ರಾಗಿ ಖರೀದಿ ಕೇಂದ್ರ ಉದ್ಘಾಟನೆ

ಗುಬ್ಬಿ

         ರಾಜ್ಯ ಸರ್ಕಾರ ರೈತರ ಅಭ್ಯುದಯಕ್ಕೆ ಹಲವಾರು ಮಹತ್ವದ ಯೋಜನೆಗಳನ್ನು ರೂಪಿಸಿದ್ದು ರಾಗಿ ಉತ್ಪನ್ನಕ್ಕೆ ಉತ್ತಮ ಬೆಲೆ ನಿಗಧಿಗೊಳಿಸುವ ಸದುದ್ದೇಶದಿಂದ ಸರ್ಕಾರ ರಾಗಿ ಖರೀದಿ ಕೇಂದ್ರವನ್ನು ತೆರೆದು ನೇರವಾಗಿ ರೈತರಿಂದ ರಾಗಿ ಪಡೆಯುತ್ತಿರುವುದು ಉತ್ತಮ ನಿರ್ಧಾರ ಎಂದು ಎಪಿಎಂಸಿ ಅಧ್ಯಕ್ಷ ರೇವಣ್ಣ ತಿಳಿಸಿದರು.

         ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟನೆ ಮಾಡಿ ಮಾತನಾಡಿದ ಅವರು ಈ ದೇಶದ ಅನ್ನದಾತ ರೈತ ಅವರು ಬೆಳೆದಂತಹ ಬೆಳೆಗಳಿಗೆ ಸೂಕ್ತವಾದ ಬೆಂಬಲ ಬೆಲೆ ನೀಡುವ ಉದ್ದೆಶದಿಂದ ಸರ್ಕಾರ ನೇರವಾಗಿ ಯಾವುದೆ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಮಾರಾಟ ಮಾಡಲು ಉತ್ತಮ ಅವಕಾಶ ನೀಡಿದ್ದು ಇದನ್ನು ಎಲ್ಲಾ ರೈತಾಪಿ ವರ್ಗದವರು ಸದುಪಯೋಗ ಮಾಡಿಕೊಳ್ಳಬೇಕುಟೆಂದು ತಿಳಿಸಿದರು.

        ರಾಗಿ ಬೆಲೆಗೆ ಸೂಕ್ತವಾದ ಬೆಂಬಲ ಬೆಲೆ ನೀಡಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು ಈ ತಿಂಗಳ 31 ರವರೆಗೂ ಸಹ ರಾಗಿ ಖರೀದಿ ಕೇಂಧ್ರ ತೆರೆಯಲಿದ್ದು ತಾಲ್ಲೂಕಿನ ರೈತರು ತಮ್ಮ ರಾಗಿ ದಾಸ್ತಾನನ್ನು ನೇರವಾಗಿ ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಿದರು.

        ಕರ್ನಾಟಕ ಆಹಾರ ಸರ¨ರಾಜು ವ್ಯವಸ್ಥಾಪಕ ಕೃಷ್ಣಯ್ಯ ಮಾತನಾಡಿ ಪ್ರತಿ ಕ್ವಿಂಟಾಲ್ ಗೆ ಸರಕಾರವು 2897 ರೂ ಗಳನ್ನು ನಿಗಧಿ ಮಾಡಿದ್ದು ಅದರಂತೆ ಒಬ್ಬ ರೈತರಿಂದ 75 ಕ್ವಿಂಟಾಲ್ ಪಡೆದುಕೊಳ್ಳಲು ಅವಕಾಶವಿದೆ ಅದಕ್ಕೂ ಮುಂಚೆ ರೈತರಿಗೆ ಎಷ್ಟು ಭೂಮಿ ಇದೆ ರಾಗಿ ಬೆಳೆದಿರುವ ಸ್ಥಳದ ಪಹಣಿ ಹಾಗೂ ಇನ್ನಿತರೆ ಮಾಹಿತಿಯನ್ನು ಮೊದಲು ಒದಗಿಸಿದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಇದರಿಂದ ಯಾವುದೇ ಮದ್ಯ ವರ್ತಿಗಳ ಹಾವಳಿಯಿಲ್ಲದ ರೀತಿಯಲ್ಲಿ ರೈತರು ನೇರ ಮಾರುಕಟ್ಟೆ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

          ಇದೆ ಸಂದರ್ಭದಲ್ಲಿ ಎಪಿಎಂಸಿ ನಿರ್ದೆಶಕರಾದ ಹೆಚ್.ಸಿ.ಪ್ರಭಾಕರ್, ಕಳ್ಳಿಪಾಳ್ಯ ಲೋಕೇಶ್, ಲಕ್ಷ್ಮೀರಂಗಯ್ಯ, ವಿ.ವೀರಭದ್ರಯ್ಯ, ಕರಿಬಸವಣ್ಣ, ಶಿವಕುಮಾರ್ ಸೇರಿದಂತೆ ಎಪಿಎಂಸಿ ಅಧಿಕಾರಿ ವರ್ಗದವರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap