ಬೆಂಗಳೂರು:
ಅಪರಾಧಿಗಳ ಜೊತೆ ಉಪನಗರ ಠಾಣೆ ಪಿಎಸ್‍ಐ ಡ್ಯಾನ್ಸ್ ಮಾಡಿರುವ ಪ್ರಕರಣ ಸಂಬಂಧಿಸಿದಂತೆ ಉತ್ತರ ಉಪವಿಭಾಗ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಿಡಿಯೋದಲ್ಲಿರುವವರು ಯಾರು ಅಂತ ಗೊಂದಲವಿದೆ.ಕೆಲವರು ಪಿಎಸ್‍ಐ ಅಂದರೆ.ಇನ್ನು ಕೆಲವರು ಎಎಸ್‍ಐ ಎನ್ನುತ್ತಿದ್ದಾರೆ.ಹೀಗಾಗಿ ಉತ್ತರ ಉಪವಿಭಾಗದ ಎಸಿಪಿಗೆ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ.ಪೊಲೀಸ್ ಇಲಾಖೆಯಲ್ಲಿ ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹೀಗಾಗಿ ಯಾರು ಅಂತ ಗೊತ್ತಾದ ಮೇಲೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳತ್ತೇವೆ ಎಂದರು.
ಅಂದ ಹಾಗೇ ಹುಬ್ಬಳ್ಳಿಯಉಪನಗರ ಪೊಲೀಸ್ ಠಾಣೆಯ ಪಿಎಸ್‍ಐ ಬಸವರಾಜ ಹೂಗಾರ ಅಪರಾಧಿಗಳ ಜೊತೆ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದಾರೆ.ಕುಡಿದ ಮತ್ತಿನಲ್ಲಿ ಕೋರ್ಟ್‍ನಿಂದ ಅಪರಾಧ ಸಾಬೀತಾದವರ ಜೊತೆ ಹುಬ್ಬಳ್ಳಿ ಹೊರವಲಯದ ನಡುರಸ್ತೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.ಸಬ್‍ಜೈಲ್ ಗಲಾಟೆ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ದುರ್ಗಪ್ಪ ಬಿಜವಾಡ ಹಾಗೂ ಶಿವರಾಜ್ ಗೌರಿ ಜೊತೆ ಪಿಎಸ್‍ಐ ಡ್ಯಾನ್ಸ್ ಮಾಡಿದ್ದಾರೆ.
ಡಿ.16 ರಂದು ಹುಬ್ಬಳ್ಳಿಯ ಸೆಷನ್ಸ್ ನ್ಯಾಯಲಯ ಇವರ ವಿರುದ್ದ ತೀರ್ಪು ನೀಡಿತ್ತು.3ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ಬೇಲ್ ನೀಡಿತ್ತು. ಅದೇ ಜೈಲು ಶಿಕ್ಷೆಗೊಳಗಾದ ಅಪರಾಧಿಗಳ ಜೊತೆ ಪಿಎಸ್‍ಐ ಡ್ಯಾನ್ಸ್ ಮಾಡಿದ್ದಾರೆ. ರೌಡಿಶೀಟರ್‍ಗಳಾದ ದುರ್ಗಪ್ಪ ಬಿಜವಾಡ ಹಾಗೂ ಶಿವರಾಜ್ ಗೌರಿ ವಿರುದ್ಧ ಇದೇ ಅಶೋಕ ನಗರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿ ಕೋರ್ಟ್‍ನಿಂದ ಶಿಕ್ಷೆಯಾಗಿತ್ತು.ಆದರೆ ಇದೀಗ ಅದೇ ಠಾಣೆಯ ಪಿಎಸ್‍ಐ ಹುಬ್ಬಳ್ಳಿಯ ಹೊರವಲಯದ ರಸ್ತೆ ಮಧ್ಯದಲ್ಲಿ ಫುಲ್ ಡ್ಯಾನ್ಸ್ ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
