ನೀರಿನ ಘಟಕ ದುರಸ್ಥಿಗೆ ಗ್ರಾಮಸ್ಥರ ಆಗ್ರಹ

ಹುಳಿಯಾರು:

    ಹುಳಿಯಾರು ಹೋಬಳಿಯ ಬೆಳ್ಳಾರ ಗ್ರಾಮದ ಶುದ್ಧ ನೀರಿನ ಘಟಕ ಕೆಟ್ಟು 2 ತಿಂಗಳಾಗಿದ್ದು ತಕ್ಷಣ ದುರಸ್ಥಿ ಮಾಡಿ ಪುಣ್ಯ ಕಟ್ಕೊಳ್ಳಿ ಎಂದು ಜಿಪಂ ಮಾಜಿ ಸದಸ್ಯ ಬೆಳ್ಳಾರಈರಣ್ಣ ಅವರು ಮನವಿ ಮಾಡಿದ್ದಾರೆ.

    ಬೆಳ್ಳಾರ ಗ್ರಾಮದ 450 ಮನೆಗಳೂ ಸೇರಿದಂತೆ ಸಮೀಪದ 2 ಗೊಲ್ಲರಹಟ್ಟಿಗಳು, ಮುತ್ತುಗದಹಳ್ಳಿ, ಅಂಬಾರಪುರ ಗ್ರಾಮಗಳ ಜನರಿಗೆ ಈ ಶುದ್ಧ ನೀರಿನ ಘಟಕ ನೀರು ಪೂರೈಸುತ್ತಿತ್ತು. ಆದರೆ 2 ತಿಂಗಳಿಂದ ಈ ಘಟಕ ಕೆಟ್ಟಿದ್ದು ಶುದ್ಧ ನೀರಿಗೆ ಜನ ಪರದಾಡುವಂತ್ತಾಗಿದೆ.

    ಈ ಫಿಲ್ಟರ್ ನೀರು ಕುಡಿದು ಅಭ್ಯಾಸವಾಗಿರುವ ಜನರಿಗೆ ಕೊಳವೆ ಬಾವಿಯ ನೀರು ಕುಡಿದರೆ ನೆಗಡಿ, ಕೆಮ್ಮು, ಗಂಟಕ ಕೆರತ ಸೇರಿದಂತೆ ಅನೇಕ ತೊಂದರೆಗಳು ಕಾಣಿಕೊಳ್ಳುತ್ತಿದೆ. ಹಾಗಾಗಿ ಫಿಲ್ಟರ್ ನೀರು ಕುಡಿಯುವ ಸಲುವಾಗಿ ಐದಾರು ಕಿ.ಮೀ. ದೂರದ ಹೊಯ್ಸಲಕಟ್ಟೆ, ಬಡಕೆಗುಡ್ಲು ಗ್ರಾಮದ ನೀರಿನ ಘಟಕದಿಂದ ನೀರು ತಂದು ಕುಡಿಯುತ್ತಿದ್ದಾರೆ.

    ಕೆಟ್ಟಿರುವ ಶುದ್ಧ ನೀರಿನ ಘಟಕವನ್ನು ರಿಪೇರಿ ಮಾಡಿಸುವಂತೆ ಗ್ರಾಪಂಗೆ ಕೇಳಿಕೊಂಡರೆ ನಮಗೆ ಈ ಘಟಕವನ್ನು ಹಸ್ತಾಂತರಿಸಿಲ್ಲ ಹಾಗಾಗಿ ನಾವು ದುರಸ್ಥಿ ಮಾಡಿಲಾಗುವುದಿಲ್ಲ ಎಂದೇಳಿ ಜಾರಿಕೊಳ್ಳುತ್ತಾರೆ. ಜಿಪಂ ಸದಸ್ಯ ಮಹಾಲಿಂಗಪ್ಪ ಅವರಿಗೆ ದೂರವಾಣಿ ಮೂಲಕ ಹತ್ತನ್ನೆರಡು ಬಾರಿ ವಿಷಯ ತಿಳಿಸಿದರೂ ದುರಸ್ಥಿ ಮಾಡಿಸುವ ಭರವಸೆ ನೀಡುತ್ತಾರೆ ವಿನಃ ಇದೂವರೆವಿಗೂ ದುರಸ್ಥಿ ಮಾಡಿಸಿಲ್ಲ.

    ಮೇಲಧಿಕಾರಿಗಳು ಇನ್ನಾದರೂ ಕೆಟ್ಟಿರುವ ಶುದ್ಧ ನೀರಿನ ಘಟಕವನ್ನು ದುರಸ್ಥಿ ಮಾಡಿಸಿ ಹಳ್ಳಿ ಜನರಿಗೆ ಶುದ್ಧ ನೀರು ಕುಡಿಯುವ ಭಾಗ್ಯ ಕರುಣಿಸಲಿ ಎಂದು ಜಿಪಂ ಮಾಜಿ ಸದಸ್ಯ ಬೆಳ್ಳಾರ ಈರಣ್ಣ ಒತ್ತಾಯಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link