ಮಧುಗಿರಿ :
ಪಟ್ಟಣದ ಎ ಆರ್ ಟಿ ಓ ಕಚೇರಿಯ ಇಲಾಖೆಯ ಮೇಲೆ ಲೋಕಾಯುಕ್ತದ ಸಿಬ್ಬಂದಿಗಳು ಧಿಡೀರ್ ದಾಳಿ ನಡೆಸಿದ್ದಾರೆ.ಇಬ್ಬರು ಮಧ್ಯವರ್ತಿಗಳು ಹಾಗೂ ಇಬ್ಬರು ಅಧಿಕಾರಿಗಳು ದಾಳಿಗೆ ಒಳಗಾಗಿದ್ದಾರೆಂದು ಹೇಳಲಾಗುತ್ತಿದೆ.
ಇಬ್ಬರು ಮಧ್ಯವರ್ತಿಗಳನ್ನು ಕಚೇರಿಯಿಂದ ಹೊರ ಓಡಿ ಹೋಗುತ್ತಿದ್ದಾಗ ಲೋಕಾ ಸಿಬ್ಬಂದಿಗಳು ಹಿಂಬಾಲಿಸಿ ಮಧ್ಯವರ್ತಿಗಳನ್ನು ಬುಧವಾರ ಮಧ್ಯಾಹ್ನ ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದು ಆರ್ ಟಿ ಓ ಇಲಾಖೆಯ ಇಬ್ಬರು ಸಿಬ್ಬಂದಿಗಳ ಹೆಸರು ತಿಳಿದು ಬಂದಿಲ್ಲ ಲೋಕಾಯುಕ್ತರು ತನಿಖೆ ಮುಂದುವರೆಸಿದ್ದಾರೆ.