ತುಮಕೂರು :
ಶೆಟ್ಟಿ ಹಳ್ಳಿ ಗೇಟ್ ಬಳಿ ಇರುವ ರೈಲ್ವೆ ಅಂಡರ್ ಪಾಸ್ ನಲ್ಲಿ ಕಸ ತುಂಬಿರುವ ಕಾರಣ ದೊಡ್ಡ ವಾಹನಗಳು ಚಲಿಸಿದಾಗ ಏಳುವ ಧೂಳಿನಿಂದ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ತುಂಬಾ ತೊಂದರೆ ಆಗುತ್ತಿದೆ.ಪಾಲಿಕೆಯ ನಿರ್ಲಕ್ಷ್ಯಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ ಮತ್ತು ಪಾಲಿಕೆ ರಸ್ತೆ ಸ್ವಚ್ಚ ಮಾಡಲೆಂದೇ ಖರೀದಿಸಿರುವ ಯಂತ್ರಗಳನ್ನು ಯಾವ ಮಟ್ಟಿಗೆ ಬಳಸುತ್ತೆದೆ ಎಂದು ತಿಳಿಯುತ್ತದೆ ಎಂದು ಸಾರ್ವಜನಿಕರು ಆಕ್ರೋಷ ವ್ಯಕ್ತ ಪಡಿಸಿದ್ದಾರೆ.