ಏಕತೆಗಾಗಿ ಓಟ ಕಾರ್ಯಕ್ರಮ

ಹರಿಹರ :

         ರಾಜಕೀಯ ಚಾಣಕ್ಯ ಹಾಗೂ ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರದಾರ ವಲ್ಲಭಭಾಯಿ ಪಟೇಲ ಅವರ ಆದರ್ಶಗಳನ್ನು ಪ್ರತಿಯೊಬ್ಬ ಭಾರತೀಯರು ಪಾಲಿಸುವದು ಅತಿ ಅವಶ್ಯವಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

          ನಗರದಲ್ಲಿ ಬಿಜೆಪಿ ನಗರ ಘಟಕ ಆಯೋಜಿಸಿದ್ದ ಏಕತೆಗಾಗಿ ಓಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ರಾಷ್ಟ್ರಭಕ್ತಿ ಮತ್ತು ರಾಷ್ಟ್ರೀಯತೆ ಹೆಚ್ಚಲು ರಾಷ್ಟ್ರ ನಿರ್ಮಾಪಕ ದೇಶದ ಪ್ರಥಮ ಉಪ ಪ್ರಧಾನಮಂತ್ರಿ, ಗೃಹ ಸಚಿವ ಸರ್ದಾರ ಪಟೇಲರ ಜನ್ಮ ದಿನದ ಅಂಗವಾಗಿ ಸರ್ದಾರ ಪಟೇಲರು ದಿಟ್ಟತನದಿಂದ ದೇಶದಲ್ಲಿ ಒಗ್ಗಟ್ಟು ನಿರ್ಮಾಣವಾಯಿತು. ಸುಮಾರು 556 ಸಂಸ್ಥಾನಗಳನ್ನು ಒಂದುಗೂಡಿಸಿ ವಿಶಾಲ ಭಾರತವನ್ನು ನಿರ್ಮಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.

          ಕಾರ್ಯಕ್ರಮದಲ್ಲಿ ಬಿಜೆಪಿ ಉಪಾಧ್ಯಕ್ಷ ಹೆಚ್.ಎಸ್. ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ತುಳಜಪ್ಪ ಭೂತೆ, ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಕಾಟ್ವೆ, ನಗರಸಭೆ ಸದಸ್ಯೆ ಅಂಬುಜಾ ರಾಜೋಳಿ, ನೀತಾ ಮೆಹರ್ವಾಡೆ, ಚಂದ್ರಶೇಖರ್ ಪೂಜಾರ್, ಅಜಿತ್ ಸಾವಂತ್, ಬಾತಿ ಚಂದ್ರಶೇಖರ್, ಬಿ. ಮೋತ್ಯಾ ನಾಯಕ್, ಪ್ರಶಾಂತ್, ದಿನೇಶ್, ರಾಜಣ್ಣ, ನಂದಕುಮಾರ್, ಸುನೀಲ್ ಕುಮಾರ್, ರಾಜು ಐರಣಿ, ರಾಜು ಖಿರೋಜಿ, ರಾಜೇಶ್ ವರ್ಣೆಕರ್ ಮತ್ತು ರಾಚಪ್ಪ ಮುಂತಾದವರು ಭಾಗವಹಿಸಿದ್ದರು.

         ಮಹಜೇನಹಳ್ಳಿ ಗ್ರಾಮ ದೇವತೆ ದೇವಸ್ಥಾನದಿಂದ ಹೊರಟ ಏಕತಾ ಓಟವು, ಮುಖ್ಯ ರಸ್ತೆಗಳ ಮೂಲಕ ಮಹಾತ್ಮ ಗಾಂಧಿ ವೃತ್ತಕ್ಕೆ ಆಗಮಿಸಿ ಮುಕ್ತಾಯವಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link