ವಿದ್ಯಾರ್ಥಿನಿ ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹ

ದಾವಣಗೆರೆ:

         ರಾಯಚೂರಿನಲ್ಲಿ ನಡೆದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಕೊಲೆ ಆರೋಪಿಗಳನ್ನು ತಕ್ಷಣವೇ ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ, ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

          ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ವಿದ್ಯಾರ್ಥಿನಿ ಮಧು ಪತ್ತಾರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತ ಕೃತ್ಯವಾಗಿದ್ದು, ಈ ಕೃತ್ಯವು ಅತ್ಯಂತ ಖಡನೀಯವಾಗಿದೆ. ಕೊಲೆ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ಆಕೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ದೇವದಾಸಿ ಮಹಿಳೆಯರ ಹೆಣ್ಣು ಮಕ್ಕಳಿಗೆ ಸರಕಾರ ನೀಡು ಪ್ರೋತ್ಸಾಹ ಧನದ ಅರ್ಧದಷ್ಟು ಹಣ ಕೊನೆಯ ಪಕ್ಷ 5 ವರ್ಷ ಅವರ ಹೆಸರಿಲ್ಲಿ ಪಿಕ್ಸ್‍ಡ್ ಡಿಪಾಜಿಟ್ ಮಾಡಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

           ಪ್ರತಿಭಟನೆಯಲ್ಲಿ ಟಿ.ವಿ.ರೇಣುಕಮ್ಮ, ಕೆ.ಲಕ್ಷ್ಮೀನಾರಾಯಣ ಭಟ್, ಕೆ.ಶ್ರೀನಿವಾಸಮೂರ್ತಿ, ಎನ.ಮೈಲಮ್ಮ, ಬಿ.ಹಿರಯಮ್ಮ, ಕೆ.ಹೆಚ್.ಆನಂದರಾಜ್, ಇ.ಶ್ರೀನಿವಾಸ ಮೂರ್ತಿ, ದೇವಿರಮ್ಮ, ಚನ್ನಮ್ಮ, ಸೀತಮ್ಮ, ಹುಚ್ಚಮ್ಮ, ಮುತ್ತಮ್ಮ, ರೇಣುಕಾ, ಭಾಗ್ಯ, ಪ್ರಭು ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ