ಹೊಸಪೇಟೆ :
ನಗರದ ಭಟ್ರಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಟೈಗರ್ ಪಂಪಣ್ಣ ಸಂಪಾದಕತ್ವದ ‘ಸಂಜೆ ಹೊಸಪೇಟೆ’ ದಿನಪತ್ರಿಕೆಯು ಲೋಕಾರ್ಪಣೆಗೊಂಡಿತು.
ಹೊಸ ವಿನ್ಯಾಸದೊಂದಿಗೆ ಸ್ಥಳೀಯ ಸುದ್ದಿಗಳಿಗೆ ಮಹತ್ವ ನೀಡಿ ಹೊರ ತಂದ ‘ಸಂಜೆ ಹೊಸಪೇಟೆ’ ಕನ್ನಡ ದಿನಪತ್ರಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್‍ನ ತಾಲೂಕು ಘಟಕದ ಅಧ್ಯಕ್ಷ ಎತ್ನಳ್ಳಿ ಮಲ್ಲಯ್ಯ ಬಿಡುಗಡೆಗೊಳಿಸಿದರು.
ಈ ಸಂಧರ್ಭದಲ್ಲಿ ಸಂಪಾದಕ ಟೈಗರ್ ಪಂಪಣ್ಣ, ಪತ್ರಕರ್ತರ ಸಂಘದ ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾಕುಬಾಳು, ಪತ್ರಕರ್ತರಾದ ಶಶಿಕಾಂತ ಶೆಂಭೆಳ್ಳಿ, ಅನಿಲ್ ಜೋಶಿ, ಅನಂತ ಪಧ್ಮನಾಭ, ಪಿ.ಶ್ರೀನಿವಾಸ, ಶರಣಪ್ಪ, ಕಸಾಪದ ಜಂಬುನಾಥ ಹಿರೇಮಠ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
