ಬ್ಯಾಡಗಿ:
ತಾಲೂಕಿನಾದ್ಯಂತಕುಡಿಯುವ ನೀರಿಗೆತೊಂದರೆಯಾಗದಂತೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಅಗಸನಹಳ್ಳಿ ನಿವಾಸಿಗಳ ಬಹುದಿನಗಳ ಬೇಡಿಕೆಯನ್ನು ಹೊಂಡಕ್ಕೆ ನೀರುತುಂಬಿಸುವ ಮೂಲಕ ಈಡೇರಿಸಲಾಗಿದೆಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದಅಗಸನಹಳ್ಳಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಿರ್ಮಿಸಲಾದ ಹೊಂಡಕ್ಕೆ ನೀರುತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿಅವರು ಮಾತನಾಡಿದರು.ಬೇಸಿಗೆಗೂ ಮುನ್ನವೇತಾಲೂಕಿನಲ್ಲಿಕುಡಿಯುವ ನೀರಿಗೆತೊಂದರೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪಿಡಿಓ ಹಾಗೂ ಅಧಿಕಾರಿಗಳ ಸಭೆಕರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿ ದ್ದೇನೆಎಂದರು.
ಹೊಂಡದಲ್ಲಿಕಾರಂಜಿ ನಿರ್ಮಾಣ:ಹೊಂಡತುಂಬಿಸುವುದರಿಂದ ನಿವಾಸಿಗಳಿಗೆ ನೀರಿನ ಬವಣೆತಪ್ಪಲಿದೆಅಲ್ಲದೇಮುಂದಿನ ದಿನಗಳಲ್ಲಿ ಹೊಂಡದ ಮಧ್ಯದಲ್ಲಿಕಾರಂಜಿ ಅಳವಡಿಸಿ ಹೊಂಡವನ್ನುಇನ್ನಷ್ಟುಆಕರ್ಷಣೀಯವಾಗಿಸಲಾಗುವುದುಎಂದರಲ್ಲದೇ ನಿವಾಸಿಗಳು ಹೊಂಡದ ಸುತ್ತಮುತ್ತಲಿನ ಸ್ವಚ್ಚತೆಯನ್ನು ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.
ಮೂಲ ಭೂತ ಸೌಕರ್ಯಕ್ಕೆಒತ್ತು:ಪುರಸಭೆಅಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಮಾತನಾಡಿ,ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿನ ಪ್ರತಿಯೊಂದು ವಾರ್ಡನಲ್ಲಿ ನೀರಿನಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಮತ್ತುಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನಒತ್ತು ನೀಡಿ ಮೂಲ ಭೂತ ಸೌಲಭ್ಯಗಳನ್ನ ಒದಿಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಪೈಪ್ ಲೈನ್ ಅಳವಡಿಕೆ:ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಮಾತನಾಡಿ, ಪುರಸಭೆಯಲ್ಲಿಅನುದಾನಕೊರತೆಕಾರಣ ನೀಡಿ ಕಳೆದ ಹಲವಾರು ವರ್ಷಗಳಿಂದ ನೆನೆ ಗುದಿಗೆ ಬಿದ್ದಿದ್ದ ಹೊಂಡಕ್ಕೆ,ಕೆಯುಡಿಎಫಸಿ ಅನುದಾನದಲ್ಲಿ ಪೈಪ್‍ಲೈನಗಳನ್ನು ಅಳವಡಿಸಿ ಪುರಸಭೆಒಂದುರೂಪಾಯಿಕೂಡಾಖರ್ಚು ಮಾಡದೇಇಂದು ನೀರು ಹರಿಸುವಕಾರ್ಯಕ್ಕೆಇಂದು ಚಾಲನೆ ನೀಡಲಾಗಿದೆ. ಅಲ್ಲದೇ ಸ್ಥಗಿತಗೊಂಡಿದ್ದಅಗಸನಹಳ್ಳಿ ವಾರ್ಡನಲ್ಲಿನ ಶುದ್ಧಕುಡಿಯುವ ನೀರಿನಘಟಕವನ್ನು ಪ್ರಾರಂಭಿಸಲಾಗಿದೆಎಂದರಲ್ಲದೇ ಸಾರ್ವಜನಿಕರು ಇವುಗಳ ಸಬ್ದಳಕೆ ಮಾಡಿಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆಉಪಾಧ್ಯಕ್ಷೆದ್ರಾಕ್ಷಾಯಣಮ್ಮ ಪಾಟೀಲ, ಸದಸ್ಯರಾದದುರ್ಗೇಶಗೋಣೆಮ್ಮನವರ, ಶಾಂತಮ್ಮ ಬೇವಿನಮಟ್ಟಿ, ನಾರಾಯಣಪ್ಪಕರ್ನೂಲ, ಪ್ರಶಾಂತಯಾದವಾಡ, ನಜೀರಅಹಮ್ಮದ ಶೇಖ್, ಎಂ.ಆರ್.ಭದ್ರಗೌಡ್ರ, ರಾಮಣ್ಣ ಕೋಡಿಹಳ್ಳಿ, ರಾಮಣ್ಣಉಕ್ಕುಂದ, ಬೀರಪ್ಪ ಬಣಕಾರ, ರವೀಂದ್ರ ಪಟ್ಟಣ ಶೆಟ್ಟಿ, ಮಂಜುನಾಥ ಪೂಜಾರ, ಎಲ್.ಶಂಕರ್‍ಸೇರಿದಂತೆಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








