ವ್ಯಾಸಭಾರತವನ್ನು ಬರೆದಿದ್ದು ವಾಲ್ಮಿಕಿ : ಕಾಂಗ್ರೇಸ್ ಶಾಸಕ

ದಾವಣಗೆರೆ:

       ಹರಿಹರದ ಶಾಸಕ ರಾಮಪ್ಪ ಭಾಷಣ ಮಾಡುವ ಭರದಲ್ಲಿ ಅಚಾತುರ್ಯದಿಂದ ವ್ಯಾಸಭಾರತ/ಮಹಾಭಾರತ ಬರೆದವರು ವಾಲ್ಮೀಕಿ ಮಹರ್ಷಿಗಳು ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

       ಎಸ್.ರಾಮಪ್ಪ ಅವರು ದೇವರಬೆಳಕೆರೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ ಆಚರಣೆಗೆ ಆಗಮಿಸಿದ್ದ ಻ವರು . ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಡಿದ ಭಾಷಣದಲ್ಲಿ ಮಹಾಭಾರತ ಬರೆದವರು ವಾಲ್ಮೀಕಿ ಎಂದು ಹೇಲುವ ಮೂಲಕ ನಗೆಪಾಟಲಿಗೆ ಗುರಿಯಾಗಿದ್ದಾರೆ. 

ಅಸಲಿಗೆ ರಾಮಪ್ಪ ಹೇಳಿದ್ದಾದರೂ ಏನು?

           ಒಂದು ಕಾಲಕಕ್ಕೆ ಕಳ್ಳತನ, ದರೋಡೆ ಬಿಟ್ಟು ವಾಲ್ಮೀಕಿ ಮಹರ್ಷಿ ಪರಿವರ್ತನೆ ಹೊಂದಿ ಮಾಡಿದ ಸಾಧನೆ ಅದ್ಬುತ. ಅವರು ಭಾರತ ಹಾಗೂ ವಿಶ್ವದ ಜನರಿಗೆ ಮಾರ್ಗದರ್ಶನ ನೀಡುವಂತಹ ಮಹಾಭಾರತ ಬರೆದರು. ಈ ಕೊಡುಗೆ ಒಂದೇ ಸಮಾಜಕ್ಕೆ ಸಿಮಿತವಾಗಿಲ್ಲ, ಎಲ್ಲರಿಗೂ ದಾರಿ ದೀಪವಾಗುತ್ತಿದೆ ಎಂದು ಭಾಷಣ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link