ಶಿರಾ:
ದೇವರ ಸನ್ನಿದಾನಕ್ಕೆ ಬರುವಂತಹ ಭಕ್ತರಿಗೆ ಶುದ್ದ ಕುಡಿಯುವ ನೀರು ಕೊಡ ಬೇಕೆಂಬ ಉದ್ದೇಶದಿಂದ ಜಲಪ್ರಸಾದ ಕಾರ್ಯಕ್ರಮದಡಿ ಐತಿಹಾಸಿಕ ಪ್ರಸಿದ್ದ ಶ್ರೀಕ್ಷೇತ್ರಗಳಿಗೆ ಶುದ್ದ ಕುಡಿಯುವ ನೀರಿನ ಘಟಕ ನೀಡಲಾಗಿದೆ. ನೀರು ಮನುಷ್ಯ ಆರೋಗ್ಯ ಕಾಪಾಡುವ ಜೀವಜಲ ನೀರಿನ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯಾಗ ಬೇಕೆಂದು ಖ್ಯಾತ ವೈದ್ಯ, ಸಮಾಜ ಸೇವಕ ಡಾ.ಎಂ.ರಾಜೇಶ್ ಗೌಡ ಹೇಳಿದರು.
ಶಿರಾ ತಾಲೂಕಿನ ಪ್ರಸಿದ್ದ ಶ್ರೀಕ್ಷೇತ್ರ ಮರಡಿಗುಡ್ಡ ಶ್ರೀರಂಗನಾಥ ಸ್ವಾಮಿ ಸನ್ನಿದಾನದಲ್ಲಿ ಜಲಪ್ರಸಾದ ಕಾರ್ಯಕ್ರಮದಡಿ ಸ್ಥಾಪನೆಗೊಂಡ ಶುದ್ದ ಕುಡಿಯುವ ನೀರಿನ ಘಟಕವನ್ನು ಬುಧವಾರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಬರ ರೈತ ಮತ್ತು ಜನಸಾಮಾನ್ಯ ಬದುಕಿನ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದ್ದು, ಶಿರಾ ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಟಾನ ಅಗತ್ಯವಾಗಿದೆ. ಶುದ್ದ ಮನಸ್ಸಿನಿಂದ ಶ್ರೀರಂಗನಾಥ ಸ್ವಾಮಿಯನ್ನು ಆರಾಧಿಸಿ ಬೇಡಿದರೆ ಇಷ್ಟಾರ್ಥ ನೆರೆವೇರಲಿದೆ, ದೇವರು ಭಕ್ತಿಗೆ ಒಲಿಯುತ್ತಾನೆ ವಿನಃ ಶ್ರೀಮಂತಿಕೆಗೆ ಅಲ್ಲ ಎಂದರು.
ಮುಖಂಡರಾದ ಕಾಂತರಾಜು, ಕುಮಾರ್ ,ಲಕ್ಷ್ಮೀಕಾಂತ್, ಬಿ.ಆರ್.ರಾಜಣ್ಣ, ಜಯಣ್ಣ ನಿವೃತ್ತ ಡಿವೈಎಸ್ಪಿ ನಾರಾಯಣಪ್ಪ, ಹೆಚ್.ಕೆ.ಸತೀಶ್, ಪ್ರಕಾಶ್ಗೌಡ, ದೇವರಾಜು, ಆರ್ಚಕರಾದ ರಂಗನಾಥ್, ರಂಗಣ್ಣ, ದೇವರಾಜು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







