ಕೊಟ್ಟೂರು
2019 ರ ಲೋಕಸಭಾ ಚುನಾವಣೆಯೆ ಬಿಜೆಪಿಗೆ ಕೊನೆಯ ಚುನಾವಣೆ ಆಗಲಿದೆ. ಆ ಚುನಾವಣೆಯ ನಂತರ ಬಿಜೆಪಿ ಪೂರ್ಣಪ್ರಮಾಣದಲ್ಲಿ ಅಧಿಕಾರದಿಂದ ದೂರ ಸರಿಯುವುದು ಬಹುತೇಕ ಖಚಿತ ಎಂದು ಕಾಂಗ್ರೇಸ್ ಹಿರಿಯ ಮುಖಂಡ ಸಂಸದ ಕೆ.ಎಂ ಮುನಿಯಪ್ಪ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಬಣಕಾರ ಮೆಣಸಿನಕಾಯಿ ಅಂಗಡಿಯಲ್ಲಿ ಲೋಕಾಭಿರಾಮವಾಗಿ ಮೆಣಸಿಕಾಯಿ,ಮಂಡಕ್ಕಿ ಸವಿಯುತ್ತ ಸುದ್ದಿಗಾರರೊಂದಿಗೆ ಮಾತನಾಡಿzರು,
ಈಗಾಗಲೇ ರಾಷ್ಟ್ರದ ಬಹುತೇಕ ರಾಜ್ಯಗಳಲ್ಲಿ ನಡೆದ ಲೋಕಸಭಾ ಮತ್ತು ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯ ಅವನತಿಯತ್ತ ಸಾಗಿರುವುದು ಸ್ಪಷ್ಟವಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಪಶ್ಚಿಮಬಂಗಾಳ, ಕೇರಳಗಳಲ್ಲಿ ಇದರ ಆಸ್ತಿತ್ವ ಅಳೆದು ಹೋಗುತ್ತಿದೆ
ಸಂವಿಧಾನ ಬದಲಾಯಿಸಲು ಹುನ್ನಾರ ನಡೆಸಿರುವ ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕೇಂದ್ರದ ಅಧಿಕಾರ ಪಡೆಯದಂತೆ ತಡೆಹಿಡಿಯುವುದೇ ದಲಿತ ಮತ್ತು ಹಿಂದುಳಿದ ವರ್ಗದವರ ಗುರಿಯಾಗಿದೆ
ಇಡೀ ವಿಶ್ವವೆ ಮೆಚ್ಚುವಂತಹ ಸಂವಿಧಾನವನ್ನು ರಾಷ್ಟ್ರ ನಾಯಕರು ರಚಿಸಿದ್ದು ಇಂತಹ ಮಹೋನ್ನತ ಸಂವಿಧಾನವನ್ನು ಸರಾಸಗಟಾಗಿ ಬದಲಾಯಿಸುತ್ತೇವೆ ಎಂದು ಕೇಂದ್ರದ ಸಚಿವ ಆನಂತಕುಮಾರ್ ಹೆಗಡೆ ಮೂಲಕ ಮೋದಿ ನೇತೃತ್ವದ ಸರ್ಕಾರ ಹೇಳತೊಡಗಿರುವುದು ಬಿಜೆಪಿಯವರ ಅಂತರ್ಯದ ಧೋರಣೆ, ಗುಣವನ್ನು ತೋರಿಸುತ್ತದೆ. ಇದರೊಟ್ಟಿಗೆ ದಲಿತ ಮತ್ತು ಹಿಂದುಳಿದ ವರ್ಗದ ಜನಾಂಗವನ್ನು ಸರ್ವನಾಶಗೊಳಿಸುವ ತಂತ್ರಗಾರಿಕೆಯನ್ನು ಬಿಜೆಪಿಯವರು ಹೊಂದಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಮುಂಬರುವ ಲೋಕಸಭಾ ಚುನಾವಣೆ ಪ್ರಧಾನಮಂತ್ರಿ ಅಭ್ಯರ್ಥಿ ಇದು ಕೇವಲ ಕಾಂಗ್ರೇಸ್‍ನ ಘೋಷಣೆಯಲ್ಲ ಮಹಾಘಟಿಬಂಧನ್‍ನ ಎಲ್ಲ ನಾಯಕರ ಘೋಷಣೆ. ಕಾಂಗ್ರೇಸ್‍ನ ಹಿರಿಯ ನಾಯಕರೊಬ್ಬ ರಾಹುಲ್‍ಗಾಂಧಿ ಪ್ರಧಾನಮಂತ್ರಿ ಅಭ್ಯರ್ಥಿ ಅಲ್ಲ ಎಂದು ಹೇಳಿಲ್ಲ. ಅವರ ಪೂರ್ಣಪ್ರಮಾಣದ ಹೇಳಿಕೆಯಲ್ಲಿ ಈ ಬಗೆಯ ವ್ಯಾಖ್ಯಾನ ಇಲ್ಲವೇ ಇಲ್ಲ. ರಾಹುಲ್‍ಗಾಂಧಿಯವರೇ ಪ್ರಧಾನಮಂತ್ರಿ ಅಭ್ಯರ್ಥಿ. ಈ ಘೋಷಣೆಯಲ್ಲಿ ಯಾವುದೇ ಅಪಸ್ವರ, ಬದಲಾವಣೆ ಯಾರಲ್ಲೂ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ನಡೆದಿರುವ ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೇಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾದಿಸಿಲಿದ್ದಾರೆ. ಈಗಾಗಲೇ ಬಿಜೆಪಿ ಅಭ್ಯರ್ಥಿಗಳನ್ನು ಜನತೆ ತಿರಸ್ಕರಿಸಿರುವುದು ಪ್ರಚಾರ ಸಭೆಯಲ್ಲಿ ವ್ಯಕ್ತವಾಗುತ್ತಿದೆ ಎಂದ ಅವರು ಬಳ್ಳಾರಿಯಲ್ಲಿ ಉಗ್ರಪ್ಪನವರ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು.
ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಎಚ್.ಆಂಜಿನೇಯ, ಕಾಂಗ್ರೇಸ್ ಜಿಲ್ಲಾದ್ಯಕ್ಷ ಬಿ.ವಿ ಶಿವಯೋಗಿ, ಡಿ.ಸಿ.ಸಿ ಉಪಾಧ್ಯಕ್ಷ ಪಿ.ಹೆಚ್ ದೊಡ್ಡರಾಮಣ್ಣ, ಕೊಟ್ಟೂರು ಕಾಂಗ್ರೇಸ್ ಅಧ್ಯಕ್ಷ ಎ.ಎಂ ಮಲ್ಲಿಕಾರ್ಜುನ, ಎ.ಪಿ.ಎಂ.ಸಿ ಅಧ್ಯಕ್ಷ ಬೂದಿ ಶಿವಕುಮಾರ್, ಮುಖಂಡರುಗಳಾದ ದುರ್ಗೇಶ, ಮರಿಸ್ವಾಮಿ, ಖಾನಾವಳಿ ಶಿವಕುಮಾರ, ನಿವೃತ್ತ ಇಂಜಿನಿಯರ್ ಹನುಮಂತಪ್ಪ ಇದ್ದರು.








