ನಿರಂತರಕಲಿಕೆಯಿಂದ ಶ್ರೇಷ್ಠ ಶಿಕ್ಷಕರಾಗಿ : ಬಿ.ಸಿ.ನಾಗೇಶ್

ತಿಪಟೂರು:

    ಕಲಿಕೆ ಎಂಬುದು ನಿರಂತರ ಪ್ರಕ್ರಿಯೇಯಾಗಿದ್ದು ಶಿಕ್ಷಕನು ನಿರಂತರವಾಗಿಕಲಿಕೆಯಲ್ಲಿದ್ದಾಗ ಮಾತ್ರಉತ್ತಮ ಶಿಕ್ಷಕರಾಗುತ್ತಾರೆ ಎಂದು ಶಾಸಕ ಬಿ.ಸಿನಾಗೇಶ್ ತಿಳಿಸಿದರು.

    ನಗರದಸರ್ಕಾರಿ ನೌಕರರ ಭವನದಲ್ಲಿಏರ್ಪಡಿಸಿದ್ದ 133ನೇ ಸರ್ವಪಲ್ಲಿರಾಧಾಕೃಷ್ಣ್‍ಜಯಂತಿನ್ನು ಉದ್ಘಾಟಿಸಿ ಮಾತನಾಡಿದ ಸರ್ವಪಲ್ಲಿರಾಧಾಕೃಷ್ಣನ್‍ಒಬ್ಬ ಶ್ರೇಷ್ಟತತ್ವಜ್ಞಾನಿ ಉತ್ತಮ ಶಿಕ್ಷಕರಾಗಿದ್ದು ಅವರು ಹಾಕಿದ ಮಾರ್ಗದಲ್ಲಿ ನೀವು ಸಾಗುತ್ತಿದ್ದುಅವರ ಆದರ್ಶಗಳನ್ನು ನೀವು ಪಾಲಿಸಿ ನೀವು ಮಹಾನ್ ಶಿಕ್ಷಕರಾಗಿ ಎಂದಅವರು. ನಾವು ಪ್ರತಿಯೊಂದನ್ನುಯಾವಾಗಲುಕಲಿಯುತ್ತಿರುತ್ತೇವೆ ಹಾಗಾಗಿ ಎಲ್ಲರನ್ನು ಗುರುಗಳೆನ್ನಲು ಸಾಧ್ಯವಿಲ್ಲ.

    ಮಾಹಿತಿ ನೀಡುವವರುಅಧ್ಯಾಪಕ, ಮಾಹಿತಿಯೊಂದಿಗೆಜ್ಞಾನ ನೀಡುವವನುಉಪಾಧ್ಯಾಯ, ತಾನು ಓದಿ ತಿಳಿದುಕೊಳ್ಳುವವನು ಪಂಡಿತ, ಒಂದು ವಿಷಯದಲ್ಲಿಜ್ಞಾನ ಮತ್ತುಕುಷಲತೆಯನ್ನು ತಿಳಿಸುವವನು ಆಚಾರ್ಯ, ವಿದ್ಯಾರ್ಥಿಜಿವನದ ಬದಲಾವಣೆಗೆ ಅರ್ಥಕಲ್ಪಸಿಕೊಟ್ಟು ಮುಕ್ತಿ ತೋರಿಸುವವನುಗುರುಎಂದು ತಿಳಿಸಿದ ಅವರುಒಂದುದೇಶದಅಭಿವೃದ್ಧಿಯು ಶಾಲಾ ಕೊಠಡಿಯಲ್ಲಿಯೇಇದೆಎಂದು ಶಿಕ್ಷಣ ತಜ್ಷರು ತಿಳಿಸಿದ್ದಾರೆ. ಒಂದುದೇಶವುಅಭಿವೃದ್ಧಿಯಾಗಬೇಕಾದರೆಅಲ್ಲಿನ ವಿದ್ಯಾಭ್ಯಾಸದ ಮಟ್ಟವು ಪ್ರಮುಖವಾದುದು ಇಂತಹ ದೇಶ ಕಟ್ಟುವ ಕಾಯಕನ್ನು ಆಯ್ಕೆ ಮಾಡಿಕೊಂಡಿರುವ ನಿಮ್ಮಗಳ ಮೇಲೆಯೇ ದೇಶವನ್ನು ಕಟ್ಟುವ ಮಹತ್ಕಾರ್ಯವಾಗ ಬೇಕಿದ್ದು ದೇಶದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ದುಡಿದು ಸಧೃಡ ಭಾರತನ್ನು ನಿರ್ಮಿಸಿ ಎಂದು ಶಿಕ್ಷಕರಿಗೆ ಕರೆನೀಡಿದರು.

     ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿ ಪ್ರಾಚೀನಕಾಲದಲ್ಲಿ ಗುರುಗಳನ್ನು ಹುಡಿಕೊಂಡು ಶಿಕ್ಷಕರು ಹೋಗುತ್ತಿದ್ದರು ಆದರೆ ಇಂದು ಕೊರೊನಾ ಸಂದರ್ಭದಲ್ಲಿ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿರಾಗ ಬಾರದೆಂಬ ಉದ್ದೇಶದಿಂದ ವಿದ್ಯಾಗಮ ಎಂಬ ಯೋಜನೆಯಲ್ಲಿ ವಿದ್ಯಾರ್ಥಿಗಳು ಇರುವಲ್ಲಿಗೆ ಶಿಕ್ಷಕರು ದಾವಿಸಿ ಪಾಠವನ್ನು ಮಾಡುತ್ತಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ಶಿಕ್ಷಕರ ಕಾರ್ಯ ಮಹತ್ತರವಾದುದು ಎಂದು ತಿಳಿಸಿದ ಅವರು ಶಿಕ್ಷಕರು ಒಬ್ಬ ಸಾಮಾನ್ಯ ವಿದ್ಯಾರ್ಥಿಯನ್ನು ಅತ್ಯುನ್ನತ ಹುದ್ದೆಯ ಸ್ಥಾನಗಳಿಸಲು ಶಿಕ್ಷಕರು ಕಾರಣ, ಯಾವುದೇ ವ್ಯಕ್ತಿ ಇಂದು ಒಳ್ಳೆಯ ಸ್ಥಾನದಲ್ಲಿ ಇದ್ದಾರೆ ಎಂದರೆ ಅದಕ್ಕೆ ಶಿಕ್ಷಕರೆ ಕಾರಣ ಇಂತಹ ವೃತ್ತಿಯಲ್ಲಿ ಇರುವ ನಾವೆಲ್ಲರು ಉತ್ತಮ ಸಾಮಾಜ ನಿರ್ಮಿಸಲು ಮುಂದಾಗಿ ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ನೀಡಿ ದೇಶದ ಭವಿಷ್ಯವನ್ನು ಉಜ್ವಲಗೊಳಿಸಿ ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಲು ಪಣ ತೊಡೋಣವೆಂದು ಶಿಕ್ಷಕರಿಗೆ ಕರೆ ನೀಡಿದರು.

     ಸರಳ ಸಮಾರಂಭದಲ್ಲಿ ಸೀಮಿತ ಸಂಖ್ಯೆಯಲ್ಲಿ ಶಿಕ್ಷಕರು ಮತ್ತು ಗಣ್ಯರನ್ನು ಥರ್ಮಲ್‍ಸ್ಕಾನ್ ಮಾಡಿ ಸ್ಯಾನೀಟೈಸರ್ ನೀಡಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡ ಅಚ್ಚು ಕಟ್ಟಾದ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ದಿಗ್ವಿಜಯ ಬೋಡ್ಕೆ, ತಹಸೀಲ್ದಾರ್ ಚಂದ್ರಶೇಖರ್, ತಾ.ಪಂ.ಅಧ್ಯಕ್ಷ ಶಿವಸ್ವಾಮಿ, ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಜಿ.ಪಂ. ಸದಸ್ಯರಾದ ಜಿ.ನಾರಾಯಣ್, ಭಾಗ್ಯಮ್ಮ ಗೋವಿಂದಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಇ. ರಮೇಶ್, ಶಿಕ್ಷಣ ಸಂಯೋಜಕರಾದ ಮಂಜುನಾಥ್, ಮಹೇಂದ್ರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap