ಸಿರಿಗೇರಿ
ಸಮಾಜದ ಅಡಿಪಾಯದಲ್ಲಿ ಸಿಲುಕಿದ ಕಟ್ಟ ಕಡೆಯ ಮನುಷ್ಯನ ಬದುಕಿನ ಧಾವಂತ, ಸಿಟ್ಟು, ದುಃಖ ದುಮ್ಮಾನ ಹಾಗೂ ಭವಿಷ್ಯದ ಕಾಣ್ಕೆಯನ್ನು ಕುರಿತು ಬರೆದ ಸಾಹಿತ್ಯವೇ ದಲಿತ ಸಾಹಿತ್ಯ ಎಂದು ಸಾಹಿತಿ, ಹೋರಾಟಗಾರ ಪಿಅರ್.ವೆಂಕಟೇಶ್ ರವರು
ಸಿರಿಗೇರಿ ಸಮೀಪದ ಮುದ್ದಟ್ಟನೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಬುಧುವಾರ ಸಿರುಗುಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಶ್ರೀಮತಿ ಮುತ್ತಮ್ಮ ಹಿರೇಮನೆ ಮರಿಯಪ್ಪ ಹಾಗೂ ಡಿ. ಮೌಲಾಸಾಹೇಬ್ ದತ್ತಿ ಉಪನ್ಯಾಸ ಕಾರ್ಯಕ್ರದಲ್ಲಿ ‘ದಲಿತ ಸಾಹಿತ್ಯ’ ಕುರಿತ ಉಪನ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದರು.
ದಲಿತ ಸಾಹಿತ್ಯದ ಮೂಲಬೇರುಗಳು ಹಳೆಗನ್ನಡ ಹಾಗೂ ದಾಸ ಸಾಹಿತ್ಯದಲ್ಲಿ ದೊರೆಯುತ್ತಿವೆ. ಆದರೆ ಅವು ಮುನ್ನೆಲೆಗೆ ಬಾರದ ವೈದಿಕ ಧರ್ಮದ ಕಪಿ ಮುಷ್ಟಿಯಲ್ಲಿ ಕಾಣೆಯಾಗಿದ್ದವು. ನಂತರ 12ನೇ ಶತಮಾನದ ಶರಣ ಚಳುವಳಿಯಲ್ಲಿ ದಲಿತರು ಮತ್ತು ದಲಿತೇತರು ಬರೆದ ಸಾಹಿತ್ಯ ಜನಮಾನಸವನ್ನು ಸೂರೆ ಗೊಂಡಿತ್ತು. ದುರಂತೆ ವೆಂದರೆ ನಂತರ ದಿನದಲ್ಲಿ ವೈದ್ಯಿಕೆ ಸಂಸ್ಕøತಿಯ ಆಡಳಿತದ ತುಳಿತಕ್ಕೆ ಒಳಗಾಯಿತು. ಕನ್ನಡ ನಾಡಿನಲ್ಲಿ 70ರ ದಶಕದ ಪ್ರಾರಂಭದಲ್ಲಿ ಮಹರಾಷ್ಟ್ರಾ ದಲಿತ ಪ್ಯಾಂಥರ್ ಸಂಘಟನೆಯ ಸಾಹಿತ್ಯ ಚಟುವಟಿಕೆಗಳ ಪ್ರಭಾವದಿಂದ ದಲಿತ ಸಾಹಿತ್ಯ ಪುನರ್ ಜೀವನಗೊಂಡಿತು ಎಂದರು.
ನಂತರ ಸಂತ ಶಿಶುನಾಳ ಷರೀಪರ ತತ್ವ ಪದ ಹಾಗೂ ಜೀವನ ಮೌಲ್ಯಗಳ ಕುರಿತು ಅಬ್ದುಲ್ ಹೈ ತೋರಣಗಲ್ಲು ಮಾತನಾಡಿ, ಸೂಪಿ ಸಂತರ ಪರಂಪರೆಯನ್ನು ಮುಂದುವರೆಸಿದ ಸಮಾಜದ ಸೌಹಾರ್ದ ಬದುಕನ್ನು ಶಿಶುನಾಳ ಷರೀಪರು ಎತ್ತಿ ಹಿಡಿದಿದ್ದು ಇಂದಿನ ಸೌಹಾರ್ದ ಬದುಕಿಗೆ ಅದರ್ಶವಾಗಿದೆ. ಷರೀಪರು ಮೂಢನಂಬಿಕೆಯನ್ನು ವಿರೋಧಿಸಿ ಮಾನವ ಪ್ರೀತಿಯನ್ನು ತಮ್ಮ ತತ್ವ ಪದಗ¼ ಮೂಲಕ ಎತ್ತಿಹಿಡಿದರು. ಜನ ಸಾಮಾನ್ಯರಲ್ಲಿ ಹಾಸು ಹೊಕ್ಕಾಗಿದ್ದ ಸೌಹಾರ್ಧತೆ ರಕ್ಷಣೆಗೆ ಅವರ ತತ್ವ ಪದಗಳು ಪುಷ್ಟಿ ನೀಡಿವೆ. ಇಂಥಹ ಸಂತನ ಸಂವೇದನೆಯನ್ನು ಮುಂದುವರೆಸು ಅಗತ್ಯ ಇಂದಿನ ಲೇಖಕರ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್‍ಎಂ. ನಾಗರಾಜ ಸ್ವಾಮಿ ವಹಿಸಿ, ಸಾಹಿತ್ಯದ ಮೌಲ್ಯಗಳನ್ನು ಗ್ರಾಮೀಣ ಜನರಿಗೂ ತಿಳಿಸುವ ಉದ್ದೇಶವನ್ನು ಪರಿಷತ್ ಹೊಂದಿದೆ ಎಂದರು.
ನಂತರ ಅಥಿತಿಗಳಾದ ಸರಕಾರಿ ಪ್ರೌಢಶಾಲೆ ಮುಖ್ಯ ಗುರು ಪಿ. ಶ್ರೀಧರ ಮೂರ್ತಿ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ವಿವರಿಸಿದರು
ವೇದಿಕೆಯಲ್ಲಿ ದತ್ತಿ ಉಪನ್ಯಾಸದ ದಾನಿಗಳಾದ ಎಚ್.ಎಂ. ವೀರಸ್ವಾಮಿ, ತಾಪಂ. ಸದಸ್ಯೆ ಶ್ರೀಮಿತಿ ಗಾಯತ್ರಿ ಹೇಮಾರೆಡ್ಡಿ, ಗ್ರಾಮದ ಮುಖಂಡರಾದ ರುದ್ರಮುನಿ ಸ್ವಾಮಿ, ಬಸಪ್ಪ, ಎಸ್‍ಡಿಎಮ್‍ಸಿಯ ದುರುಗೇಶ್, ಕಸಪಾ ಪದಾಧಿಕಾರಿಗಳಾದ ಬಿ.ಮಂಜಣ್ಣ,ವಿ. ನಾಗರಾಜ್.
ಸಮಾಜ ವಿಜ್ಞಾನ ವೇದಿಕೆ ಗೌರವ ಅಧ್ಯಕ್ಷ ವಿ. ಹನುಮೇಶ್ ಇದ್ದರು. ಶಿಕ್ಷಕ ರಾಜ ಸಾಬ್, ನಿರೂಪಿಸಿ ಗಾದಿಲಿಂಗಪ್ಪ, ಸ್ವಾಗತಿಸಿ ಪ್ರಭುಲಿಂಗ ಗಣಾಚಾರಿ ವಂದಿಸಿದರು. ಇದೇ ವೇದಿಕೆಯಲ್ಲಿ ದತ್ತಿ ದಾನಿಗಳು ಉಪನ್ಯಾಸ ನೀಡಿದ ಸಾಹಿತಿಗಳನ್ನು ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ