ಚಿತ್ರದುರ್ಗ
ಕೆಲಸದ ಮಾಹಿತಿ ಇಲ್ಲ , ಹೊಸ ಕಾರ್ಡ ಇನ್ನು ನೀಡಿಲ್ಲ , ಕೆಲಸ ಕೇಳಿದರೆ ಊರಿನ ಕೆಲಸ ಬಿಟ್ಟು ಬೇರೆ ಊರಿಗೆ ಹೋಗರಿ ಅಂತ ಅಧಿಕಾರಿಗಳ ಮಾತನ್ನು ವಿರೋಧಿಸಿ ಗ್ರಾಮ ಪಂಚಾಯತಿ ಎದುರು ಇಂಗಳದಾಳ್ ಮಹಿಳೆಯರು ಪ್ರತಿಭಟನೆ ನಡೆಸಿದರು.
ತಾಲೂಕಿನ ಇಂಗಳದಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲಕ್ಷಾಂತರ ರೂಪಾಯಿ ಕೆಲಸಗಳು ನಡೆಯುತ್ತಿವೆ. ಆದರೆ ಉದ್ಯೋಗ ಕಾರ್ಡದಾರರಿಗೆ ಕೆಲಸ ನೀಡಿಲ್ಲ. ಕಳೆದ ವರ್ಷ ಕೂಲಿ ಮಾಡಿದ ಹಣ ಬಂದಿಲ್ಲ, ಎಲ್ಲಾ ಮಾಹಿತಿ ಪಡೆದರು ಸಹ ಹಣ ಹಾಕಿಲ್ಲ ಎಂದು ಪಿಡಿಒಗೆ ಪ್ರಶ್ನೆಗಳ ಸುರಿಮಳೆ ಮಾಡಿ ಬೇವರೀಳಿಸಿದರು. ಸತತ ಬರಗಾಲದಿಂದ ಹೊಲ ಮನೆಗಳ ಕೆಲಸಗಳು ನಿಂತು ಹೋಗಿವೆ.
ನೀರಾವರಿ ಕೆಲಸಗಳು ಸಹ ಯಾವುದು ಇಲ್ಲ. ಉದ್ಯೋಗ ಖಾತ್ರಿಯ ಕೆಲಸ ಕೇಳಿದರೆ ನೀವು ಇದುವರೆಗೆ ಬಂದು ಕೆಲಸ ಕೇಳಿಲ್ಲ ಅಂತ ಹೇಳಿದ ಪಿಡಿಒ ಮತ್ತು ಗ್ರಾಮ ಪಂಚಾಯತ ಸದಸ್ಯರಿಗೆ ನೀವು ಕೆಲಸ ಮಾಡಬಹುದು ಇಂತಹ ಜಾಗಗಳಲ್ಲಿ ಕಾಮಗಾರಿ ಇದೆ. ಊರಿನ ಒಳಗೆ ಯಾವುದೇ ಮಾಹಿತಿ ನೀಡದೆ ಅವರವರ ಪಾಡಿಗೆ ಕೆಲಸಗಳು ಮಾಡಿಕೊಳ್ಳುತ್ತಾರೆ. ಎಂದು ಕೆಂಚಮ್ಮ ಪ್ರಶ್ನಿಸಿದರು.
ಮುಂದೆ ಯುಗಾದಿ ಹಬ್ಬ ಮತ್ತು ಮಕ್ಕಳ ಪರೀಕ್ಷೆ ಹತ್ತಿರ ಬರುತ್ತಿರುವುದರಿಂದ ಎಲ್ಲಾ ಕೂಲಿ ಕೆಲಸ ನಿಂತು ಹೋಗಿವೆ ಇಂತಹ ಸಂಧರ್ಭದಲ್ಲಿ ಉದ್ಯೋಗ ಕೆಲಸ ನೀಡಬೇಕು ಎಂದು ಪುಷ್ಪ ಮನವಿ ಮಾಡಿದರು. ವಿನೋದಮ್ಮ ಮತ್ತು ಗಂಗಮ್ಮ ಕಳೆದ ವರ್ಷಗಳಲ್ಲಿ ನಮ್ಮ ಬಳಿ ಕೆಲಸ ಮಾಡಿಸಿಕೊಂಡು ಆಧಾರ ಬ್ಯಾಂಕ ಪುಸ್ತಕ ಪಡೆದು ಒಬ್ಬರಿಗೆ ಹಣ ಬಂದರೆ ಮತ್ತೊಬ್ಬರಿಗೆ ಹಣ ಬಂದಿಲ್ಲ ಹಣ ಕೊಡಿ ಎಂದು ಪಿಡಿಒ ಅವರಿಗೆ ಆಗ್ರಹಿಸಿದರು.
ಕೂಲಿಗಾರರಾದ ಬೊಮ್ಮಕ್ಕ ಮಾತನಾಡಿ ಕೆಲಸ ಕೇಳಿದ ತಕ್ಷಣ ಕುರುಮರಡಿಕೆರೆಗೆ ಕೆಲಸಕ್ಕೆ ಹೋಗಿ ಅಂತ ಹೇಳತ್ತಾರೆ. ನಮ್ಮ ಊರಿನಲ್ಲಿ ಸಾಕಷ್ಟು ಕೆಲಸಗಳನ್ನು ಯಂತ್ರ ಉಪಯೋಗಿಸಿ ಮಾಡಿ ನಮಗೆ ಬೇರೆ ಕಡೆ ಹೋಗಿ ಅಂತ ಹೇಳತ್ತಾರೆ ಇದು ಯಾವ ನ್ಯಾಯ ಹೇಳಿ ಅಂತ ಕೇಳಿದರು.
ಜಿ.ಟಿ.ನಾಗರಾಜ್ ಮಾತನಾಡಿ ಬಡವರಿಗೆ ಬೇರೆ ಹೊಲ ಮನೆ ಕೆಲಸಗಳಿಗೆ ಹೋದರೆ 150ರೂ ಕೊಡುತ್ತಾರೆ. ಉದ್ಯೊಗ ಖಾತ್ರಿ ಕೆಲಸ ನೀಡಿದರೆ ಒಬ್ಬರಿಗೆ ದಿನಕ್ಕೆ 249 ರೂ ನೀಡುತ್ತಾರೆ ಎಂದರೆ ಯಾರು ಕೆಲಸಕ್ಕೆ ಬರಲ್ಲ ಹೇಳಿ ಸ್ವಾಮಿ. ಬಡವರು ಬದುಕುತ್ತಾರೆ. ಖಾತ್ರಿ ಕೆಲಸದ ಮಾಹಿತಿಯನ್ನು ಜನರಿಗೆ ನೀಡಿಲ್ಲ , ವರ್ಷಗಳು ಕಳೆದರು ಜನರ ಸಮಸ್ಯೆಗಳನ್ನು ಕೇಳುವುದಿಲ್ಲ ಎಂದು ದೂರಿದರು. ಪಾರ್ವತಮ್ಮ ಸಹ ಧ್ವನಿಗೂಡಿಸಿ ಹೆಣ್ಣು ಮಕ್ಕಳು ಸಹ ಯಾವ ಕೆಲಸ ಮಾಡತ್ತಿರ ಗಂಡು ಹಾಳು ಕರೆದುಕೊಂಡು ಬನ್ನಿ ಅಂತ ಪಿಡಿಒ ಹೇಳತ್ತಾರೆ.
ಗಂಡ ಮಕ್ಕಳು ಬರಲ್ಲ ಅಂದರೆ ನಾವು ಏನು ಮಾಡೋಣ ನಮಗೆ ಕೆಲಸ ಕೊಡಲಿ ನಾವು ಮಾಡತ್ತಿವಿ ಅದನ್ನು ಬಿಟ್ಟು ಸುಮ್ಮನೆ ಕಥೆ ಹೇಳತ್ತಾರೆ ಎಂದರು. ಯಾವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಹ ಮಾಹಿತಿ ನೀಡಲ್ಲ. ಅಧಿಕಾರಿಗಳು ಊರಿನ ಒಳಗೆ ಬಂದು ಇಲ್ಲಿಯವರೆಗೂ ಜನರ ಕಷ್ಟಗಳನ್ನು ಆಲಿಸಿಲ್ಲ ಅಂದರೆ ನಮ್ಮ ಕಷ್ಟ ಯಾರು ಕೇಳಬೇಕು. ಒಟ್ಟಿನಲ್ಲಿ ನಮಗೆ ಕೂಡಲೇ ಕೆಲಸವನ್ನು ನೀಡಬೇಕು. ಮತ್ತು ಮಾಡಿದ ಕೆಲಸಕ್ಕೆ ಇಂಜಿನಿಯರ್ ಕಡಿಮೆ ಯಣ ಹಾಕುತ್ತಾರೆ. ಅದು ಆಗದೇ ಸರಿಯಾದ ರೀತಿಯಲ್ಲಿ ಹಣ ಹಾಕಿಸಬೇಕು.
ಹೀಗೆ ಕೆಲವರಿಗೆ ಹೊಸ ಕಾರ್ಡ ನೀಡಿಲ್ಲ. ಇನ್ನು ಕೇಲವರು ಹೊಸ ಕಾರ್ಡ ಬಂದಿದೆ ಎಂದು ತಿಳಿದಿಲ್ಲ ಎಂದು ಜನರು ತಿಳಿಸಿದರೆ ಜನರು ಕಾರ್ಡಗಳು ರೆಡಿಯಾಗಿದೆ ಬಂದು ತೆಗೆದುಕೊಂಡು ಹೋಗಲಿ ಎಂದು ಅಧಿಕಾರಿ ವರ್ಗ ಮತ್ತು ಗ್ರಾ.ಪಂ.ಸದಸ್ಯರು ಹೇಳುತ್ತಾರೆ. ಬಡ ಜನರು ಮೇಲೆ ಪ್ರಭಾವ ಬೀರುವ ಬದಲು ನೂರಾರು ಖಾಲಿ ಕೈಗಳಿಗೆ ಕೆಲಸ ನೀಡಿದರೆ ಬದುಕು ನಡೆಸಲು ಅನುಕೂಲವಾಗುತ್ತದೆ ಎಂದು ನೂರರು ಜನರು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ