ಬೆಂಗಳೂರು
ಲೈವ್ ಬ್ಯಾಂಡ್ನ ಯುವತಿಯರನ್ನು ಹೊಟೇಲೊಂದರಲ್ಲಿರಿಸಿ ಗಿರಾಕಿಗಳನ್ನು ಸಂಪರ್ಕಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ 2 ಕಾರು ಸೇರಿ 12 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ . ವಿಜಯನಗರದ ಲಕ್ಷ್ಮಣ್ (31), ಮಂಡ್ಯದ ಕೈಕೊಂಡನಹಳ್ಳಿಯ ಶಿವರಾಜು (27),ಬೂಕನಕೆರೆಯ ರವಿಕುಮಾರ್ (24) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 28 ಸಾವಿರ ರೂ. ನಗದು, ಮೂರು ಮೊಬೈಲ್ಗಳು, ಎರಡು ಕಾರು ಸೇರಿ 12 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.ಆರೋಪಿಗಳಲ್ಲಿ ಲಕ್ಷ್ಮಣ್, ಲೈವ್ ಬ್ಯಾಂಡ್ನ ಮಾಲೀಕನಾಗಿದ್ದು, ಗಾಂಧಿನಗರದ 5ನೇ ಕ್ರಾಸ್ನಲ್ಲಿರುವ ಹೊಟೇಲ್ವೊಂದರಲ್ಲಿ ಮ್ಯಾನೇಜರ್ನನ್ನು ಸಂಪರ್ಕಿಸಿ, ರೂಂ ಬುಕ್ ಮಾಡಿಸಿ, ಲೈವ್ ಬ್ಯಾಂಡ್ ಯುವತಿಯರನ್ನು ರೂಂ ನಲ್ಲಿರಿಸಿ, ಗಿರಾಕಿಗಳನ್ನು ಸಂಪರ್ಕಿಸಿ, ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು.
ಆರೋಪಿ ಲಕ್ಷ್ಮಣ್, ಗಾಂಧಿನಗರದ ಮಿಂಚು ಎಂಬ ಹೆಸರಿನಲ್ಲಿ ಲೈವ್ ಬ್ಯಾಂಡ್ ನಡೆಸುತ್ತಿದ್ದ. ಇನ್ನಿಬ್ಬರು ಆರೋಪಿಗಳಾದ ಶಿವರಾಜು ಮತ್ತು ಹೊಟೇಲ್ ಮ್ಯಾನೇಜರ್ ರವಿಕುಮಾರ್ ಸೇರಿ, ಬೇರೆ ರಾಜ್ಯಗಳಿಂದ ಯುವತಿಯರನ್ನು ಉದ್ಯೋಗದ ಆಮಿಷವೊಡ್ಡಿ ಕರೆತಂದು, ಗಿರಾಕಿಗಳನ್ನು ಸಂಪರ್ಕಿಸಿ, ವೇಶ್ಯಾವಾಟಿಕೆ ದಂಧೆ ನಡೆಸಿ, ಐಷಾರಾಮಿ ಜೀವನ ನಡೆಸುತ್ತಿದ್ದರು .ಆರೋಪಿಗಳ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








