ರಾಣಿಬೆನ್ನೂರ:
ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಹಚ್ಚಿನ ಅಂಕಗಳನ್ನು ಪಡೆಯುವದರ ಜೊತೆಗೆ, ಕೌಶಲ್ಯಾಭಿವೃದ್ದಿಯನ್ನು ಬೆಳೆಸಿಕೊಂಡು ಕೆ.ಎ.ಎಸ್. ಐ.ಎ.ಎಸ್. ಐ.ಪಿ.ಎಸ್. ಮತ್ತು ಐ.ಎಫ್.ಎಸ್. ಮುಂತಾದ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಸಮಾಜದ ಅಭಿವೃದ್ದಿಗೆ ಶ್ರಮಿಸಬೇಕು ಎಂದು ನಗರಸಭೆಯ ಪರಿಸರ ಅಭಿಯಂತರೆ ಮಂಜುಳಾದೇವಿ ಮುಂಡಾಸದ ಹೇಳಿದರು.
ಇಲ್ಲಿನ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿಧ್ಯಾಲಯದಲ್ಲಿ ಶನಿವಾರ ನಡೆದ ವಿಧ್ಯಾರ್ಥಿ ಒಕ್ಕೂಟ ಉದ್ಘಾಟನೆ ಬಿ.ಎ. ಮತ್ತು ಬಿ.ಕಾಂ. ಪ್ರಥಮ ವರ್ಷದ ವಿಧ್ಯಾರ್ಥಿಗಳ ಸ್ವಾಗತ, ಎನ್.ಎಸ್.ಎಸ್ ಮತ್ತು ರೆಡ್ಕ್ರಾಸ್ ಘಟಕಗಳ ಕಾರ್ಯಕ್ರಮದಲ್ಲಿ ಸಿಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯೇತರ ಚಟುವಟಿಕೆಗಳು ಪರಿಪೂರ್ಣ ವ್ಯಕ್ತಿತ್ವ ರೂಪಿಸಲು ಸಹಾಯಕವಾಗಿವೆ, ಸಂವಹನ ಕಲೆಯು ಇಂದಿನ ದಿನಗಳಲ್ಲಿ ಹೆಚ್ಚಿನ ಮಹತ್ವವಿರುವುದರಿಂದ, ಎಲ್ಲಾ ವಿದ್ಯಾರ್ಥಿನಿಯರು ಎಲ್ಲ ಭಾಷೆಗಳಿಲ್ಲಿ ಪರಿಣಿತರಾಗಬೇಕು, ಪರಿಸರ ಕಾಪಾಡುವುದರ ಜೊತೆಗೆ ಸ್ವಚ್ಚತೆಯ ಕಡೆಗೆ ಗಮನವನ್ನು ಹರಿಸಲು ವಿದ್ಯಾರ್ಥಿನಿಯರು ಮುಂದಾಗಬೇಕು ಎಂದರು.
ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಉಪಧ್ಯಕ್ಷ ವ್ಹಿ.ಪಿ.ಲಿಂಗನಗೌಡರ ಮಾತನಾಡಿ, ಕೆ.ಎಲ್.ಇ. ಸಂಸ್ಥೆಯು ಒದಗಿಸಿದ ಎಲ್ಲಾ ಸವಲತ್ತುಗಳನ್ನು ವಿದ್ಯಾಥಿನಿಯರು ಸದ್ಬಳಕೆಯನ್ನು ಮಾಡಿಕೊಂಡು ಸಂಸ್ಥೆಯ ಹೆಸರನ್ನು ಹೆಚ್ಚಿಸಿ, ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು, ನಗರ ಪ್ರದೇಶಗಳಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ದೊರೆಯಬೇಕೆಂಬುದು ಕೆ.ಎಲ್.ಇ. ಸಂಸ್ಥೆಯ ದೂರದೃಷ್ಟಿಯಾಗಿದೆ ಎಂದರು.
ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಬಿ.ಎಸ್. ಪಟ್ಟಣಶಟ್ಟಿ, ನಗರಸಭೆಯ ಮಾಜಿ ಸದಸ್ಯ ವೀರಣ್ಣ ಅಂಗಡಿ ಮಾತನಾಡಿದರು. ಪ್ರಾಚಾರ್ಯ ಪ್ರೊ. ಎಂ.ವಿ.ಯಲಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷರಾದ ಪ್ರೊ.ಎಸ್.ಬಿ. ಗುರ್ಜೇರ ಪರಿಚಯಿಸಿದರು.
ಬಿ.ಎ.ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ಕು.ಶ್ರೀರಕ್ಷಾ, ಕು.ಲಕ್ಷ್ಮೀ,ಕು. ಪ್ರೀಯಾಕ, ಕು.ರೇಖಾ, ಕು.ಸುವರ್ಣಾ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪ್ರೊ..ಕಾರ್ತಿಕ ಹುಗಾರ, ಶಿಲ್ಪಾ ನಾಯಕ, ಜಿ.ವಿ. ಗಿರಿಜಾ, ಸುಧಾ ಚಕ್ರಸಾಲಿ ಇದ್ದರು. ನಂತರ ಸಾಂಸ್ಕ್ರತಿಕ ಚಟುವಟಿಕೆಗಳು ಜರುಗಿದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
