ಬಳ್ಳಾರಿ
ಲೋಕಸಭಾ ಅಭ್ಯರ್ಥಿ ಯಾದ ದೇವೇಂದ್ರಪ್ಪ ಅವರ ಚುನಾವಣಾ ಪ್ರಚಾರಕ್ಕೆ ಇಂದು ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಚೇಳ್ಳಗುರ್ಕಿ ಎರ್ರಿತಾತ ಸ್ವಾಮಿಯ ದರ್ಶನ ಪಡೆದು. ಕುರುಬರ (ಹಾಲುಮತಸ್ಥರ) ಮನೆಯಲ್ಲಿ ಮತ ಯಾಚಿಸುವ ಮೂಲಕ ಹಾಗೂ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಶ್ರೀರಾಮುಲು ಅವರು ಹಾಗೂ ಮಾಜಿ ಸಂಸದರಾದ ಪಕೀರಪ್ಪ ಅಣ್ಣನವರು,ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೃತ್ಯುಂಜಯ ಜಿನಗ, ರೈತ ಮೋರ್ಚಾ ಉಪಾಧ್ಯಕ್ಷರಾದ ಎಸ್ ಗುರುಲಿಂಗನ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮಲಿಂಗಪ್ಪ ಮತ್ತು ತಿಮ್ಮಾರೆಡ್ಡಿ,ಮುರಹರಿ ಗೌಡ, ಗ್ರಾಮಾಂತರ ಕ್ಷೇತ್ರದ ಮುಖಂಡರಾದ ಶ್ರೀ ಓಬಳೇಶ್, ಮಾಜಿ ಜಿಲ್ಲಾ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಿ ಗೌಡ ಹಾಗೂ ಮಂಡಲ ಅಧ್ಯಕ್ಷರಾದ ಚಡೇಗೌಡ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್,ಗ್ರಾಮಾಂತರ ಕ್ಷೇತ್ರದ ಬಿ.ಎಲ್.ಎ-1 ಶ್ರೀನಿವಾಸ್ ಹಾಗೂ ಪಕ್ಷದ ಕಾರ್ಯಕರ್ತ ಮುಖಂದರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ