ಮೂರು ನೀರಾವರಿ ಯೋಜನೆಗಳಿಂದ ತಾಲೂಕಿನ ಕೆರೆಗಳಿಗೆ ನೀರು

ಚಿಕ್ಕನಾಯಕನಹಳ್ಳಿ :

    ತಾಲ್ಲೂಕಿಗೆ ದೊರೆತಿರುವ ಯೋಜನೆಗಳಿಂದ ನೀರನ್ನು ಕೆರೆಗಳಿಗೆ ಹರಿಸಿ, ಯಾವ ರೀತಿ ತಾಲ್ಲೂಕನ್ನು ಅಭಿವೃದ್ದಿ ಪಥದತ್ತ ಕರೆದೊಯ್ಯಬೇಕು ಎಂಬುದನ್ನು ಸಮರ್ಥವಾಗಿ ಸಚಿವ ಜೆ.ಸಿ.ಮಾಧುಸ್ವಾಮಿಯವರ ಅರಿತಿದ್ದಾರೆ ಎಂದು ತಾ.ಪಂ.ಸದಸ್ಯ ಸಿಂಗದಹಳ್ಳಿ ರಾಜ್ ಕುಮಾರ್ ಹೇಳಿದರು.

   ತಾಲ್ಲೂಕಿನ ಬರಶಿಡ್ಲಹಳ್ಳಿಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ನೂತನ ಅಂಗನವಾಡಿಗೆ ಶಂಕಸ್ಥಾಪನೆ ನೆರವೇರಿಸಿದ ವೇಳೆ ಮಾತನಾಡಿದರು.ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಭದ್ರಾಮೇಲ್ದಂಡೆ, ಎತ್ತಿನಹೊಳೆ, ಹೇಮಾವತಿ ಈ ಮೂರು ಯೋಜನೆಗಳ ಮೂಲಕ ನೀರನ್ನು ತಾಲ್ಲೂಕಿಗೆ ಹರಿಸಬಹುದು ಎಂಬುದನ್ನು ಹಾಗೂ ಕೆಲವು ಯೋಜನೆಗಳಿಂದ ನೀರು ತಾಲ್ಲೂಕಿಗೆ ತಪ್ಪಲಿದೆ ಎಂಬುದನ್ನು ತಿಳಿದ ಸಚಿವರು ಕೂಡಲೇ ಯೋಜನೆಗಳತ್ತ ಗಮನಿಸಿ ತಾಲ್ಲೂಕಿಗೆ ನೀರು ಹರಿಯುವಂತೆ ಅಧಿಕಾರಿಗಳಿಗೆ ಯೋಜನೆ ರೂಪಿಸುವಂತೆ ತಿಳಿಸಿದರು ಎಂದರು.

    ಗುಡ್ಡಗಾಡು ಪ್ರದೇಶಗಳ ಅಭಿವೃದ್ದಿಗೆ ಸಚಿವರು ಆಧ್ಯತೆ ಮೇಲೆ ಗಮನ ಹರಿಸುತ್ತಾರೆ ಅದರಂತೆ ನಮ್ಮ ಭಾಗದಲ್ಲಿನ ಕಾಮಗಾರಿ, ಕೆಲಸ ಕಾರ್ಯಗಳಿಗೂ ಹೆಚ್ಚಿನ ಒತ್ತು ನೀಡುತ್ತಾರೆ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶಂಕರಲಿಂಗಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap