ಅಕ್ರಮ ಮದ್ಯ ಮಾರಾಟ ತಡೆಗೆ ಸೂಕ್ತ ಕ್ರಮ : ಡಾ.ವಂಶಿಕೃಷ್ಣ

ಮಧುಗಿರಿ

     ತಾಲೂಕಿನಾದ್ಯಂತ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿರುವುದು ವಿಷಾದನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಂಶಿಕೃಷ್ಣ ತಿಳಿಸಿದರು.

      ಪಟ್ಟಣದ ದರ್ಗಾ ರಸ್ತೆಯಲ್ಲಿರುವ ಮುಸ್ಲಿಂ ಸಮೂದಾಯ ಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಧುಗಿರಿ ವೃತ್ತದ ಜನ ಸಂಪರ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ರಮ ಮದ್ಯ ಮಾರಾಟ ತಡೆಯುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಅವಶ್ಯವಿರುವ ಕಡೆ ಲೋಕೋಪಯೋಗಿ ಇಲಾಖೆಯೊಂದಿಗೆ ಚರ್ಚಿಸಿ ಹಂಪ್‍ಗಳನ್ನು ನಿರ್ಮಿಸಲಾಗುವುದೆಂದು ತಿಳಿಸಿದರು.

     ತಾಲೂಕಿನಲ್ಲಿ ಕೆಲವೆಡೆ ಮಾದಕ ವಸ್ತುಗಳ ಬಳಕೆ ನಡೆಯುತ್ತಿದೆ ಎಂಬ ವಿಚಾರ ಕೇಳಿ ಅಚ್ಚರಿಯಾಯಿತು ಇದರ ವಿಚಾರವಾಗಿ ಕ್ರಮ ಕೈಗೊಳ್ಳಲಾಗುವುದು. ಸರಗಳ್ಳತನ. ಕುಡುಕರ ಹಾವಳಿ, ರೌಡಿಗಳ ದಬ್ಬಾಳಿಕೆಯ ಬಗ್ಗೆ ನಿಗಾ ಇಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು ಅವರು, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಕಾರ್ಯಾಚರಣೆ ತರುವ ನಿಟ್ಟಿನಲ್ಲಿ ಸಾರ್ವಜನಿಕರು ಯಾವುದೇ ರೀತಿಯಲ್ಲೂ ಭಯ ಪಡದೆ ತಮ್ಮ ದೂರು ದುಮ್ಮಾನಗಳನ್ನು ಪೊಲೀಸರಿಗೆ ತಿಳಿಸಬೇಕೆಂದರು.

      ಯುವಕರ ಪಡೆ ನಿರ್ಮಿಸಿ ಪೊಲೀಸರೊಂದಿಗೆ ಗಸ್ತು ತಿರುಗುವ ವ್ಯವಸ್ಥೆಯನ್ನು ಮತ್ತು ”ಕಲ್ಪತರು” ಎಂಬ ಮಹಿಳಾ ಪಡೆ ಪ್ರಾರಂಭ ಮಾಡಲಿದ್ದು, ಈ ಪಡೆಯ ಮೂಲಕ ಕೌಟುಂಬಿಕ ದೌರ್ಜನ್ಯ ಮತ್ತು ಮಹಿಳೆಯರಿಗಾಗುವ ಅನ್ಯಾಯಗಳ ಎದುರಿಸುವ ಸಾಮಥ್ರ್ಯವನ್ನು ಕಲ್ಪಿಸಲಾಗುವುದೆಂದರು.

    ಪುರಸಭಾ ಸದಸ್ಯ ಎಂ.ಎಲ್.ಗಂಗರಾಜು, ನಾರಾಯಣ್, ಮಂಜುನಾಥ್, ಮುಖಂಡರಾದ ಎಂ.ಎಸ್ ಶಂಕರನಾರಾಯಣ, ಎಸ್.ಬಿ.ಟಿ ರಾಮು, ಮಂಜುನಾಥ್, ಉಪನ್ಯಾಸಕರಾದ ಎಂ.ನಾಗಪ್ಪ, ದಿವಾಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಜೀವಿಕ ಸಂಘಟನೆಯ ಡಿ.ಟಿ.ಸಂಜೀವಮೂರ್ತಿ, ಜಯ ಕರ್ನಾಟಕ ಸಂಘಟನೆಯ ಚಂದನ್, ರಾಘವೇಂದ್ರ ಇನ್ನಿತರರು ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ಮಾತನಾಡಿದರು .

     ಡಿವೈಎಸ್ಪಿ ಎಸ್.ಪಿ.ಧರಣೀಶ್, ಸಿಪಿಐ ದಯಾನಂದ ಸೇಗುಣಸಿ, ಪಿಎಸೈ ರವೀಂದ್ರ, ಪಾಲಾಕ್ಷಪ್ರಭು, ಮಂಗಳಗೌರಮ್ಮ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link