಶಾಸಕರು ತಮ್ಮ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳುತ್ತಾರೆ. ಆದರೆ ಅವರದ್ದೇ ಪಕ್ಷದ 10 ಶಾಸಕರು ನಮ್ಮು ಜೋತೆಯಲ್ಲಿ ಸಂಪರ್ಕದಲ್ಲಿದ್ದಾರೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್ ಬಿಜೆಪಿಯವರು ತಮ್ಮ ಜೊತೆ 20 ಶಾಸಕರು ಬಹಿರಂಗಪಡಿಸಿದರೆ, ನಾವು ಕೂಡ ಬಿಜೆಪಿಯ 10 ಶಾಸಕರ ಹೆಸರನ್ನು ಬಹಿರಂಗಪಡಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿಯವರು ಸುಮ್ಮನೆ ಸುಳ್ಳು ಹೇಳುತ್ತಿದ್ದಾರೆ. 23 ಅಲ್ಲ, ಇನ್ನೂ ಎರಡು ದಿನ ಹೆಚ್ಚುವರಿಯಾಗಿ ತೆಗೆದುಕೊಂಡು 25 ಕ್ಕೆ ಸರ್ಕಾರ ರಚನೆ ಮಾಡಲಿ ಹಾಗೆ ಸರ್ಕಾರ ರಚನೆ ಆಗಿದ್ದೇ ಆದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಸರ್ಕಾರ ರಚಿಸದೇ ಹೋದರೆ ಬಿ.ಎಸ್. ಯಡಿಯೂರಪ್ಪ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಾರಾ ಎಂದು ಪ್ರಶ್ನಿಸಿದ್ದಾರೆ.