ಬೆಂಗಳೂರು
ಉಬರ್ ಕ್ಯಾಬ್ ಚಾಲಕನೊಬ್ಬ ನನ್ನ ಜತೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.ಕಳೆದ ಶನಿವಾರ ರಂದು ರಾತ್ರಿ ನಡೆದ ಉಬರ್ ಕ್ಯಾಬ್ ಚಾಲಕಿನಿಂದ ಎದುರಾದ ಕಹಿ ಘಟನೆಯಿಂದ ನಿರ್ಜನ ಪ್ರದೇಶದ ರಸ್ತೆಯಲ್ಲಿ ಒಬ್ಬೊಂಟಿಯಾಗಿ ಉಗುಳು ನುಂಗುವ ಪರಿಸ್ಥಿತಿ ಎದುರಾಗಿದ್ದು ಉಬರ್ ಸುರಕ್ಷತಾ ವ್ಯವಸ್ಥೆ ಅಂತ್ಯಂತ ಗೊಂದಲಕ್ಕೀಡುಮಾಡಿದೆ ಎಂದು ಮಹಿಳೆಯು ಹೇಳಿಕೊಂಡಿದ್ದಾರೆ
ಮಹಿಳೆಯು ಸಾಮಾಜಿಕ ಜಾಲತಾಣದಲ್ಲಿ ಇಂದು ನನ್ನ ಜೀವನದ ಅತ್ಯಂತ ಕಹಿಕರವಾದ ಘಟನೆಯನ್ನು ಅನುಭವಿಸಿದೆ. ನನ್ನ ಸಹದ್ಯೋಗಿಯ ಜತೆಯಲ್ಲಿ ರಾತ್ರಿ ಊಟ ಮುಗಿಸಿದ ಬಳಿಕ ಮನೆಗೆ ಹೋಗಲು ಉಬರ್ ಕ್ಯಾಬ್ ಕರೆಸಿಕೊಂಡು ಹೊರಟಿದ್ದಾಗ ತನ್ನ ಸ್ನೇಹಿತನ ಜತೆ ಫೋನ್‍ನಲ್ಲಿ ಮಾತನಾಡುತ್ತಿದ್ದ ಚಾಲಕ ಗ್ರಾಹಕರ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದ.
ಬಳಿಕ ನನ್ನೆಡೆಗೆ ತಿರುಗಿ ಶಿಕ್ಷಿತ ಮಹಿಳೆಯರು ರಾತ್ರಿ 7ಕ್ಕೆ ಕೆಲಸ ಬಿಟ್ಟು ಮನೆ ಸೇರಿಬಿಡಬೇಕು ಎಂದು ಹೇಳಿದ. ಅದಕ್ಕೆ ನಾನು ನಿನ್ನ ಕೆಲಸ ನೀನು ನೋಡಿಕೋ ಎಂದು ಖಾರವಾಗಿ ಹೇಳಿದೆ. ಬಳಿಕ ಸ್ನೇಹಿತನ ಜತೆಯಲ್ಲಿ ಮಾತನಾಡುತ್ತಿದ್ದ ಎಂದು ಬರೆದುಕೊಂಡಿದ್ದಾರೆ.
ಕೊನೆಯಲ್ಲಿ ಕಾರನ್ನು ನಿಧಾನ ಮಾಡಿದ ಚಾಲಕ ಉಬರ್ ಆ್ಯಪ್‍ನಲ್ಲಿರುವ ಸೇಫ್ಟಿ ಬಟನ್ ಅನ್ನು ಒತ್ತುವಂತೆ ಒತ್ತಾಯ ಮಾಡಿದ. ಬಳಿಕ ನನಗೆ ಕರೆ ಮಾಡದೇ ಕಸ್ಟಮರ್ ಕೇರ್‍ನವರು ಚಾಲಕನಿಗೆ ಕರೆ ಮಾಡಿದರು. ಅವರೊಂದಿಗೆ ಮಾತನಾಡಿದ ಆತ ನಾನು ತುಂಬಾ ಕುಡಿದ್ದೇನೆ ಎಂದು ನನ್ನ ವಿರುದ್ಧ ಮಾತನಾಡಿದ.
ಈ ವೇಳೆ ಗೊಂದಲಕ್ಕೀಡಾದ ನಾನು ಬೇರೆ ದಾರಿ ಕಾಣದೆ, ಕಿರುಚಲು ಶುರು ಮಾಡಿದೆ. ನನ್ನ ಧ್ವನಿ ಕೇಳುತ್ತಿದೆಯೇ ಎಂದು ಕಸ್ಟಮರ್‍ಕೇರ್‍ಗೆ ಕೇಳಿದೆ. ಆ ಕಡೆಯಿಂದ ಮಹಿಳೆಯೊಬ್ಬಳು ನನ್ನೊಂದಿಗೆ ಮಾತನಾಡಿದಳು. ಆಗ ನಾನು ಅಳುತ್ತಾ ಸಹಾಯಕ್ಕಾಗಿ ಮನವಿ ಮಾಡಿದೆ. ನೀನು ತಕ್ಷಣ ಕ್ಯಾಬ್‍ಇಳಿ ಮತ್ತೊಂದು ಕ್ಯಾಬ್‍ಬುಕ್ ಮಾಡುತ್ತೇನೆ ಎಂದು ಹೇಳಿದಳು. ಅದೇ ವೇಳೆಯಲ್ಲಿ ಚಾಲಕ ನನಗೆ ಬೆದರಿಕೆಯೊಡ್ಡಲು ಶುರು ಮಾಡಿದ, ಈ ಕ್ಷಣವೇ ನೀನು ಕ್ಯಾಬ್‍ನಿಂದ ಇಳಿಯದಿದ್ದರೆ ನಿನ್ನ ಬಟ್ಟೆಯನ್ನೆಲ್ಲಾ ಹರಿದು ಹಾಕುತ್ತೇನೆ ಎಂದು ಬೆದರಿಸಿದ್ದಾಗಿ ಆರೋಪಿಸಿದ್ದಾಳೆ.
ರಾತ್ರಿ 11.15ರಲ್ಲಿ ಕ್ಯಾಬ್‍ನಿಂದ ಕೆಳಗಿಳಿದೆ. ಅದೇನೂ ಬಿಜೆ ರಸ್ತೆಯಾಗಿರಲಿಲ್ಲ. ನಾನು ಕಸ್ಟಮರ್ ಕಾಲ್ ಮತ್ತು ಮತ್ತೊಂದು ಕ್ಯಾಬ್‍ಗಾಗಿ ಕಾಯುತ್ತಿದ್ದೆ, ಅಲ್ಲದೆ, ಆ ಚಾಲಕ ಮತ್ತೆ ಬಂದು ನನ್ನ ಮೇಲೆ ಹಲ್ಲೆ ಮಾಡಬಹುದು ಎಂದು ಭಯವಾಯಿತು ಎಂದು ತಿಳಿಸಿದ್ದಾಳೆ.ನಂತರ ಉಬರ್ ಮತ್ತೊಂದು ಕ್ಯಾಬ್ ಕಳಿಸದೇ ಯಾವುದೇ ಸಹಾಯ ಮಾಡಲಿಲ್ಲ. ನನ್ನ ಹಣವನ್ನು ಹಿಂತಿರುಗಿಸಲಿಲ್ಲ ಎಂದು ದೂರಿದ್ದಾಳೆ. ಈ ಬಗ್ಗೆ ಉಬರ್ ಕೂಡ ತನಿಖೆಗೆ ಆದೇಶಿಸಿದೆ ಎಂದು ಹೇಳಲಾಗುತ್ತಿದೆ.