ಹರಪನಹಳ್ಳಿ:
ಬೆಲೆ ಖಾತರಿ, ಕೃಷಿ ಸಾಲ ಭದ್ರತೆಗಾಗಿ ಡಾ.ಸ್ವಾಮಿನಾಥನ್ ಸಮಿತಿ ವರಧಿ ಜಾರಿಗೊಳಿಸಲು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ( ಎಐಕೆಎಸ್) ಪ್ರತಿಭಟನೆ ನೆಡೆಸಿದರು.
ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಹೊರಟ ಪ್ರತಿಭಟನಾಕಾರರು ಮಿನಿ ವಿಧಾನಸೌಧಕ್ಕೆ ತೆರಳಿ ಮನವಿ ಸಲ್ಲಿಸಿದರು.
ಗುಡಿಹಳ್ಳಿ ಹಾಲೇಶ್ ಮಾತನಾಡಿ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಡಾ.ಸ್ವಾಮಿನಾಥನ್ ಸಮಿತಿ ವರದಿ ಶಿಫಾರಸ್ಸಿನಂತೆ ಬೆಂಬಲ ಬೆಲೆ ನೀತಿ ಜಾರಿ ಮಾಡುವುದಾಗಿ ಚುನಾವಣಾ ಪ್ರನಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲವಾದ ಕೇಂದ್ರ ಸರ್ಕಾರ ದೇಶದ ರೈತರಿಗೆ ದ್ರೋಹ ಮಾಡಿದೆ. ಕೇಂದ್ರದ ಬೆಂಬಲ ನೀತಿ ಅವೈಜ್ಞಾನಿಕ ಮತ್ತು ಕಾರ್ಯ ಸಾದ್ಯವಿಲ್ಲದ್ದಾಗಿದ್ದು, ರೈತರ ಕಣ್ಣೊರೆಸುವ ತಂತ್ರವಾಗಿದೆಯೇ ಹೊರತು ಅನುಕೂಲವಾಗಿಲ್ಲ ಎಂದು ಆರೋಪಿಸಿದರು.
ಕಳೆದ ಒಂದುವರ್ಷದಿಂದ ದೆಹಲಿಯಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ನೇತೃತ್ವದಲ್ಲಿ ರೈತಮುಕ್ತಿ ಯಾತ್ರೆ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ. ಋಣಮುಕ್ತಿ ಕಾಯಿದೆ ಅಂಗೀಕಾರಕ್ಕಾಗಿ ಸಂಸತಿನಲ್ಲಿ ಖಾಸಗೀ ಮಸೂದೆಯನ್ನು ಮಂಡಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಇದನ್ನು ನಿರ್ಲಕ್ಷಿಸಿ ಕಾರ್ಪೊರೇಟ್ ಪರ ನಿಂತಿದೆ ಎಂದರು.
ರೈತರ ಹಾಗೂ ಕೃಷಿ ಕಾರ್ಮಿಕರ ಜೀವನಾವಶ್ಯಕ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವಷ್ಟು ಬ್ಯಾಂಕ್ ಸಾಲವನ್ನು ಕಡಿಮೆ ಬಡ್ಡಿ ಧರದಲ್ಲಿ ನೀಡುವುದನ್ನು ಕಡ್ಡಾಯಗೊಳಿಸಿ ಮತ್ತು ಪ್ರಕೃತಿ ವಿಕೋಪ ಮತ್ತಿತರ ವಿಶೇಷ ಸಂದರ್ಭದಲ್ಲಿ ಕೃಷಿ ಸಾಲಮನ್ನಾ ಖಾತರಿಗೊಳಿಸುವ ಋಣ ಮುಕ್ತ ಕಾನೂನು ಜಾರಿಗೊಳಿಸಬೇದು, ಬೆಳೆ ವಿಮಾ ಯೋಜನೆಯನ್ನು ರೈತ ಸ್ನೇಹಿಯಾಗಿ ಪರಿವರ್ತಿಸಿಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಎಸ್‍ಎಫ್ ಮುಖಂಡ ಕೊಟ್ರೇಶ್, ರಾಜ್ಯ ಸಂಚಾಲಕ ಸಂತೋಷ್, ಹೆಚ್.ರವಿಕುಮಾರ್, ರಾಜ್ಯ ಕಾರ್ಯದರ್ಶಿ ರಮೇಶ್ ನಾಯ್ಕ್, ನೀಲಪ್ಪ, ಎಐಕೆಎಸ್ ಅಧ್ಯಕ್ಷ ಗುಡಿಹಳ್ಳ ಹಾಲೇಶ್, ಮತ್ತಿಹಳ್ಳಿ ತಿಂದಪ್ಪ, ಹೆಚ್.ಕೊಟ್ರೇಶ್, ದೊಡ್ಡನಿಂಗಪ್ಪ, ಪಿ.ಉದಯಕುಮಾರ್, ಬಿ,ಶಿವಾನಂದ್, ಸುರೇಶ್.ಎಸ್ ಹಾಗೂ ಇತರರು ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
