ಹಗರಿಬೊಮ್ಮನಹಳ್ಳಿ:
ಕನ್ನಡ ಪರ ಸಂಘಟನೆ ಎಂದರೆ ಕೇವಲ ನಾಡು ನುಡಿ ಜಲ ಸಂರಕ್ಷಿಸುವುದರ ಜೊತೆ ವನ್ಯಜೀವಿಗಳ ರಕ್ಷಣೆಗೂ ಸದಾ ಸಿಧ್ಧವೆಂದು ಪ್ರವೀಣ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ನಾಣೀಕೇರಿ ಭರಮಜ್ಜ ಹೇಳಿದರು.
ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಹಮ್ಮಿಕೊಂಡಿರುವ “ಪ್ರಾಣಿ ಪಕ್ಷಿಗಳ ನೀರಿನ ದಾಹ ತಣಿಸೋಣ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬೇಸಿಗೆ ಬಂತೆಂದರೆ ಎಲ್ಲಡೆ ನೀರಿನ ಹಾಹಾಕಾರ ಶುರುವಾಗುತ್ತೆ. ಕಾಡುಗಳಲ್ಲಿ ಜಲಮೂಲಗಳು, ಕೆರೆ, ಕುಂಟೆಗಳು ಬರಿದಾಗಿ, ಪ್ರಾಣಿ ಪಕ್ಷಿಗಳು ನೀರಿನ ಸಂಕಷ್ಟ ಎದುರಿಸುತ್ತವೆ. ಇದಕ್ಕೆ ಹಬೊಹಳ್ಳಿಯ ಬೆಣಕಲ್ ಕಾಯ್ದಿಟ್ಟ ಅರಣ್ಯ ಕೂಡ ಹೊರತಲ್ಲ.
ಇಲ್ಲಿನ ಪಕ್ಷಿಗಳು, ಸಣ್ಣ ಪ್ರಾಣಿಗಳು, ಕೀಟಗಳು ಪರಿತಪಿಸುವುದು ಶೋಚನಿಯ ಸಂಗತಿ. ಬೇಸಿಗೆಗೂ ಮೊದಲೇ ಹೆಚ್ಚಿದೆ ತಾಪಮಾನ ಬಿಸಿಲಿನ ಝಳದಿಂದ ಪ್ರಾಣಿ-ಪಕ್ಷಿ ಉಳಿವೂ ಬಹಳ ಮುಖ್ಯ ಎಂದು ತಿಳಿಸಿದರು. ಕಳೆದ ವಾರ ಸ್ಥಳಿಯ ದಾನಿಗಳ ಮತ್ತು ಸ್ನೇಹಿತರ ಸಹಾಯದಿಂದ ದಶಮಾಪುರ ಅರಣ್ಯ ಪ್ರದೇಶದಲ್ಲಿ ನೀರಿನ ತೊಟ್ಟಿ ನಿರ್ಮಿಸಿದ್ದು ಅದರ ಉಪಯೋಗವನ್ನು ಅಲ್ಲಿನ ನವಿಲು, ಗುಬ್ಬಿ, ಅನೇಕ ಪಕ್ಷಿಗಳು ಪಡೆಯುತ್ತಿವೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದರು. ಅದರ ಯಶಸ್ಸಿನಿಂದ ಈ ಭಾಗದಲ್ಲೂ ನೀರಿನ ತೊಟ್ಟಿಯನ್ನು ಮಾಡಿ ಎಂದು ಅನೇಕ ಪಕ್ಷಿಪ್ರೇಮಿಗಳು, ಸ್ಥಳಿಯರ ಸಲಹೆಯ ಮೇರಿಗೆ ನಮ್ಮ ರಕ್ಷಣ ವೇದಿಕೆ ತಂಡ ಈ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದರು.
ಇದೇ ವೇಳೆ ಬದಾಮಿ ಕರಿಬಸವರಾಜ ಮಾತನಾಡಿ ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಹಮ್ಮಿಕೊಂಡಿರುವ “ಪ್ರಾಣಿ ಪಕ್ಷಿಗಳ ನೀರಿನ ದಾಹ ತಣಿಸೋಣ” ಎಂಬ ಶಿರ್ಷಿಕೆಯಡಿ ಮಾಡುತ್ತಿರುವು ಕಾರ್ಯ ಶ್ಲಾಘನೀಯವೆಂದರು.ಇಂದಿನ ಯುವ ಪೀಳಿಗೆಯು ಬೆಟ್ಟಿಂಗ್, ಮೊಬೈಲ್, ಮೋಜುಮಸ್ತಿ, ಸಾಮಾಜಿಕ ಜಾ¯ತಾಣಗಳಲ್ಲಿ ಕಾಲಹರಣಕ್ಕೆ ಬೇಸರ ವ್ಯೆಕ್ತ ಪಡಿಸಿದರು ಆದರೆ ಕರವೇಯ ಯುವಕರು ತಮ್ಮ ಕಾರ್ಯಗಳನ್ನು ಮಾಡುತ್ತ , ವಾರದ ರಜೆಯಾದ ಭಾನುವಾರದಂದು ಒಗ್ಗೂಡಿ ಒಂದು ಅರಣ್ಯ ಪ್ರದೇಶವನ್ನು ಆಯ್ದುಕೊಂಡು ಬೆಳಿಗ್ಗೆಯಿಂದ ಸಂಜೆಯವರೆಗೆ ನೀರಿನ ತೋಟ್ಟಿಗಳನ್ನು ನಿರ್ಮಾಣ ಮಾಡಿ ಪ್ರಾಣಿ ಪಕ್ಷಿಗಳಿಗೆ ನೇರವಾಗುವಂತಹ ಮಾನವೀಯ ಶ್ರಮದಾನ ಮಾಡುವ ಮೂಲಕ ಸ್ಪೂರ್ತಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ವಲಯ ಅರಣ್ಯಾಧಿಕಾರಿ ರವೀಂದ್ರನಾಯ್ಕ ಮಾತನಾಡಿ ಈ ಭಾಗದ ಅರಣ್ಯದಲ್ಲಿ ಅನೇಕ ವಿಶೇಷ ಪ್ರಾಣಿಪಕ್ಷಿಗಳ ಸಂಕುಲವಿದ್ದು ಅವುಗಳಿಗೆ ನೀರಿನ ಅವಶ್ಯಕತೆಯನ್ನು ಒದಗಿಸುವುದು ಮುಖ್ಯ ಧ್ಯೇಯವಾಗಿದ್ದು ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯದ ಜೊತೆಗೆ ಕರ್ನಾಟಕ ರಕ್ಷಣಾ ವೇದಿಕೆಯು ಸ್ಪಂದಿಸಿರುವುದು ಜೀವ ಸಂಕುಲಕ್ಕೆ ಸಹಾಯವಾಗಿದೆ ಎಂದರು.
ಕರವೇಯ ಎಂ. ಸುಭಾಷ್ಚಂದ್ರ ಪ್ರಾಸ್ತಾವಿಕ ನುಡಿಯಾಡಿದರು. ದಾನಿಗಳದ ಬೆಣಕಲ್ ಟಿ.ಹನುಮಂತಪ್ಪ, ಕೆ.ಎಂ. ನವೀನ್, ಜೋಗಿ ಹನುಮಂತಪ್ಪ, ಬಾಬುವಲಿ, ಗುಂಡ್ರು ಹನುಮಂತಪ್ಪ, ಆತೀಫ್, ಪಕ್ಷಿಪ್ರೇಮಿ ವಾರ್ಡನ್ ನಾಗರಾಜ, ಕೆ.ಎಂ.ಶಿವಶಂಕ್ರಯ್ಯ, ಗಣೇಶ್ ರಾಥೋಡ್, ಮಡಿವಾಳರ ಸೋಮಣ್ಣ, ನಭೀ, ಮಾರೇಶ್, ವಾಸಿಂ, ಪಕ್ಕೀರಜ್ಜ, ರಾಜ, ಅರಣ್ಯ ಇಲಾಖೆಯ ಕೋಟ್ರಬಸವನಗೌಡ ಇದ್ದರು.