ಉಗ್ರರ ನಿಗ್ರಹದಳ ಸ್ಥಾಪನೆಗೆ ಒತ್ತಾಯ..!!

ತುರುವೇಕೆರೆ:

       ಬೆಂಗಳೂರು ನಗರದಲ್ಲಿ ರಾಜ್ಯ ಉಗ್ರರ ನಿಗ್ರಹ ದಳ ಸ್ಥಾಪನೆ ಮಾಡಬೇಕೆಂದು ಸರ್ಕಾರಕ್ಕೆ ವಿಶ್ವ ಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.

        ಪಟ್ಟಣದ ಸಿಪಿಐ ಕಚೇರಿಯಲ್ಲಿ ಅಡಿಷನಲ್ ಡಿವೈಎಸ್.ಪಿ ಶಾಂತವೀರ ಮೂಲಕ ಸರ್ಕಾರದ ರಾಜ್ಯ ಮುಖ್ಯ ಕಾರ್ಯದರ್ಶಿ, ಗೃಹ ಸಚಿವರಿಗೆ, ಡಿಜಿಪಿರವರುಗಳಿಗೆ ಮನವಿ ಪತ್ರ ನೀಡಿದ ಅವರು ಮಾತನಾಡಿ ಪ್ರಸ್ತುತ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರತಿ ದಿನ ಹತ್ತಾರು ಲಕ್ಷ ಜನ ಬಂದು ತೆರಳುತ್ತಾರೆ. ವಿಶ್ವದಲ್ಲಿಯೇ ಹೆಚ್ಚು ವೇಗವಾಗಿ ಬೆಂಗಳೂರು ನಗರ ಬೆಳೆಯುತ್ತಿದೆ.

      ಅದರಂತೆ ತುಮಕೂರು, ಮಂಗಳೂರು, ಹುಬ್ಬಳಿ, ಬೆಳಗಾವಿ ಮುಂತಾದ ನಗರಗಳು ಬೆಳೆಯುತ್ತಿದ್ದು, ಆದರೆ ನಮ್ಮ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಬಿಟ್ಟರೆ ಬೇರೆ ವಿಶೇಷ ಧಳದ ಸುರಕ್ಷತಾ ಕ್ರಮಗಳು ಇಲ್ಲ. 2010ರಿಂದಲೂ ಉಗ್ರ ನಿಗ್ರಹ ದಳ ಸ್ಥಾಪಿಸಿ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತಿದೆ. ಈಗಾಗಲೇ ಬೆಂಗಳೂರು ನಗರ ಸೇರಿದಂತೆ ರಾಷ್ಟ್ರೀಯ ಮಟ್ಟದಲ್ಲಿ ಉಗ್ರರ ಅಟ್ಟಹಾಸ, ಬಾಂಬ್‍ಬ್ಲಾಸ್ಟ್, ಅತ್ಮಾಹುತಿ ದುರಂತಗಳು ನೆಡೆಯುತ್ತಿವೆ. ಇತ್ತೀಚೆಗೆ ನೆಡೆದ ಶ್ರೀಲಂಕ ಘಟನೆಯನ್ನು ನೆನಪಿಸಬಹುದಾಗಿದೆ. ರಾಜ್ಯದಲ್ಲಿ ಘಟನೆಗಳು ಆದ ನಂತರ ಪಶ್ಚಾತ್ತಾಪ ಪಡುವುದಕಿಂತ ಸರ್ಕಾರ ಮುಂದಾಲೋಚನೆಯಿಂದ ಉಗ್ರರ ನಿಗ್ರಹ ದಳ ಸ್ಥಾಪಿಸಿ ಮುಂದಾಗಬಹುದಾದ ಘಟನೆಗಳನ್ನು ತಡೆಯಬಹುದಾಗಿದೆ ಎಂದರು. ಈ ಸಂದರ್ಬದಲ್ಲಿ ಸಿಪಿಐ ಸಲೀಂ ಅಹಮದ್ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link