ತ್ಯಾಜ್ಯ ನೀರು ಮರುಬಳಕೆ ಅತ್ಯಗತ್ಯ : ಪಿ ಸಿ ಮೊಹನ್

ಬೆಂಗಳೂರು

    ನೀರಿಗಾಗಿ ಸಂಕಷ್ಟದ ಸನ್ನಿವೇಶ ಉಂಟಾಗಲಿರುವುದರಿಂದ ತಾಜ್ಯ ನೀರು ಸಂಸ್ಕರಣೆ ಮಾಡಿ ಮರುಬಳಕೆ ಮಾಡುವುದು ಅತ್ಯಗತ್ಯ ಎಂದು ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ತಿಳಿಸಿದರು.ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಮರು ಬಳಕೆಗೆ ಆದ್ಯತೆ ನೀಡಬೇಕು. ಇದಕ್ಕಾಗಿ ತಂತ್ರಜ್ಞಾನಗಳ ಮೊರೆ ಹೋಗಬೇಕು. ಈಗಾಗಲೇ ವಿದೇಶದಲ್ಲಿ ಇದು ಯಶಸ್ವಿಯಾಗಿದೆ. ಹಾಗೆಯೇ ನಮ್ಮಲ್ಲೂ ಇಂತಹ ಬೆಳವಣಿಗೆಗಳು ಆಗಬೇಕು ಎಂದು ಸಲಹೆ ನೀಡಿದರು.

    ನಗರದ ಖಾಸಗಿ ಹೋಟೆಲ್ ನಲ್ಲಿ ಬೆಂಗಳೂರು ಜಲಮಂಡಳಿ ಆಯೋಜಿಸಿದ್ದ, ರಾಜಧಾನಿ ಬೆಂಗಳೂರು ನೀರಿನ ಭವಿಷ್ಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ ೨೧ನೇ ಶತಮಾನದಲ್ಲಿ ನೀರಿನ ಅಭಾವ ತೀವ್ರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

     ಗ್ರಾಮೀಣ ಭಾಗದ ಜನರು ನಗರಪ್ರದೇಶಗಳಿಗೆ ವಲಸೆ ಬರುತ್ತಿರುವುದರಿಂದ ನಗರಗಳಲ್ಲಿ ವಸತಿ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಇದಕ್ಕೆ ಪರಿಹಾರವೆಂದರೆ ತ್ಯಾಜ್ಯ ನೀರು ಸಂಸ್ಕರಿಸಿ ಹೆಚ್ಚು ಬಳಸುವಂತಾಗಬೇಕು ಎಂದು ತಿಳಿಸಿದರು.

     ಅದೇ ರೀತಿ, ಲಭ್ಯವಿರುವ ನೀರನ್ನು ಪ್ರಜ್ಞಾಪೂರ್ವಕ ಬಳಕೆ, ಮನೆಗಳಿಗೆ ಮಳೆನೀರು ಕೊಯ್ಲು ಅಳವಡಿಸಿಕೊಂಡು ಅಂತರ್ಜಲ ಪ್ರಮಾಣ ಹೆಚ್ಚಿಸಿ ಕೊಳ್ಳುವುದು ಹಾಗೂ ಮಳೆ ನೀರನ್ನು ನಿತ್ಯ ಚಟುವಟಿಕೆಗೆ ಬಳಕೆ ಮಾಡುವುದು. ಶುದ್ಧೀಕರಿಸಿದ ನೀರಿನ ಮರುಬಳಕೆಗೆ ಮುಂದಾಗುವುದು ಪ್ರಮುಖ ನೀರು ಸಂರಕ್ಷಣಾ ಮಾರ್ಗಗಳಾಗಿವಿವೆ ಎಂದು ಸಲಹೆ ನೀಡಿದರು.

ನದಿಗಳು ಮಲೀನ

      ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಮಾತನಾಡಿ, ವರ್ಷದಿಂದ ವರ್ಷಕ್ಕೆ ನೀರಿನ ಗುಣಮಟ್ಟದ ಕಡಿಮೆಯಾಗುತ್ತಿದೆ. ಇದಕ್ಕೆ ಪರಿಸರ ಹಾಗೂ ಜೈವಿಕ ಮಾಲಿನ್ಯ ಕಾರಣ. ಅದರಲ್ಲೂ ಬೇಸಿಗೆ ಸಮಯದಲ್ಲಿ ನದಿಗಳು ಹೆಚ್ಚು ಮಲಿನವಾಗುತ್ತಿದ್ದು, ಇದಕ್ಕೆ ಜನರೇ ಕಾರಣರಾಗಿದ್ದಾರೆ.

      ಹವಾಮಾನ ವೈಪರಿತ್ಯದಿಂದ ಮಳೆ ಪ್ರಮಾಣವೂ ಕಡಿಮೆಯಾಗುತ್ತಿದ್ದು, ಅಂತರ್ಜಲ ಕುಸಿಯುತ್ತಿದೆ. ಜನ ನೀರಿನ ಸಂರಕ್ಷಣೆಗೆ ಒತ್ತು ನೀಡದಿದ್ದರೆ ಭವಿಷ್ಯದಲ್ಲಿ ಎಲ್ಲೆಡೆ ನೀರಿನ ಬವಣೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.ಭವಿಷ್ಯದಲ್ಲಿ ಎದುರಾಗಲಿರುವ ಸಮಸ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯತಂತ್ರ ರೂಪಿಸಬೇಕು. ಪ್ರತಿ ಹನಿ ನೀರು ಕೂಡ ಅಮೂಲ್ಯ ವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ, ಬೆಂಗಳೂರು ಜಲಮಂಡಳಿ ಹಾಗೂ ನಗರ ನೀರು ಸರಬರಾಜು ಮಂಡಳಿ ಸೂಕ್ತ ನಿರ್ಣಯ ಕೈಗೊಳ್ಳುವುದು ಅಗತ್ಯ ಎಂದರು

      ಈ ಸಂದರ್ಭಗಳಲ್ಲಿ ಜಲ ಮಂಡಳಿ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಪ್ರಮುಖರು ಪಾಲ್ಗೊಂಡು, ನೀರಿನ ಸಂರಕ್ಷಣೆ ಕುರಿತು ಚರ್ಚೆ ನಡೆಸಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link