ಪುಸ್ತಕ ಬಿಡುಗಡೆ ಸಮಾರಂಭ

ಹಾವೇರಿ :

      ಜಿಲ್ಲೆಯ ಆರು ಜನ ಯುವ ಬರಹಗಾರರು ಬರೆದ ಆರಂಕಣಕಾರರು ಮತ್ತು ಕವಯತ್ರಿ ಶ್ರೀಮತಿ ಗಾಯತ್ರಿ ರವಿಯವರ ಕುರುಡನಿಗೆ ಕನ್ನಡಿ ಎಂಬೆರಡು ಪುಸ್ತಕಗಳ ಬಿಡುಗಡೆ ಸಮಾರಂಭ ಇಲ್ಲಿಯ ಹೊಸಮಠದ ಆವರಣದಲ್ಲಿ ಜರುಗಿತು.

    ಹೊಸಮಠದ ಬಸವಶಾಂತಲಿಂಗ ಮಹಾಸ್ವಾಮಿಗಳವರು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಸಮಕಾಲೀನ ಸಮಸ್ಯೆಗಳನ್ನು ಅರ್ಥೈಸಿ ಅವಗಳಿಗೊಂದು ತಕ್ಷಣದ ಪ್ರತಿಕ್ರಿಯೆ ನೀಡಿ ಚರ್ಚೆಗೊಡ್ಡುವ ಶಕ್ತಿ ಅಂಕಣ ಬರಹಗಳಿಗಿದೆ. ಹಾವೇರಿ ನೆಲದ ಆರು ಯುವ ಬರಹಗಾರರ ಸಂಪಾದಿತ ಆರಂಕಣಕಾರರು ಕೃತಿಯಲ್ಲಿ ವೈಚಾರಿಕತೆ ಮತ್ತು ಮೌಢ್ಯ ವಿರೋಧಿ ಧೋರಣೆಗಳಿರುವುದು ಸ್ವಾಗತಾರ್ಹ ಎಂದು ಹೇಳಿ, ಇದೊಂದು ಸಾಮಾಜಿಕ ಜಾಗೃತಿಯ ಕೆಲಸ ಎಂದೂ ಸ್ವಾಮಿಜಿಯವರು ಹೇಳಿದರು.

       ತಮ್ಮ ಜೀವನದ ಕಂಡುಂಡ ಸಹಜ ಅನುಭವಗಳನ್ನು ಕುರುಡನಿಗೆ ಕನ್ನಡಿ ಕಾವ್ಯ ಸಂಕಲನದಲ್ಲಿ ಬಹಳ ಸೂಕ್ಷ್ಮಕವಾಗಿ ಶ್ರೀಮತಿ ಗಾಯತ್ರಿ ರವಿ ಚಿತ್ರಿಸಿದ್ದಾರೆ. ಇದು ಹೊಸ ಕವಿಗಳಿಗೆ ಕಾವ್ಯ ಪ್ರೀತಿ ಬೆಳೆಯಲು ಕಾರಣವಾಗಿದೆ ‘ ಎಂದು ಇನ್ನೊಂದು ಪುಸ್ತಕ ಕುರಿತು ಬಸವಶಾಂತಲಿಂಗ ಮಹಾಸ್ವಾಮಿಗಳು ನುಡಿದರು.

       ಸಾನಮಿಧ್ಯದ ನುಡಿಗಳನ್ನಾಡಿದ ಹುಕ್ಕೇರಿಮಠದ ಸದಾಶಿವ ಸ್ವಾಮಿಗಳವರು ಬರಹಗಾರರಾಗಬೇಕು ಸಾಧ್ಯವಾಗದಿದ್ದರೆ ಬರಹಗಾರರಿಗೆ ಪ್ರೇರಣೆ ನೀಡಬೇಕು. ಈ ಎರಡೂ ಕೆಲಸಗಳು ಆರಂಕಣಕಾರರು ಮತ್ತು ಕುರುಡನಿಗೆ ಕನ್ನಡಿ ಪುಸ್ತಕಗಳ ಸಂದರ್ಭದಲ್ಲಿ ಆಗಿರುವುದು ಶ್ಲಾಘನೀಯ. ಹಲವು ಹೊಸ ಬರಹಗಾರರಿಗೆ ನೆಲೆ ಕಲ್ಪಿಸುವುದುನ ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದರು.

       ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ.ವಿ.ಪ್ರ. ನೌಕರರ ಸಂಘದ ನಾಯಕರಾದ ವಿಜಯಕುಮಾರ ಮುದಕಣ್ಣನವರ ಮಾತನಾಡಿ ಹೊಸ ಕಾಲದಲ್ಲಿ ಪುಸ್ತಕದ ಸ್ವರೂಪ ಮತ್ತು ಅಸ್ತಿತ್ವ ತುಂಬ ಬೇರೆಯಾಗಿದೆ. ಕ್ಷಣಾರ್ಧದಲ್ಲಿ ನೂರಾರು ಪುಟಗಳ ಪುಸ್ತಕಗಳನ್ನು ಅಂತರ್ ಜಾಲದಲ್ಲಿ ಮುಳಿಗಿಸಿ ಬಿಡುವ ಈ ದಿನಗಳಲ್ಲಿ ಪುಸ್ತಕಗಳು ಉಳಿಯಬೇಕು. ಪುಸ್ತಕದ ಓದು ಮಾತ್ರ ಸುಖ ಕೊಡಬಲ್ಲವು. ಪುಸ್ತಕ ಸಂಸ್ಕøತಿ ನಾಶವಾಗಬಾರದು ಎಂದರು.

      ಆರಂಕಣಕಾರರು ಕೃತಿಯನ್ನು ಪರಿಚಯಿಸಿದ ಲೇಖಕಿ ಶ್ರೀಮತಿ ರೇಖಾ ಭ್ಯರಕ್ಕನವರ ಅವರು ಸರಳ ಭಾಷೆ, ನಿತ್ಯದ ಜ್ವಲಂತ ಅನುಭವಗಳನ್ನು ಕಟ್ಟಿಕೊಡವ ಅಂಕಣ ಬರಹ ತುಂಬ ಕಠಿಣವಾದ ಕೆಲಸ. ಆದರೆ ಹಾವೇರಿ ಆರು ಹಿಒಸ ಪ್ರತಿಭೆಗಳು ವಿಮರ್ಶೆ, ಲಲಿತ ಪ್ರಬಂಧ ಹಾಗೂ ಸಾಮಾಜಿಕ ಸಮಸ್ಯೆಗಳ ಬರೆದ ಆರಂಕಣಕಾರರು ಓದಿಗೆ ಸೆಳೆಯುವ ಕೃತಿ ಎಂದರು.

       ಶ್ರೀಮತಿ ಗಾಯತ್ರ್ರಿ ರವಿ ಅವರ ಕುರುಡನಿಗೆ ಕನ್ನಡಿ ಸಂಕಲನದ ಪರಿಚಯ ಮಾಡಿಕೊಟ್ಟ ಪ್ರತಿಭಾವಂತ ಕವಿ ಶಿಗ್ಗಾವಿಯ ರಂಜಾನ ಕಿಲ್ಲೇದಾರವರು ಮಾತು ಮತ್ತು ಮೌನಗಳ ಮೌಲ್ಯಗೊತ್ತಿರುವ ಶ್ರಿಮತಿ ಗಾಯತ್ರಿ ರವಿಯವರು ಅತ್ಯಂತ ಸೂಕ್ಷ್ಮಗ್ರಾಹಿಯಾಗಿ ಕಾವ್ಯ ರಚಿಸಿದ್ದು ಹಾವೇರಿ ನೆಲದ ಹೆಮ್ಮೆಯಾಗಿದೆ’ ಎಂದರು.

       ಈ ಸಂದರ್ಭದಲ್ಲಿ ಆರಂಕಣಕಾರರು ಕೃತಿಯೊಳಗಿನ ಲೇಖಕರುಗಳಾದ ಸರ್ವಶ್ರೀ ವಾಗೀಶ ಬ. ಹೂಗಾರ , ಜಿ. ಎಂ. ಓಂಕಾರಣ್ಣನವರ, ಚಿನ್ನು ಎಸ. ರಾಗಿ ( ಸವಣೂರು ) , ಶ್ರೀಮತಿ ಗಾಯತ್ರಿ ರವಿ, ಶ್ರೀಮತಿ ಲತಾ ರಮೇಶ ವಾಲಿ ( ಸವಣೂರು ) ಹಾಗೂ ಶ್ರ್ರೀಮತಿ ರಾಜೇಶ್ವರಿ ರವಿ ಸಾರಂಗಮಠ ಅವರುಗಳನ್ನು ಸನ್ಮಾನಿಸಲಾಯಿತು.

        ಸಮಾರಂಭದಲ್ಲಿ ಗಣ್ಯರಾದ ಸರ್ವಶ್ರೀ ಡಾ. ಜೆ.ಜಿ. ದೇವಧರ, ಶ್ರೀಮತಿ ಮಾಧುರಿ, ನಾಗೇಂದ್ರ ಕಟಕೋಳ, ಎನ್ ಕೆ. ಮರೋಳ, ಕರಿಯಪ್ಪ ಹಂಚಿನಮನಿ, ವಾಯ್. ಬಿ. ಆಲದಕಟ್ಟಿ, ಗಂಗಾಧರ ನಂದಿ, ಮಾರುತಿ ಶಿಡ್ಲಾಪೂರ, ದಾಕ್ಷಾಯಿಣಿ ಗಾಣಗೇರ, ಲಲಿತಕ್ಕ ಹೊರಡಿ, ರುದ್ರಪ್ಪ ಜಾಬೀನ, ಸಿ. ಎ. ಕೂಡಲಮಠ, ಶಶಿಕಲಾ ಅಕ್ಕಿ, ಮುಂತಾದವರು ಭಾಗವಹಿಸಿದ್ದರು.

       ಆರಂಭದಲ್ಲಿ ಕುಮಾರಿ ವೈಷ್ಣವಿ ಪ್ರಾರ್ಥನೆ ಹಾಡಿದಳು. ನಾಗರಾಜ ನಡವಿನಮಠ ಸ್ವಾಗತಿಸಿದರೆ, ಎಸ್. ಆರ್. ಹಿರೇಮಠ ಪ್ರಸ್ತಾವಿಕ ನುಡಿಗಳನ್ನಾಡಿದರು. ಮಲ್ಲಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಪೃಥ್ವಿರಾಜ ಬೆಟಗೇರಿಯವರು ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link