ರೈಲ್ವೆ ಗೇಟ್ ಸಮಸ್ಯೆ ಪರಿಹಾರಕ್ಕೆ ಕಾಂಗ್ರೆಸ್ ಬೆಂಬಲಿಸಿ

ದಾವಣಗೆರೆ :

         ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಶೋಕ ರಸ್ತೆ ರೈಲ್ವೆಗೇಟ್ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರನ್ನು ಬೆಂಬಲಿಸಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಮನವಿ ಮಾಡಿದರು.

         ನಗರದ ಶಾಮನೂರು ಪಾರ್ಕ್, ಎಂ.ಸಿ.ಸಿ. ‘ಬಿ’ ಬ್ಲಾಕ್‍ನಲ್ಲಿರುವ ಟೀ ಲಾಂಜ್, ಸಿಜಿ ಆಸ್ಪತ್ರೆ ರಸ್ತೆಯ ಇಂಡಿಯಾನ್ ಕಾಫಿಬಾರ್, ಪಿ.ಜೆ. ಬಡಾವಣೆಯ ಗುಡ್‍ಫುಡ್ ಮತ್ತು ಎಂ.ಸಿ.ಸಿ. ‘ಎ’ ಬ್ಲಾಕ್‍ನಲ್ಲಿರುವ ಹೊಟೇಲ್‍ಗಳು ಹಾಗೂ ವಾಯುವಿಹಾರಕ್ಕೆ ಬಂದ ನಾಗರೀಕರನ್ನು ಭೇಟಿ ಮಾಡಿ ಮತಯಾಚಿಸಿ ಅವರು ಮಾತನಾಡಿದರು.

         ಕಾಂಗ್ರೆಸ್ ಪಕ್ಷದ ಸಂಸದರು ಲೋಕಸಭೆಗೆ ಆಯ್ಕೆಯಾದರೆ, ರಾಜ್ಯದ ಕೇಂದ್ರ ಬಿಂದುವಾದ ದಾವಣಗೆರೆ ಮಹಾನಗರಕ್ಕೆ ವಿಮಾನ ನಿಲ್ದಾಣ, ನಗರದ ಅಶೋಕ ಟಾಕೀಸ್ ರೈಲ್ವೆ ಗೇಟ್ ಸಮಸ್ಯೆಗೆ ಶಾಶ್ವತ ಪರಿಹಾರ ಮತ್ತು ಜಿಲ್ಲೆಗೆ ಹೊಸ ಕೈಗಾರಿಕೆಗಳನ್ನು ತಂದು ಯುವಕರಿಗೆ ಉದ್ಯೋಗ ಕಲ್ಪಿಸಲಿದ್ದಾರೆಂದು ಭರವಸೆ ನೀಡಿದರು.

        ಕಳೆದ ಎರಡುವರೆ ದಶಕಗಳಿಂದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹೆಸರಿಗೆ ಅಷ್ಟೆ ಬಿಜೆಪಿ ಸಂಸದರಿದ್ದು, ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕೇಂದ್ರದಿಂದ ಜಿಲ್ಲೆಗೆ ಯಾವುದೇ ಯೋಜನೆಗಳು ಬಂದಿಲ್ಲ. ಬದ್ಧತೆಯಿರುವ ಲೋಕಸಭಾ ಸದಸ್ಯರ ಆಯ್ಕೆಯಾಗಬೇಕಿದ್ದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ. ಮಂಜಪ್ಪನವರನ್ನು ಆಯ್ಕೆ ಮಾಡಿದರೆ ಲೋಕಸಭಾ ಚಿತ್ರಣವೇ ಬದಲಾಗಲಿದೆ ಎಂದರು.

        ಈ ಸಂದರ್ಭದಲ್ಲಿ ನಗರ ಸಭೆಯ ಮಾಜಿ ಅಧ್ಯಕ್ಷ ಆರ್.ಹೆಚ್.ನಾಗಭೂಷಣ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಯುವಕ ಕಾಂಗ್ರೆಸ್ ಅಧ್ಯಕ್ಷ ಎನ್.ಚಂದ್ರು, ಕಾಂಗ್ರೆಸ್ ಮುಖಂಡರುಗಳಾದ ಮಹಮ್ಮದ್ ಅಲಿ, ಆಕಾಶ್, ಮುರಳಿ, ಸುರಜ್, ಎಸ್. ಪ್ರಶಾಂತ್, ಗಜೇಂದ್ರ, ಜಗನಾಥ್, ಸ್ಟೇಡಿಯಂ ಕಲ್ಲೇಶ್ವರ ತಿಪ್ಪಣ್ಣ, ರಾಜುರೆಡ್ಡಿ, ಆನಕೊಂಡ ದೇವರಾಜ್, ಪ್ರಭುಸ್ವಾಮಿ, ಮುದೇಗೌಡ್ರು ಜಗದೀಶ್, ಹೆಚ್.ಹರೀಶ್, ಸ್ಟೇಡಿಯಂ ಮಂಜುನಾಥ್ ಮತ್ತಿತರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link