ಪುಣೆ: 

ಇದೇ ತಿಂಗಳು ಪ್ರಕಟವಾದ ಪಂಚರಾಜ್ಯ ಚುನಾವಣೆಯ ಫಲಿತಾಂಶದಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದೆ.
ಚುನಾವಣೆಯ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ನಿತಿನ್ ಗಡ್ಕರಿ ಯಶಸ್ಸಿನ ಸಿಕ್ಕರೆ ಅದರ ಹೊಣೆ ಹೊರಲು ಹಲವರು ಸಿದ್ಧರಿರುತ್ತಾರೆ,ಆದರೆ ಗೆಲುವಿನ ಓಟಕ್ಕೆ ಸೋಲು ಎದುರಾದರೆ ಆದರ ಹೊಣೆ ಹೊರುವವರು ಯಾರೊಬ್ಬರೂ ಇರುವುದಿಲ್ಲ ಎಂದು ತಮ್ಮ ಮನದಾಳದ ಅಸಮಾಧಾನ ಹೊರ ಹಾಕಿದ್ದಾರೆ.
ನಾಯಕರು ಯಶಸ್ಸಿನ ಕೀರ್ತಿ ಹೊತ್ತುಕೊಳ್ಳುವುದಕ್ಕೆ ಸಿದ್ಧವಿರುವ ರೀತಿಯಲ್ಲಿ ಸೋಲಿನ ಹೊಣೆ ಹೊತ್ತುಕೊಳ್ಳುವುದಕ್ಕೆ ಮುಂದಾದರೆ ಅವರು ನಿಜವಾದ ಆಶಾವಾಧಿಯಾಗಿ ಉಳಿಯುತ್ತಾರೆ ಎಂದು ತಿಳಿಸಿದ್ದಾರೆ








