ಮೈಸೂರು:
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜಯಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ರೈತರು ಹಾಗೂ ಸಾರ್ವಜನಿಕರೇ ಸರ್ಕಾರಕ್ಕೆ ದಿನಸಿ, ತರಕಾರಿ ಮುಂತಾದ ಆಹಾರ ಸಾಮಗ್ರಿಗಳ ದೇಣಿಗೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಎಲೆಕೋಸು, ಬಾಳೆಹಣ್ಣು ಇತರೆ ಹಣ್ಣು ತರಕಾರಿ ಹಾಗೂ ದಿನಸಿ ಸಾಮಗ್ರಿಗಳನ್ನು ತಮ್ಮ ಹುಟ್ಟುಹಬ್ಬದ ದಿನದ ಪ್ರಯುಕ್ತ ಇಲ್ಲವೇ ಈ ಕೋವಿಡ್ ಸೋಂಕಿನ ವಿಶೇಷ ಸಂದರ್ಭದಲ್ಲಿ ಕೆಲ ಜನಪ್ರತಿನಿಧಿಗಳು ಇವುಗಳನ್ನು ರೈತರ ಹೊಲಗಳಿಂದ ನೇರವಾಗಿ ಕೊಂಡು ತಂದು ಅವರವರ ಕ್ಷೇತ್ರದಲ್ಲಿ ಹಂಚಿಕೆ ಮಾಡಿದರೆ ಇಂತಹ ಕಾರ್ಯಗಳಿಂದ ರೈತರಿಗೆ ಹಾಗೂ ಬಡವರಿಗೆ ಅನುಕೂಲವಾಗಲಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಹಾಗೆಯೇ ರೈತರನ್ನು ಮಾತನಾಡಿಸಿದ ಸಚಿವರು, ಬೆಳೆಗಳ ಸ್ಥಿತಿಗತಿಗಳನ್ನು ವಿಚಾರಿಸಿದರು. ಜೊತೆಗೆ ಸರ್ಕಾರಕ್ಕೆ ತರಕಾರಿ, ದಿನಸಿಗಳನ್ನು ದೇಣಿಗೆಯಾಗಿ ನೀಡಿದ ರೈತರನ್ನು ತಾಯಿ ಚಾಮುಂಡೇಶ್ವರಿ ಕಾಪಾಡಲಿ, ಅವರಿಗೆ ಅಭಿವೃದ್ಧಿಯನ್ನುಂಟು ಮಾಡಲಿ ಎಂದು ಸಚಿವರು ಕೋರಿಕೊಂಡರು.
ಸರ್ಕಾರದಿಂದ ಜನತೆಗೆ ವಿತರಣೆ
ಜಿ.ಟಿ.ದೇವೇಗೌಡರು ಕ್ಷೇತ್ರದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತರಕಾರಿ, ದಿನಸಿಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ತಲುಪಿಸಿದ್ದಾರೆ. ಇದನ್ನು ಜಿಲ್ಲಾಧಿಕಾರಿಗಳು ಮತ್ತವರ ತಂಡ ಅಗತ್ಯ ಇರುವ ಜನರಿಗೆ ತಿಳಿಸುವ ಕೆಲಸ ಮಾಡಲಿದೆ ಎಂದು ಸಚಿವರು ತಿಳಿಸಿದರು.
80 ಮಂದಿ ತಬ್ಲಿಗಿಗಳಲ್ಲಿ 8 ಮಂದಿಗೆ ಸೋಂಕು ದೃಢಪಟ್ಟಿದೆ. ಅವರು ಎಲ್ಲೆಲ್ಲಿ ಹೋಗಿದ್ದಾರೋ ಅಲ್ಲಲ್ಲಿ ಪತ್ತೆಹಚ್ಚಿ ಅಂತವರನ್ನು ಪರೀಕ್ಷೆಗೊಳಪಡಿಸುವ ಕಾರ್ಯ ಆಗುತ್ತಿದೆ. ಅದೂ ಆದರೆ ಮೈಸೂರು ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂದು ಸಚಿವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








