ಬೆಂಗಳೂರು
ಕೆಲವು ತಾಂತ್ರಿಕ ಸಮಸ್ಯೆಗಳಿಂದ ತಡೆಹಿಡಿದಿರುವ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ವೇತನ ಪರಿಷ್ಕರಣೆಯ ಅಧಿಕೃತ ಆದೇಶ ಒಂದೆರಡು ದಿನಗಳಲ್ಲಿ ಜಾರಿ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಇಂಜಿನಿಯರ್ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು .ಅಗ್ನಿಶಾಮಕ ದಳ ಮತ್ತು ಬಂಧಿಖಾನೆ ಸಿಬ್ಬಂದಿಗಳಿಗೆ ರಾಘವೇಂದ್ರ ಔರಾದ್ಕರ್ ಸಮಿತಿ ವರದಿಯನ್ನು ಅನ್ವಯ ಮಾಡಲು ನಿರ್ಧರಿಸಿರಲಿಲ್ಲ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡು ಎರಡೂ ಇಲಾಖೆಗಳ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ವೇತನ ಪರಿಷ್ಕರಣೆ ಮಾಡಲು ನಿರ್ಧರಿಸಲಾಗುವುದು ಎಂದರು.
ಆರನೇ ವೇತನ ಆಯೋಗಕ್ಕೆ ಸಂಬಂಧಪಟ್ಟಂತೆ ಕೆಲವು ಅಂಶಗಳನ್ನು ಪರಿಗಣಿಸಲಾಗಿದೆ. ಈಗಾಗಲೇ ಆದೇಶ ಜಾರಿಯಾಗಬೇಕಿತ್ತು. ಕೆಲವು ತಾಂತ್ರಿಕ ಅಂಶಗಳಿಂದಾಗಿ ವಿಳಂಬವಾಗಿದೆ. ಎರಡು ದಿನಗಳೊಳಗಾಗಿ ಆದೇಶ ಜಾರಿಯಾ ಗಲಿದೆ. ಯಾರಿಗೆ ಎಷ್ಟು ಪ್ರಮಾಣದ ವೇತನ ಏರಿಕೆಯಾಗಲಿದೆ ಎಂಬುದನ್ನು ಸರ್ಕಾರ ಪ್ರಕಟಿಸುವ ವರದಿಯಲ್ಲೇ ನಮೂದಿಸಲಾಗುವುದು ಎಂದು ತಿಳಿಸಿದರು.
ಸಂಚಾರಿ ನಿಯಮ ಉಲ್ಲಂಘನೆಗಿರುವ ದಂಡದ ಪ್ರಮಾಣವನ್ನು ಕಡಿಮೆ ಮಾಡುವುದು ಸಾರಿಗೆ ಇಲಾಖೆ ಜವಾಬ್ದಾರಿ. ಅದಕ್ಕೂ ನಮಗೂ ಸಂಬಂಧವಿಲ್ಲ. ಅವರು ಕಡಿಮೆ ಮಾಡಿದರೆ ನಾವು ಜಾರಿ ಮಾಡುತ್ತೇವೆ. ಈಗಿರುವ ನಿಯಮಾನುಸಾರದಂತೆ ನಾವು ಕೆಲಸ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








