ಬೆಂಗಳೂರು
ಯುವತಿಯ ವಿಚಾರದಲ್ಲಿ ಉಂಟಾದ ಜಗಳದಲ್ಲಿ ಬ್ಯಾಟರಾನಪುರದ ರೌಡಿ ಮಂಜುನಾಥ್ ಅಲಿಯಾಸ್ ರೋಮಿಯೋನನ್ನು ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ಬ್ಯಾಟರಾಯನಪುರ ಪೊಳೀಸ್ ಠಾಣಾ ವ್ಯಾಪ್ತಿಯ ಪಂತರಪಾಳ್ಯದಲ್ಲಿ ನಡೆದಿದೆ.
ಪಂತರಪಾಳ್ಯದ ಅಂಬೇಡ್ಕರ್‍ನಗರದ ಮಂಜುನಾಥ್(24)ನನ್ನು ಕೊಲೆಗೈದ ತಿಲಕ್‍ನಗರದ ಹಳೆಯ ಆರೋಪಿ ಮುರುಗೇಶ್ ಅಲಿಯಾಸ್ ಅಪ್ಸರ್‍ನನ್ನು ಬಂಧಿಸಿರುವ ಬ್ಯಾಟರಾಯನಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮುರುರೇಶ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು ಈ ವಿಚಾರದಲ್ಲಿ ಕೊಲೆಯಾದ ಮಂಜುನಾಥ್ ನಡುವೆ ವೈಷಮ್ಯ ಉಂಟಾಗಿ ಜಗಳ ನಡೆದು ಮಧ್ಯ ಪ್ರವೇಶಿಸಿದ ಮಂಜುನಾಥ್ ಭಾವ ರಾಜ ಎಂಬುವರು ಜಗಳ ಬಿಡಿಸಿ ಮುರುಗೇಶ್ ಮೇಲೆ ಹಲ್ಲೆ ಮಾಡಿ ಬೈದು ಕಳುಹಿಸಿದ್ದರು.
ಇದರಿಂದ ಆಕ್ರೋಶಗೊಂಡಿದ್ದ ಮುರುಗನ್ ಅಂಬೇಡ್ಕರ್‍ನಗರದ ಭಾವ ರಾಜನ ಮನೆಯಲ್ಲಿ ಪಾನಮತ್ತನಾಗಿ ಕಳೆದ ನ.22ರಂದು ಮುಂಜಾನೆ ಮಲಗಿದ್ದ ಮಂಜನಾಥ್ ನನ ಮೇಲೆ ಹಲ್ಲೆ ನಡೆಸಿ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದನು. ಬ್ಯಾಟರಾನಪುರ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದ ಮಂಜುನಾಥ್ ಕೊಲೆಯತ್ನ ಬೆದರಿಕೆ ಸೇರಿ ನಾಲ್ಕೈದು ಅಪರಾದ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ.ಈ ಸಂಬಂಧ ಬ್ಯಾಟರಾಯನಪುರ ಪೆಲೀಸರು ಪ್ರಕರಣ ದಾಖಲಿಸಿ ಆರೋಪಿ ಮುರುಗೇಶ್‍ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ದಂಪತಿ ಹತ್ಯೆ:
ಕಾರಿನಲ್ಲಿ ಹೋಗುತ್ತಿದ್ದ ಜಮೀನ್ದಾರ ವೆಂಕಟಪತಿ ಎಂಬುವರನ್ನು ಅಪಹರಿಸಿದ ದುಷ್ಕರ್ಮಿಗಳು ಕತ್ತು ಬಿಗಿದು ಭೀಕರವಾಗಿ ಕೊಲೆ ಚಿನ್ನಾಭರಣಗಳನ್ನು ದೋಚಿ ಮಾಡಿ ಮೃತದೇಹವನ್ನು ರಸ್ತೆ ಬದಿ ಎಸೆದು ಹೋಗಿರುವ ದುರ್ಘಟನೆ ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ದೊಡ್ಡಬಳ್ಳಾಪುರದ ಸಿಆರ್‍ಪಿಎಫ್ ಕಡೆಯಿಂದ ಮಾವಳ್ಳಿಪುರ ಕಡೆಗೆ ಹೋಗುವ ರಸ್ತೆಯಲ್ಲಿ ಶುಕ್ರವಾರ ಮಧ್ಯ ರಾತ್ರಿ 1.30ರ ಸುಮಾರಿನಲ್ಲಿ ವೆಂಕಟಪತಿ (52) ಅವರ ಮೃತದೇಹ ಪತ್ತೆಯಾಗಿದೆ.
ಮೃತರ ಕೈಯಲ್ಲಿದ್ದ 8 ಉಂಗುರಗಳು, ಚಿನ್ನದ ಸರ, ಬ್ರಾಸ್‍ಲೈಟ್, ರಾಡ್‍ವಾಚ್‍ನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದು ಪ್ರಕರಣ ಭೇದಿಸಿ ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.
ಸಂಪಿಗೆಹಳ್ಳಿಯ ವೆಂಕಟೇಶ್‍ಪುರದಲ್ಲಿ ಕೋಟ್ಯಾಂತರ ಮೌಲ್ಯದ 3 ಎಕರೆಗೂ ಹೆಚ್ಚಿನ ಜಮೀನನ್ನು ಹೊಂದಿದ್ದ ವೆಂಕಟಪತಿ ಅವರು ಶುಕ್ರವಾರ ಮಧ್ಯಾಹ್ನ 2ರ ಸುಮಾರಿನಲ್ಲಿ ತಮ್ಮ ಬ್ರಿಜಾ ಕಾರಿನಲ್ಲಿ ಹೋಗಿದ್ದಾರೆ. ಅವರ ಕಾರು ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ.
ಕಾರಿನಲ್ಲಿ ಹೋದ ವೆಂಕಟಪತಿ ತಡರಾತ್ರಿಯಾಗುತ್ತಿದ್ದರೂ ಮನೆಗೆ ವಾಪಾಸ್ ಆಗಲಿರಲಿಲ್ಲ. ಸಂಬಂಧಿಕರು, ಸ್ನೇಹಿತರ ಮನೆಗಳಲ್ಲಿ ವಿಚಾರಿಸಿದಾಗ ಎಲ್ಲೂ ಪತ್ತೆಯಾಗದಿದ್ದರಿಂದ ಆತಂಕಗೊಂಡ ಅವರ ಅಳಿಯ ಅವಿನಾಶ್, ಸಂಪಿಗೆಹಳ್ಳಿ ಪೆÇಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಈ ನಡುವೆ ಮಧ್ಯರಾತ್ರಿ 1-30ರ ವೇಳೆ ಮಾವಳ್ಳಿಪುರಕ್ಕೆ ಹೋಗುವ ರಸ್ತೆಯಲ್ಲಿ ಕೊಲೆಯಾಗಿರುವ ಅಪರಿಚಿತ ಶವ ನೋಡಿದ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಯಲಹಂಕ ಉಪನಗರ ಪೊಲೀಸರು ಪರಿಶೀಲನೆ ನಡೆಸಿದಾಗ ಮೃತದೇಹದ ಜೇಬಿನಲ್ಲಿ ಬ್ಯಾಟರಾಯನಪುರದಲ್ಲಿ ಚಿನ್ನ ಅಡವಿಟ್ಟದ ಚೀಟಿ ಪತ್ತೆಯಾಗಿದೆ.
ಅದನ್ನು ಪರಿಶೀಲಿಸಿದಾಗ ವೆಂಕಟಪತಿಯರ ಹೆಸರು, ವಿಳಾಸ ಪತ್ತೆಯಾಗಿದ್ದು, ಮನೆಯವರನ್ನು ಕರೆಸಿ ತೋರಿಸಿದಾಗ ಮೃತದೇಹದ ಗುರುತು ಹಿಡಿದಿದ್ದಾರೆ. ವೆಂಕಟಪತಿಯರಿಗೂ ಅವರ ಅಣ್ಣನಿಗೂ ಜಮೀನು ವಿವಾದವಿದ್ದ ಕೋಟ್ಯಾಂತರ ಮೌಲ್ಯದ ಜಮೀನಿಗಾಗಿ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು ಇದು ಇಲ್ಲವೆ ಅವರ ಬಳಿಯಿದ್ದ ಚಿನ್ನಾಭರಣಗಳನ್ನು ದೋಚಲು ಅಪಹರಿಸಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿರುವ ಯಲಹಂಕ ಉಪನಗರ ಪೊಲೀಸರು ಕೃತ್ಯ ನಡೆಸಿದ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
