ನಾಳೆಯ ಸಮಾವೇಷದ ಪೂರ್ವ ಸಿದ್ಧತಾ ಸಭೆ..!!

ಹಾವೇರಿ:

          ಕೇಂದ್ರದಲ್ಲಿ ಕಳೆದ ನಾಲ್ಕು ವರ್ಷಗಳ ಕಾಲ ಅಧಿಕಾರ ನಡೆಸಿರುವ ನರೇಂದ್ರ ಮೋದಿ ಸರಕಾರ ಎಲ್ಲ ಕ್ಷೇತ್ರದಲ್ಲಿ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಕೇಂದ್ರದ ವಿರುದ್ಧ ಹರಿಹಾಯ್ದರು. ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ  (ದಿ,09) ನಡೆಯುವ ರಾಹುಲ್ ಗಾಂಧಿ ಜನಪರಿರ್ವತನಾ ರ್ಯಾಲಿಯ ಪೂರ್ವ ತಯಾರಿ ವಿಕ್ಷಣೆ ಮಾಡಿದ ಬಳಿಕ ಮಾಧ್ಯಮದರೊಂದಿಗೆ ಅವರು ಮಾನಾಡಿದರು.

       ದೇಶದಲ್ಲಿ ಬಿಜೆಪಿ ತಾನು ನಾಲ್ಕುವರೆ ವರ್ಷಗಳ ಕಾಲ ಮಾಡಿದ ಅಭಿವೃದ್ಧಿ ಮೇಲೆ ಮತ ಕೇಳುವುದನ್ನು ಬಿಟ್ಟು, ಭಾವನಾತ್ಮವಾಗಿ ವೋಟ್ ಪಡೆಯುವ ಪ್ರಯತ್ನ ಮಾಡುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಕಲಬುರ್ಗಿ ಬಂದಿದ್ದ ಪ್ರಧಾನಿಗಳು ಅಭಿವೃದ್ಧಿ ವಿಚಾರಗಳನ್ನು ಮಾತನಾಡುವದನ್ನು ಬಿಟ್ಟು, ಸುಳ್ಳು ಭಾಷಣ ಮಾಡಿ ಹೋಗಿದ್ದಾರೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಎಲ್ಲ ರಂಗದಲ್ಲಿ ವಿಫಲವಾಗಿದೆ. ಪ್ರಮುಖವಾಗಿ ದೇಶದ ಭದ್ರತೆಯಲ್ಲಿ ವಿಫಲವಾಗಿದೆ. ಉಗ್ರರರು ದೇಶದ ಗಡಿಯೋಳಗೆ 300 ಕೆ.ಜಿ.ಆಡಿಎಕ್ಸ್ ತಂದು ಸ್ಪೋಟ್ ಮಾಡುವ ಮಟ್ಟಿಗೆ ನಮ್ಮ ಭದ್ರತಾ ವೈಪಲ್ಯ ಹೆಚ್ಚಾಗಿದೆ. ಇವರು ಅಧಿಕಾರಕ್ಕೆ ಬಂದ ಮೇಲೆ, 400 ಜನ ವೀರಯೋಧರು ಸಾವನಪ್ಪಿದ್ದಾರೆ ಎಂದು ದೂರಿದರು.

        ದೇಶದಲ್ಲಿ ಒಂದು ರೀತಿಯಲ್ಲಿ ಬಿಜೆಪಿ ಹಾಗೂ ಮೋದಿ ಹಿಂಬಾಲಕರನ್ನು ಬಿಟ್ಟರೆ ಮತ್ಯಾರಿಗೂ ದೇಶ ಭಕ್ತಿಯಿಲ್ಲ ಎನ್ನುವಂತೆ ವಾತಾವರಣ ಸೃಷ್ಠಿ ಮಾಡಲಾಗುತ್ತಿದೆ. ದೇಶ ಭಕ್ತಿ ಬಿಜೆಪಿ ನಾಯಕರಿಗಿಂತ ಕಾಂಗ್ರೆಸ್ ನಾಯಕರಲ್ಲಿ ಹುಟ್ಟಿನಿಂದ ಬೆಳೆದು ಬಂದಿದೆ. ಆ ಕಾರಣದಿಂದ ಬಿಜೆಪಿ ನಾಯಕರಿಂದ ಕಾಂಗ್ರೆಸ್ ದೇಶ ಭಕ್ತಿ ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.

ಅಧಿಕಾರಕ್ಕೆ ಹಪಿಸುತ್ತಿರುವ ಬಿಜೆಪಿ:

      ಲೋಕಸಭಾ ಚುನಾವಣೆ ಸಮಿಶ್ರ ಸರಕಾರ ಬಿಳುತ್ತೇ ಎಂದು ಬಿಜೆಪಿ ನಾಯಕರು ಹೇಳಿಕೊಂಡು ತಿರುಗುತ್ತಿದ್ದಾರೆ. ಬಿಜೆಪಿ ಪಕ್ಷಗೆ ಮಾನ,ಮರ್ಯಾತೆ, ಗೌರವ ಇಲ್ಲದಂತಾಗಿದೆ. ಅಧಿಕಾರಕ್ಕಾಗಿ ಹಪಿಸುತ್ತಿರುವ ಬಿಜೆಪಿ ವಾಮ ಮಾಗ್ರದ ಮೂಲಕ ಅಧಿಕಾರ ಗದ್ದುಗೆ ಏರುಲು ಹವಣಿಸಿ ದೇಶದ ಜನರ ಮುಂದೆ ಛೀಮಾರಿ ಹಾಕಿಸಿಕೊಂಡಿರುವ ಅದಕ್ಕೆ ಇನ್ನು ಸಾಕಾಗಿಲ್ಲ ಅನಿಸುತ್ತಿದೆ. ಬಿಜೆಪಿ ಒಂದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಅಧಿಕಾರಧಾಹವನ್ನು ಬಿಡಬೇಕು ಎಂದು ತಿಳಿಸಿದರು.

      ಜಾದವ್ ಏಷ್ಟಕ್ಕೆ ಮಾರಿಕೊಂಡಿದ್ದಾರೆ ಎಂಬುದನ್ನು ತಿಳಿಸಬೇಕು. ಕಾಂಗ್ರೆಸ್ ಪಕ್ಷ ಜಾದವ್ ಅವರಿಗೆ ನೀಡಬೇಕಾದ ಎಲ್ಲ ಗೌರವ ಅಧಿಕಾರವನ್ನು ನೀಡಿತ್ತು. ಈಗ ಯಾವುದೋ ಕಾರಣ ನೀಡಿ, ಬಿಜೆಪಿಗೆ ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಮೊದಲು ಇದೇ ಜಾದವ್ ನನ್ನ ರಕ್ತದಲ್ಲಿ ಕಾಂಗ್ರೆಸ್ ಹರಿಯುತ್ತಿದೆ ಎಂದಿದ್ದರೂ. ಈಗ ಬಿಜೆಪಿಗೆ ತಮ್ಮನ್ನೂ ತಾವು ಮಾಡಿಕೊಂಡಿದ್ದಾರೆ. ಈಗ ಅವರ ಮೈಯಲ್ಲಿ ಯಾವ ರಕ್ತ ಹರಿಯುತ್ತಿದೆ ಎಂಬುದನ್ನು ತಿಳಿಸಬೇಕು ಎಂದರು.

       ಜಿಲ್ಲೆ ಸೇರಿದಂತೆ ದೇಶದಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ಈ ಕಾರಣದಿಂದ ಜಿಲ್ಲಗೆ ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆ. ದೇಶದ ಯುವರಿಗೆ ಮೋದಿ ಮೇಲೆ ಇದ್ದ ನಂಬಿಕೆ ಕಳೆದು ಹೋಗಿದೆ. ಈಗ ಯುವಕರು ಪರ್ಯಾಯ ನಾಯಕರನ್ನಾಗಿ ರಾಹುಲ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಕಾರಣದಿಂದ ಜಿಲ್ಲೆಯಲ್ಲಿ ಪರಿರ್ವತನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಈ ರ್ಯಾಲಿಗೆ ಧಾರವಾಡ,ಗದಗ, ಹಾವೇರಿ ಜಿಲ್ಲೆಯಿಂದ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಡಿ.ಕೆ.ಶಿವಕುಮಾರ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

         ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಆಣೂರ ಕೆರೆ ತುಂಬಿಸುವ ಯೋಜನೆಗೆ ಸರಕಾರ 212 ಕೋಟಿ ಬಿಡುಗಡೆ ಮಾಡಲು ತಿರ್ಮಾನಿಸಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿರುವ ಕಮೀಟಿಯಲ್ಲಿ ತಿರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

        ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಸಲೀಂ ಅಹ್ಮದ್, ವಿಪ ಸದಸ್ಯ ಶ್ರೀನಿವಾಸ ಮಾನೆ,ಎಸ್ ಎಫ್ ಎನ್ ಗಾಜೀಗೌಡ್ರ,ಸಂಜೀವಕುಮಾರ ನೀರಲಗಿ,ಕೊಟ್ರೇಶಪ್ಪ ಬಸೇಗಣ್ಣಿ,ಎಸ್ ಕೆ ಕರಿಯಣ್ಣನವರ ,ಶ್ರೀನಿವಾಸ್ ಹಳ್ಳಳ್ಳಿ,ಎಂಎಂ ಹಿರೇಮಠ,ಡಿ ಬಸವರಾಜ,ಎಎ ಪಠಾಣ ಸೇರಿದಂತೆ ಮುಂತಾದವರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link