ಚಿತ್ರದುರ್ಗ :
12ನೇ ಶತಮಾನದ ಬಸವಣ್ಣರ ಕಾಲದಲ್ಲಿ ಸಮಾಜದಲ್ಲಿ ಸಮಾನತೆ ಮತ್ತು ವೈಚಾರಿಕತೆಗೆ ಹೆಚ್ಚು ಪ್ರಾಧಾನ್ಯತೆ ಇತ್ತು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಅಭಿಪ್ರಾಯ ಪಟ್ಟರು ನಗರದ ಶ್ರೀ ಮುರುಘರಾಜೇಂದ್ರ ಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ (ರಿ) ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಮೂವತ್ತನೇ ವರ್ಷದ ಮೊದಲನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು
21ನೇ ಶತಮಾನದಿಂದ 12ನೇ ಶತಮಾನಕ್ಕೆ ಹೋದಾಗ ಅಣ್ಣ ಬಸವಣ್ಣನವರ ಕಾಲದಲ್ಲಿ ಇಂತಹ ವಿವಾಹಗಳು ನಡೆಯುತ್ತಿದ್ದವು. ಇಂದು ಅವರು ನಮಗೆ ದಾರಿದೀಪವಾಗಿದ್ದಾರೆ. ಅಲ್ಲಿ ಯಾವುದೇ ಜಾತಿ ಇಲ್ಲ ನಾವೆಲ್ಲರೂ ಒಂದು ಎನ್ನುವ ಭಾವನೆ ಇತ್ತು ಎಂದರು ಈಗ ಪುಷ್ಯಮಾಸ.
ಈ ತಿಂಗಳಲ್ಲಿ ಮದುವೆ ನಡೆಯುವುದಿಲ್ಲ. ಮದುವೆಯಾದವಳು ಅತ್ತೆಯ ಮುಖ ನೋಡಬಾರದು ಎಂಬ ಪ್ರತೀತಿ ಇದೆ. ಆದರೆ ಶ್ರೀಮಠದಲ್ಲಿ ಈ ಮಾಸದಲ್ಲಿ ವಿವಾಹವನ್ನು ನೆರವೇರಿಸುತ್ತ ಮುರುಘಾ ಶರಣರು ಎಲ್ಲರಿಗೂ ಮಾದರಿಯಾಗಿದ್ದಾರೆ. ಬಸವಣ್ಣನವರು ಸ್ವರ್ಗ-ನರಕ ಬೇರಿಲ್ಲ ಕಾಣಿರೋ ಅದು ನಮ್ಮ ಮನೆಯಲ್ಲೇ ಇದೆ ಎಂದು ಸಾರಿದ್ದಾರೆ. ಗಂಡ-ಹೆಂಡಿರು ವಿಶ್ವಾಸದಿಂದ ಬದುಕನ್ನು ಸಾಗಿಸಿರಿ ಎಂದರು.
ಕಳೆದ 20 ವರ್ಷಗಳಿಂದ ಶ್ರೀಮಠದ ಸಂಪರ್ಕದಲ್ಲಿದ್ದು ಶ್ರೀಗಳವರ ಆಶೀರ್ವಾದಿಂದ ಈ ಹಂತಕ್ಕೆ ಬಂದಿz್ದÉೀನೆ. ಕೆಲವು ವರ್ಷಗಳ ಹಿಂದೆ ಹೊಸವರ್ಷವನ್ನು ನಮ್ಮ ಊರಿನಲ್ಲಿ ಮುರುಘಾ ಶರಣರು ಬಡಮಕ್ಕಳ ತಲೆಗೆ ಎಣ್ಣೆ ಹಚ್ಚುವ ಮೂಲಕ, ಆಹಾರ, ತಿಂಡಿ ಕೊಡುವುದರ ಮೂಲಕ ಆಚರಿಸಿದ್ದನ್ನು ಸ್ಮರಿಸಿದರು.
ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಹಸಿವು, ಬಡತನ ವಿಶ್ವವ್ಯಾಪಿಯಾದುದು. ಹಸಿವು ಮುಕ್ತವಾಗಬೇಕಾದರೆ ಬಸವಾದಿ ಶರಣರು ಹಾಕಿಕೊಟ್ಟಿರುವ ಶ್ರಮಸಂಸ್ಕøತಿಗೆ ಒಳಗಾಗಬೇಕು ಎಂದು ನುಡಿದರು ಅಮೆರಿಕಾದಂಥ ರಾಷ್ಟ್ರದಲ್ಲಿಯೂ ಬಡತನ ಇದೆ. ಇದು ಭಯಾನಕವಾದುದು ಯಾರೂ ಸಹ ಹಸಿವಿನಿಂದ ಬಳಲಬಾರದು. ಅಂಥವರಿಗೆ ಒಂದಿಷ್ಟು ಅನ್ನ ಕೊಡುವುದು ನಮ್ಮ ಸಂಸ್ಕøತಿಯಾಗಬೇಕು ಎಂದು ನುಡಿದರು.
ಅಕ್ಕಿಆಲೂರಿನ ಚೆನ್ನವೀರೇಶ್ವರ ವಿರಕ್ತಮಠದ ಶ್ರೀ ಶಿವಬಸವ ಸ್ವಾಮಿಗಳು ಮಾತನಾಡಿ, ಇದೊಂದು ಪವಿತ್ರವಾದ ಕಾರ್ಯಕ್ರಮ. ಹಲವರು ಜ್ಯೋತಿಷ್ಯವನ್ನು ನೋಡಿ ಮದುವೆಯಾಗುತ್ತಾರೆ ಆದರೆ ಬಸವಾದಿ ಶರಣರು ಯಾವುದನ್ನೂ ನಂಬುತ್ತಿರಲಿಲ್ಲ. ಅದುವೇ ನಿಜವಾದ ಬಸವ ಪಥ. ತನ್ನ ಬದುಕನ್ನು ನಡೆಸಲಾರದವನು ಇನ್ನೊಬ್ಬರ ಬದುಕನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಇಂತಹ ಕಲ್ಯಾಣದಿಂದ ಸಮಾಜ ಕಲ್ಯಾಣವಾಗುತ್ತದೆ. ಇಲ್ಲಿ ಮದುವೆಯಾದವರು ಯಾವೊತ್ತಿಗೂ ಆದರ್ಶ ದಂಪತಿಗಳಾಗಿರುತ್ತಾರೆ. ಯಾರೂ ಸಹ ವರದಕ್ಷಿಣೆ ತೆಗೆದುಕೊಂಡು ಮದುವೆಯಾಗಬಾರದು. ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯಅತಿಥಿ ಕೃಷಿ ಮಾರುಕಟ್ಟೆ ನಿರ್ದೇಶಕ ಸಿ.ಎಸ್. ಕರಿಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಸಾಲ ಮಾಡಿ ಮದುವೆ ಮಾಡುತ್ತಾರೆ. ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಒಳಗಾಗುತ್ತಾರೆ. ಸರಳ ಸಾಮೂಹಿಕ ವಿವಾಹ ಇದು. 12ನೇ ಶತಮಾನದ ಪರಂಪರೆ. ಬಸವಣ್ಣನ ನಾಡಿನಲ್ಲಿ ಯಾವ ಜಾತಿ ಇಲ್ಲ. ನವ ವಧುವರರು ಮಿತವ್ಯಯ ಮಾಡಿಕೊಂಡು ಜೀವನ ಸಾಗಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಒಂದು ಅಂತರ್ ಜಾತಿ ವಿವಾಹವು ಸೇರಿದಂತೆ 9 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೇ ಸಂದರ್ಭದಲ್ಲಿ ಗಂಗಾವತಿಯ ವಾಣಿಜ್ಯೋದ್ಯಮಿ ಸುರೇಶ್ ಸಿಂಗನಾಳ ಅವರನ್ನು ಸನ್ಮಾನಿಸಲಾಯಿತು. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಶಂಕರಜೊಲ್ಲೆ, ಕಾರ್ಯಕ್ರಮ ದಾಸೋಹಿಗಳಾದ ಶ್ರೀಮತಿ ಅಶ್ವತ್ಥಲಕ್ಷ್ಮಿ ಎಸ್.ಎ. ಸುಬ್ರಮಣ್ಯಶೆಟ್ಟಿ ಮತ್ತು ಮಕ್ಕಳು ದೊಡ್ಡಬಳ್ಳಾಪುರ ವೇದಿಕೆಯಲ್ಲಿದ್ದರು.
ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮಿಗಳು, ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಕೆ.ಪಿ.ಮಧುಸೂದನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ, ಪ್ರಭಾಕರ್, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಪಾಪಣ್ಣ, ಕೆಇಬಿ ಷಣ್ಮುಖಪ್ಪ, ಪರಮೇಶ್, ಪೈಲ್ವಾನ್ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.ಜಮುರಾ ಕಲಾವಿದರು ಪ್ರಾರ್ಥಿಸಿದರು. ಪ್ರದೀಪ್‍ಕುಮಾರ್ ಸ್ವಾಗತಿಸಿದರು. ಬಸವರಾಜೇಂದ್ರ ಶಾಸ್ತ್ರಿಗಳು ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ