ಶಿಕ್ಷಣ ಇಲಾಖೆ ಎಂದರೆ ಹಿಂದೆ ಸರಿಯುವ ರಾಜಕಾರಣಿಗಳು..!

ಬೆಂಗಳೂರು

     ಅಬಕಾರಿ, ಹಣಕಾಸು, ಕಂದಾಯ, ಗೃಹ ದಂತಹ ಮಹತ್ವದ ಇಲಾಖೆಗಳನ್ನೇ ರಾಜಕಾರಣಿಗಳು ಹೆಚ್ಚು ಬಯಸುತ್ತಾರೆ. ಆದರೆ ಶಿಕ್ಷಣ ಇಲಾಖೆಯನ್ನು ಕೇಳಿ ಪಡೆದಂತಹ ಒಬ್ಬ ರಾಜಕಾರಣಿಯೂ ಇಲ್ಲ ಎಂದು ಖ್ಯಾತ ಶಿಕ್ಷಣ ತಜ್ಞ ಪ್ರೊ. ಕೆ.ವಿ. ರಾಧಾಕೃಷ್ಣ ಅವರು ವಿಷಾದ ವ್ಯಕ್ತಪಡಿಸಿದರು.

    ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯ ಪ್ರಥಮ ದರ್ಜೆ ಕಾಲೇಜು, ಪ್ರಿನಿಪಾಲ್ ಸಂಘ ಮತ್ತು ವಾಣಿಜ್ಯ ವಿಭಾಗ ಹಾಗೂ ಬೆಂಗಳೂರು ಕೇಂದ್ರ ವಿಶ್ವ ವಿದ್ಯಾಲಯ ಆಯೋಜಿಸಿದ್ದ ಕಾಲೇಜು ಆಡಳಿತ ಪ್ರಾಂಶುಪಾಲರು ಎದುರಿಸುತ್ತಿರುವ ಹೊಸ ಸಮಸ್ಯೆಗಳು ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಎಂದು ಹೇಳಿದರು.

     ಶಿಕ್ಷಣ ಇಲಾಖೆಯನ್ನು ಹೊರತುಪಡಿಸಿ ಪ್ರಭಾವಿ ಇಲಾಖೆಗಳನ್ನು ಬಯಸುವಂತಹ ರಾಜಕಾರಣಿಗಳೇ ಹೆಚ್ಚು ಇಂತಹವರಿಂದ ಶಿಕ್ಷಣದ ಅಭಿವೃದ್ದಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

     ಶಿಕ್ಷಣ ಇಲಾಖೆಯಲ್ಲಿ ಎಲ್ಲವನ್ನು ಪಡೆದುಕೊಂಡೇ ಹೋರಾಟ ನಡೆಸಬೇಕು. ಇದೊಂದು ತಲೆ ಇಲ್ಲದ ವ್ಯವಸ್ಥೆಯಡಿ ಬದುಕು ವಂತಾಗಿದೆ ಎಂದು ಹೇಳಿದರು. ಹಿಂದೆ ಏಕಾ ಏಕಿ ನೂರು ಸರ್ಕಾರಿ ಕಾಲೇಜುಗಳನ್ನು ಆರಂಭಿಸಲಾಯಿತು. ಆ ಕಾಲೇಜಿಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳಾದ ಕಟ್ಟಡ, ಉಪನ್ಯಾಸಕರ ನೇಮಕ, ಪರಿಕರಗಳು ಇದೆಯೋ ಇಲ್ಲವೋ ಎಂಬುದನ್ನು ಕೂಡ ಆಲೋಚನೆ ಮಾಡಲಿಲ್ಲ.

     ಸಕಲೇಶಪುರ ಕಾಲೇಜಿನಲ್ಲಿ ಕಾಲೇಜು ಪ್ರಾಂಶುಪಾಲರು ಸೇರಿ ಬೆಲ್ ಬಾರಿಸುವ ಸಿಬ್ಬಂದಿ ಕೂಡ ’ಅತಿಥಿ’ ಆಗಿದ್ದರು ಎಂದು ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳನ್ನು ತೆಗೆದಿಟ್ಟರು.ಈ ಸಂದರ್ಭದಲ್ಲಿ ಪ್ಯಾರಾಸ್ ಮುಲ್ ಚೋಡಿಯಾ, ದ್ರೋಣಾಚಾರ್ಯ, ಜೀವಮಾನ ಸಾಧನೆಯ ಪ್ರಶಸ್ತಿಗಳನ್ನು ವಿವಿಧ ಕಾಲೇಜುಗಳ ಪ್ರಾಂಶುಪಾಲರಿಗೆ ಪ್ರದಾನ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಬೆಳಗಾವಿ ರಾಣಿ ಚೆನ್ನಮ್ಮ ವಿ.ವಿ. ಕುಲಪತಿ ಡಾ.ಎಂ. ರಾಮಚಂದ್ರಗೌಡ, ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ