ವಿವಿಧ ಬೇಡಿಕೆಗಳಿಗಾಗಿ ಫೆ.16ರಂದು ಶಿಕ್ಷಕರ ಪ್ರತಿಭಟನೆ

0
15

ದಾವಣಗೆರೆ:

     ಶಿಕ್ಷಕರ ವರ್ಗಾವಣೆ ಹಾಗೂ ಪದವೀಧರರು ಮತ್ತು ಇತರೆ ಶಿಕ್ಷಕರಿಗೆ ಬಡ್ತಿ ಆರಂಭಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫೆ.16ರಂದು ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪ್ರಾಥಮಿಕ
ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎನ್.ತಿಪ್ಪೇಶ್ಪಪ್ಪ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ. ಇದರಿಂದ ಕೂಡಲೇ ಪ್ರಾರಂಭಿಸಬೇಕು
ಎಂದರು. 

     ನೂತವಾಗಿ ಜಾರಿಗೆ ತಂದಿರುವ ಪಿಂಚಣಿ ಯೋಜನೆಯು ನೌಕರರಿಗೆ ಮರಣ ಶಾಸನದಂತೆ ಇದೆ. ಇದನ್ನು ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಮುಖ್ಯೋಪಾಧ್ಯಾಯರುಗಳಿಗೆ, ಬಡ್ತಿ ಹೊಂದಿದವರಿಗೆ 10, 15, 20, 25, 30 ವರ್ಷಗಳ ಆರ್ಥಿಕ ಸೌಲಭ್ಯ ನೀಡಬೇಕು. ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆಗಳನ್ನು
ಬಗೆಹರಿಸಬೇಕು, ಶಿಕ್ಷಕರನ್ನು ಬಿಎಲ್‍ಓ ಹಾಗೂ ಇನ್ನಿತರ ಶಿಕ್ಷಕೇತರರ ಕಾರ್ಯಗಳಿಂದ ಮುಕ್ತಗೊಳಿಸಬೇಕೆಂದು ಅಂದಿನ ಪ್ರತಿಭಟನೆಯಲ್ಲಿ ಆಗ್ರಹಿಸಿ ಮನವಿ ಸಲ್ಲಿಸಲಾಗುತ್ತದೆ ಎಂದರು. 

     ಫೆ.16ರಂದು ಮಧ್ಯಾಹ್ನ 12ಕ್ಕೆ ಜಿಲ್ಲಾಧಿಕಾರಿಗಳು ಮುಖ್ಯದ್ವಾರದ ಮುಖ್ಯರಸ್ತೆಯ ಮೂಲಕ ಆಡಳಿತ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಮನವಿ ಸಲ್ಲಿಸಲಾಗುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಪಾಲ್ಗೊಳ್ಳ
ಬೇಕೆಂದು ಮನವಿ ಮಾಡಿದರು. 
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೇಶಿ ಎಂ, ಉಪಾಧ್ಯಕ್ಷ ಹೆಚ್.ಕೆ.ಚಂದ್ರಶೇಖರ್, ಸಹಕಾರ್ಯದರ್ಶಿ ಚಂದ್ರಪ್ಪ, ಖಜಾಂಚಿ ಶಿವಮೂರ್ತಿ, ಗಂಗಾಧರ ನಾಯ್ಕ್, ಖೈರುನ್ನಿಸಾ, ಪ್ರಕಾಶ್, ಓಮಕಾರಪ್ಪ, ಕಾಶಿಬಾಬು, ಕೆ.ಕರಿಬಸಯ್ಯ, ಕೆ.ಇ.ವೇದಮೂರ್ತಿ, ದೇವೇಂದ್ರಪ್ಪ, ಸೈಯದ್ ನಜೀರ್ ಅಹ್ಮದ್, ಶಾಮಣ್ಣ, ಅಜ್ಜಪ್ಪ, ಮಹೇಶ್ವರಪ್ಪ ಆರ್.ಹೆಚ್, ಗುರುಮೂರ್ತಿ ಸೇರಿದಂತೆ ಮತ್ತಿತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here