ಬಾಕಿ ವೇತನ ಪಾವತಿಸುವಂತೆ ಗುತ್ತಿಗೆ ನೌಕರರ ಪ್ರತಿಭಟನೆ

ಕಂಪ್ಲಿ

     ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಬಾಕಿ ವೇತನ ಪಾವತಿಸುವಂತೆ ಹಾಗೂ ಹಂಗಾಮಿ ನೌಕರರ ಕುಂದುಕೊರತೆಗಳನ್ನು ನೀಗಿಸುವಲ್ಲಿ ಜಾಗೃತರಾಗುವಂತೆ ಒತ್ತಾಯಿಸಿ ಸೋಮವಾರ ಇಲ್ಲಿನ ಕರ್ನಾಟಕ ನೀರಾವರಿ ನಿಗಮದ ಕಚೇರಿ ಆವರಣದಲ್ಲಿ ತುಂಗಭದ್ರ ಬಲದಂಡೆ ಕಾಲುವೆಗಳ ಗುತ್ತಿಗೆ ನೌಕರರು ಪ್ರತಿಭಟಿಸಿ, ನಿಗಮದ ಎಇಇ ಯಲ್ಲಪ್ಪ ಇವರಿಗೆ ಮನವಿಪತ್ರ ಸಲ್ಲಿಸಿದರು.

     ಕೆಲ ಕಾರ್ಮಿಕರಿಗೆ ಇಪಿಎಫ್ ಹಣ ಪಾವತಿಸಿಲ್ಲ. ಇಎಪಿಎಫ್ ಸಮರ್ಪಕ ಮಾಹಿತಿಯನ್ನು ನೀಡದೆ ವಂಚಿಸುತ್ತಿದ್ದಾರೆ. ಇಪಿಎಫ್, ಇಎಸ್‍ಐ ಸೌಲಭ್ಯ ನೀಡುವಲ್ಲಿ ಗುತ್ತಿಗೆ ನೌಕರರ ಗುತ್ತಿಗೆದಾರರು ತಾರತಮ್ಯ ಎಸಗುತ್ತಿದ್ದಾರೆ. 2019ರ ಏಪ್ರೀಲ್, ಮೇ ತಿಂಗಳ ವೇತನ, 2019ರ ನವ್ಹಂಬರ್, ಡಿಸ್ಸೆಂಬರ್ ಹಾಗೂ 2020ರ ಜನವರಿ ತಿಂಗಳ ವೇತನ ನೀಡಿರುವುದಿಲ್ಲ. ಇದರಿಂದ ಜೀವನ ನಿರ್ವಹಿಸುವುದು ಕಷ್ಟವಾಗುತ್ತಿದೆ. ಮೂರ್ನಾಲ್ಕು ದಿನದೊಳಗಾಗಿ ವೇತನ ನೀಡದಿದ್ದರೆ ಹೋರಾಟ ಮುಂದುವರೆಸುವುದಾಗಿ ಗುತ್ತಿಗೆ ನೌಕರರ ಸಂಘದ ಕಂಪ್ಲಿ ಘಟಕ ಅಧ್ಯಕ್ಷ ಡಿ.ಆರ್.ಪಾಂಡುರಂಗ ಎಚ್ಚರಿಸಿದರು.

     ನಿಗಮದ ಎಇಇ ಯಲ್ಲಪ್ಪ ಮನವಿಪತ್ರ ಸ್ವೀಕರಿಸಿ ಮಾತನಾಡಿ, ಎಲ್‍ಎಲ್‍ಸಿ ಕಾಲುವೆಯಲ್ಲಿ ನೀರಿದ್ದಾಗ ಮಾತ್ರ ವೇತನ ಪಾವತಿಸು ವುದರಿಂದ 2019ರ ಏಪ್ರೀಲ್, ಮೇ ತಿಂಗಳ ವೇತನ ನೀಡಲಾಗುವುದಿಲ್ಲ. ದರೋಜಿ ಕೆರೆಯ 14ಗುತ್ತಿಗೆದಾರರಿಗೆ ಮಾತ್ರ ವರ್ಷದ 12ತಿಂಗಳ ವೇತನ ನೀಡಲಾಗುವುದು. ಎಲ್‍ಎಲ್‍ಸಿ ಕಾಲುವೆಗಳಲ್ಲಿ ಕಾರ್ಯನಿರ್ವಹಿಸುವ 42ಜನ ಗುತ್ತಿಗೆದಾರ ನೌಕರರಿಗೆ ವರ್ಷದಲ್ಲಿ ಒಂಬತ್ತು ತಿಂಗಳ ವೇತನ ಮಾತ್ರ ವಿತರಿಸಲಾಗುವುದು. ವಾರದೊಳಗಾಗಿ ಬಾಕಿ ಇರುವ ಮೂರು ತಿಂಗಳ ವೇತನ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

     ಪ್ರತಿಭಟನೆಯಲ್ಲಿ ತುಂಗಭದ್ರಾ ಬಲದಂಡೆ ಕಾಲುವೆಗಳ ಗುತ್ತಿಗೆ ನೌಕರರ ಸಂಘದ ಕಂಪ್ಲಿ ಘಟಕದ ಪದಾಧಿಕಾರಿಗಳಾದ ಡಿ.ಆರ್.ಪಾಂಡುರಂಗಪ್ಪ, ಬಿ.ಪಕ್ಕೀರಪ್ಪ, ಎಚ್.ಜಡೆಮೂರ್ತಿ, ಕೆ.ವೆಂಕಟೇಶ್, ಎಂ.ಹುಲುಗಪ್ಪ, ಎಸ್.ಜಡೇಶ್, ಸುಂದರರಾಜ್ ವಿ.ಮಾರೇಶ್, ಗೋವಿಂದಪ್ಪ, ಸೇರಿ ಅನೇಕರಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link