ರಸ್ತೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಮನವಿ

0
12

ಹರಿಹರ

      ನಗರದ ಧ.ರಾ.ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನ ಹಾಗೂ ರಸ್ತೆ ತಗ್ಗುಗುಂಡಿಗಳಿಂದ ಕೂಡಿದ್ದು, ಕುಡಲೆ ರಸ್ತೆಗಳನ್ನು ದುರಸ್ತಿಪಡಿಸಬೇಕು ಎಂದು ಆಗ್ರಹಿಸಿ ಕಾಲೇಜಿನ ವಿದ್ಯಾರ್ಥಿಘಟಕದ ಪದಾಧಿಕಾರಿಗಳು ನಗರಸಭೆ ಅಧ್ಯಕ್ಷೆಆರ್. ಸುಜಾತ ಅವರಿಗೆ ಮನವಿ ಸಲ್ಲಿಸಿದರು.

      ಸಂಘದ ಅಧ್ಯಕ್ಷಡಿ.ಪಿ.ಸುಚೇತಾ ಮಾತನಾಡಿ, ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಧ.ರಾ.ಮಪದವಿ ಪೂರ್ವಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜಿನ ಸುತ್ತಮುತ್ತಲಿನ ಮೈದಾನ ಹಾಗೂ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಮಳೆ ಬಂದಾಗ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ತರಗತಿಗೆ ತೆರಳಲು ಪರದಾಡುವಂತಾಗುತ್ತಿದ್ದು ವಾಹನ ಸವಾರರಿಗೂ ಅಪಘಾತಗಳು ಸಂಭವಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.

      ವಿದ್ಯಾರ್ಥಿಗಳಿಗಾಗಿ ಕಾಲೇಜಿನ ರಸ್ತೆ ಹಾಗೂ ಮೈದಾನಕ್ಕೆ ನಗರಸಭೆ ವಿಶೇಷ ಅನುದಾನದಲ್ಲಿ ಮಣ್ಣನ್ನು ಸಮತಟ್ಟಗೊಳಿಸಿ ರಸ್ತೆ ದುರಸ್ತಿ ಮಾಡಿಸಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಆನುಕೂಲತೆ ಮಾಡಿಕೊಡುವಂತೆ ಮನವಿ ಮಾಡಿಕೊಂಡರು.

ವಿದ್ಯಾರ್ಥಿ ಘಟಕದ ಎನ್. ಕೃಷ್ಣ, ವೆಂಕಟೇಶ್ ಭೋವಿ, ದರ್ಶನ್, ಬಿ.ಆರ್. ವಿಶಾಲ್, ಶಂಶಾಕ್ ಪೂಜಾರ್, ಎನ್.ಬಿ. ಮದನ್, ಬಿ.ರಾಘವೇಂದ್ರ, ಎ. ಕಿರಣ್, ಭರತ್, ಗಗನ್ ಹಾಗೂ ಉಪಸ್ಥಿತರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here