ಸುರೇಶ್ ಗೌಡ ಹೇಳಿಕೆಗೆ ಉಗ್ರ ಖಂಡನೆ

ಮಧುಗಿರಿ

      ಮಾಜಿ ಶಾಸಕ ಬಿ.ಸುರೇಶ್‍ಗೌಡ ಮಾಜಿ ಪ್ರಧಾನಿ ಮತ್ತು ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೆಗೌಡರ ಹಾಗೂ ಮಾಚಿ ಸಚಿವ ಸಿ.ಚನ್ನಿಗಪ್ಪರ ಕುರಿತ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಮಧುಗಿರಿ ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಕೇಬಲ್ ಸುಬ್ಬು ತಿಳಿಸಿದ್ದಾರೆ.

       ಮಾಜಿ ಶಾಸಕ ಬಿ.ಸುರೇಶ್‍ಗೌಡ ಮಾಜಿ ಪ್ರಧಾನಿಯಾದ ಹೆಚ್.ಡಿ.ದೇವೇಗೌಡರವರ ವಿರುದ್ದ ಹೇಳಿಕೆ ನೀಡುವಷ್ಟು ರಾಜಕೀಯವಾಗಿ ಬೆಳೆದಿಲ್ಲ. ಅವರು ರಾಜಕೀಯ ಪ್ರವೇಶ ಮಾಡಿದಾಗ ಇವರು ಇನ್ನೂ ಹುಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ. ಅವರ ವಿರುದ್ದ ರಾಜಕೀಯ ಹಸುಳೆಯಾಗಿರುವ ಬಿ. ಸುರೇಶ್‍ಗೌಡ ಅವರು ದೇವೇಗೌಡರು ಗ್ರಾಮವನ್ನು ಪ್ರವೇಶಿಸಿದರೆ ದೊಣ್ಣೆಗಳ ಮೂಲಕ ಸ್ವಾಗತ ಕೋರಿ ಎಂಬ ಹೇಳಿಕೆ ಅವರ ಗೂಂಡಾ ಸಂಸ್ಕೃತಿಯನ್ನು ತೋರಿಸುತ್ತದೆ.

       ಓರ್ವ ಕನ್ನಡಿಗ ಪ್ರಧಾನಿಯಾಗುವಷ್ಟರ ಮಟ್ಟಿಗೆ ರಾಜಕೀಯ ಉತ್ತುಂಗ ಏರಿದ್ದಾರೆ. ಅಂತಹವರು ಗ್ರಾಮಕ್ಕೆ ಬರುತ್ತಿದ್ದಾರೆಂದರೆ ಪಕ್ಷಾತೀತವಾಗಿ ಭವ್ಯವಾಗಿ ಸ್ವಾಗತಿಸಬೇಕು. ಅಂತಹವರ ಬಗ್ಗೆ ಮಾತನಾಡುವಾಗ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ದೇವೇಗೌಡರ ಅಪಾರ ಅಭಿಮಾನಿಗಳಿಗೆ ನೋವುಂಟಾಗಿ ಸಿಡಿದೇಳುವ ಕಾಲ ದೂರವಿಲ್ಲ.

       ಮತ್ತೆ ನಾಲಿಗೆ ಹರಿಯಬಿಟ್ಟಿದ್ದು, ದೇವೆಗೌಡರು ಬಂದರೆ ಸ್ವಾಗತಿಸಿ, ಮತ ಮಾತ್ರ ಹಾಕಬೇಡಿ ಎಂದು ಹೇಳುವ ನೀವು ನಿಮ್ಮ ಪಕ್ಷಕ್ಕೆ ನಿಷ್ಠರಾಗಿರಬೇಕಲ್ಲವೇ? ಈ ಹಿಂದೆ ಬಿಎಸ್‍ವೈ ವಿರುದ್ದ ಹೇಳಿಕೆ ನೀಡಿದ್ದೀರಿ. ನೀವು ಎಂಎಸ್‍ಐಎಲ್ ಅಧ್ಯಕ್ಷ ಹಾಗೂ ಶಾಸಕ ಡಿಸಿ ಗೌರಿಶಂಕರ್ ವಿರುದ್ದ ಮತಿಭ್ರಮಣೆ ಆದ ರೀತಿ ವರ್ತಿಸಿದ್ದೀರಿ. ಇದೇ ರೀತಿ ಮುಂದುವರೆದರೆ ಜೆಡಿಎಸ್ ಕಾರ್ಯಕರ್ತರ ಅಕ್ರೋಶಕ್ಕೆ ಗುರಿಯಾಗಬೇಕಾದಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap